ಹಿಂದೂ ಜನಜಾಗೃತಿ ಸಮಿತಿಯಿಂದ ಗುರುಪೂರ್ಣಿಮಾ ಮಹೋತ್ಸವ

ಶಿವಮೊಗ್ಗ: ಆಷಾಢ ಹುಣ್ಣಿಮೆ ಅಂದರೆ ಗುರುಪೂರ್ಣಿಮೆ ನಿಮಿತ್ತ ಜು.೩ರ ಸೋಮವಾರದಂದು ಹಿಂದೂ ಜನಜಗೃತಿ ಸಮಿತಿ ಯಿಂದ ಗುರುಪೂರ್ಣಿಮಾ ಮಹೋತ್ಸವದ ಆಯೋಜನೆಯನ್ನು ಮಾಡಲಾಗಿತ್ತು. ಈ ಮಹೋತ್ಸವ ದಲ್ಲಿ ಮರಾಠ ಕ್ಷತ್ರಿಯ ಅಧ್ಯಕ್ಷರು ಶಿವಮೊಗ್ಗ ದಿನೇಶ್ ಚೌಹಾಣ್, ಸನಾತನ ಸಂಸ್ಥೆಯ ಸೌ. ಶಾರದಾ ಯೋಗೀಶ್ ಉಪಸ್ಥಿತರಿದ್ದರು.
ಮಹೋತ್ಸವವು ಶ್ರೀ ವ್ಯಾಸಪೂಜೆ ಮತ್ತು ಪ. ಪೂ. ಭಕ್ತರಾಜ ಮಹಾರಾಜರ ಪ್ರತಿಮೆಯ ಪೂಜೆಯೊಂದಿಗೆ ಆರಂಭವಾಯಿತು. ನಂತರ ಸನಾತನ ಸಂಸ್ಥೆಯ ಸೌ. ಶಾರದಾ ಯೋಗೀಶ್‌ರವರು ಗುರು ಪೂರ್ಣಿಮೆ ನಿಮಿತ್ತ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಸಂದೇಶವನ್ನು ವಾಚಿಸಿದರು.
ಧರ್ಮಶಿಕ್ಷಣ ನೀಡುವ ಮತ್ತು ರಾಷ್ಟ್ರ ಜಗೃತಿ ಮೂಡಿಸುವ ಫಲಕಗಳು, ಆಧ್ಯಾತ್ಮ, ಧರ್ಮಾಚರಣೆ ಮತ್ತು ಸಾಧನೆ ಇನ್ನಿತರ ವಿಷಯಗಳ ಕುರಿತ ಗ್ರಂಥ ಪ್ರದರ್ಶಿನಿಗಳು ಈ ಕಾರ್ಯಕ್ರಮಕ್ಕೆ ಮೆರಗು ನೀಡಿದ್ದವು.