ಸೆ.೬: ಪಕ್ಷದ ನೂತನ ಕಛೇರಿ ಉದ್ಘಾಟನೆ: ಮಹೇಶ್ ಹುಲ್ಮಾರ್
ಶಿಕಾರಿಪುರ : ಪಟ್ಟಣದಲ್ಲಿನ ಪಕ್ಷದ ನೂತನ ಕಚೇರಿಯನ್ನು ಸೆ.೬ ರಂದು ಉದ್ಘಾಟಿಸುವ ಜತೆಗೆ ದೇವರಾಜ್ ಅರಸು ಪ್ರಶಸ್ತಿ ಪುರಸ್ಕೃತ ಹಿರಿಯ ಮುಖಂಡ ಕಾಗೋಡು ತಿಮ್ಮಪ್ಪರವರನ್ನು ಗೌರವಿಸಲಾಗು ವುದು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹೇಶ್ ಹುಲ್ಮಾರ್ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸೆ.೬ರ ಬುಧವಾರ ಪಟ್ಟಣದ ಶಿಶುವಿಹಾರ ರಸ್ತೆಯಲ್ಲಿನ ಪಕ್ಷದ ನೂತನ ಕಚೇರಿಯ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾ ಗಿದ್ದು, ಇದರೊಂದಿಗೆ ೯೨ ವರ್ಷ ವಯಸ್ಸಿನ ಪಕ್ಷದ ಹಿರಿಯರು, ದಿ.ದೇವರಾಜ್ ಅರಸು ಪ್ರಶಸ್ತಿ ಪುರಸ್ಕೃತ, ಮಾಜಿ ಸಚಿವ, ವಿಧಾನ ಸಭೆ ಮಾಜಿ ಸಭಾಪತಿಗಳಾದ ಕಾಗೋಡು ತಿಮ್ಮಪ್ಪರನ್ನು ಗೌರವಿಸಲಾಗುವುದು. ಈ ಸಂದರ್ಭದಲ್ಲಿ ಶಿಕ್ಷಣ ಹಾಗೂ ಜಿ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಶಾಸಕ ಬೇಳೂರು ಗೋಪಾಲಕೃಷ್ಣ, ಸಂಗಮೇಶ್, ಮಾಜಿ ಎಂಎಲ್ಸಿ ಆರ್. ಪ್ರಸನ್ನಕುಮಾರ್, ಮಾಜಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಮಂಜುನಾಥ ಗೌಡ, ಡಿಸಿಸಿ ಅಧ್ಯಕ್ಷ ಸುಂದರೇಶ್ ಮುಖಂಡ ನಗರದ ಮಹಾ ದೇವಪ್ಪ, ಗೋಣಿ ಮಾಲತೇಶ್ ಸಹಿತ ಜಿಯ ಮುಖಂಡರು ಕಾರ್ಯಕರ್ತರು ಪಕ್ಷದ ಬೆಂಬಲ ದಿಂದ ಆಯ್ಕೆಯಾದ ಗ್ರಾ.ಪಂ ನೂತನ ಅಧ್ಯಕ್ಷ ಸದಸ್ಯರು ಪಾಲ್ಗೊಳ್ಳ ಲಿದ್ದಾರೆ ಎಂದು ತಿಳಿಸಿದರು.
ಆ.೩೦ರಂದು ಪಕ್ಷದ ಮಹತ್ವಾಕಾಂಕ್ಷೆಯ ಗೃಹ ಲಕ್ಷ್ಮಿ ಯೋಜನೆಯನ್ನು ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಮೂಲಕ ಚಾಲನೆ ನೀಡಲಿದ್ದು, ಪಟ್ಟಣದ ಪುರಸಭೆ, ತಾ.ಪಂ, ಸರ್ಕಾರಿ ಐಟಿಐ ಕಾಲೇಜ್, ಸಾಂಸ್ಕೃತಿಕ ಭವನದಲ್ಲಿ ಕಾರ್ಯಕ್ರಮದ ನೇರ ಪ್ರಸಾರವನ್ನು ಬೃಹತ್ ಎಲಇಡಿ ಪರದೆಯಲ್ಲಿ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದ್ದು, ಎಲ್ಲೆಡೆ ಉಪಹಾರದ ವ್ಯವಸ್ಥೆಯಿದೆ ಎಂದು ತಿಳಿಸಿದ ಅವರು, ತಾಲೂಕಿನಲ್ಲಿ ಗೃಹಲಕ್ಷ್ಮಿಯೋಜನೆಗೆ ಒಟ್ಟು ೫೧,೧೯೨ ಅರ್ಜಿ ಬಂದಿದ್ದು, ೫೯,೪೬೫ ಪಡಿತರ ಚೀಟಿಗಳಿವೆ. ತಲಾ ರೂ.೨೦೦೦ದಂತೆ ರೂ.೧೦.೨೩ ಕೋಟಿ ರೂಪಾಯಿ ಪಕ್ಷಾತೀತವಾಗಿ ತಾಲೂಕಿನ ಮಹಿಳೆ ಯರಿಗೆ ಜಮಾ ಆಗಲಿದೆ. ಇದರೊಂದಿಗೆ ೪ ಯೋಜನೆಗಳನ್ನು ಸರ್ಕಾರ ಅನುಷ್ಠಾನಗೊಳಿಸಿದ್ದು, ಯುವನಿಧಿಯನ್ನು ಡಿಸೆಂಬರ್ನಲ್ಲಿ ಜರಿಗೊಳಿಸಲಿದೆ. ಪಕ್ಷ ಅಧಿಕಾರ ವಹಿಸಿಕೊಂಡು ೧೦೦ ದಿನದಲ್ಲಿಯೇ ನುಡಿದಂತೆ ನಡೆವ ಪಕ್ಷವಾಗಿದೆ ಎಂದರು.
ಕ್ಷೇತ್ರದ ಶಾಸಕ ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ವತಿಯಿಂದ ತಾಲೂಕು ಬರಪೀಡಿತ ಎಂದು ಘೋಷಿಸಲು ಆ.೨೬ರ ಶನಿವಾರ ತಾಲೂಕು ಕಛೇರಿ ಎದುರು ಪ್ರತಿಭಟನೆ ನಡೆಸಲಾಗಿದ್ದು, ಮುಖ್ಯಮಂತ್ರಿ ಸಿದ್ಧರಾಮಯ್ಯ ನವರು ೨೨ರಂದು ಶಿಕಾರಿಪುರ ಸಹಿತ ರಾಜ್ಯದ ೧೧೩ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲು ಕ್ರಮ ಕೈಗೊಂಡಿದ್ದಾರೆ ಇದರ ಸುಳಿವರಿತ ಶಾಸಕರು ಪ್ರತಿಭಟನೆ ನೆಪ ಮೂಲಕ ರಾಜಕೀಯ ಲಾಭ ಪಡೆಯಲು ಯತ್ನಿಸಿದ್ದಾರೆ ಎಂದು ಆರೋಪಿಸಿದರು.
ಕ್ಷುಲ್ಲಕ ರಾಜಕಾರಣದ ಪರಿಣಾಮವಾಗಿ ಅತ್ಯಲ್ಪ ಮತ ಗಳಿಂದ ಆಯ್ಕೆಯಾಗಿದ್ದು ಇದೇ ರೀತಿ ಪ್ರತಿಬಾರಿ ಸಾಧ್ಯವಿಲ್ಲ ಮತದಾರರು ಪ್ರeವಂತರಿದ್ದು ಲೋಕಸಭಾ ಚುನಾವಣೆಯಲ್ಲಿ ಸೂಕ್ತ ಪಾಠ ಕಲಿಸಲಿzರೆ ಎಂದರು.
ಡಿಸಿಸಿ ಉಪಾಧ್ಯಕ್ಷ ಭಂಡಾರಿ ಮಾಲತೇಶ್ ಮಾತನಾಡಿ, ವಿಧಾನ ಸಭೆಯಲ್ಲಿ ಗ್ಯಾರೆಂಟಿ ಯೋಜನೆ ಬಗ್ಗೆ ಟೀಕಿಸಿದ ಶಾಸಕ ವಿಜಯೇಂದ್ರ, ಇದೀಗ ಪಕ್ಷ ನೀಡಿದ ಎಲ್ಲ ಭರವಸೆಯನ್ನು ಈಡೇರಿಸುತ್ತಿದ್ದು, ಯೋಜನೆಗಳ ಚಾಲನೆಗೆ ಕ್ಷೇತ್ರದ ಪ್ರತಿನಿಧಿಯಾಗಿ ಪಾಲ್ಗೊಂಡು ತಮ್ಮ ಅಭಿಪ್ರಾಯ ವನ್ನು ಸಾರ್ವಜನಿಕವಾಗಿ ತಿಳಿಸುವಂತೆ ಸವಾಲು ಹಾಕಿದರು.
ಡಿಕೆಶಿ ಅಭಿಮಾನಿ ಬಳಗದ ಅಧ್ಯಕ್ಷ ಕಲ್ಮನೆ ಸುರೇಶ್, ರಘುಪತಿ, ತಿಮ್ಮಣ್ಣ, ಮಂಜುನಾಯ್ಕ,ಈಶಪ್ಪ ಕಲವತ್ತಿ, ಬನ್ನೂರು ನಾಗರಾಜ್ ನಾಯ್ಕ, ಮುಷೀರ್ ಅಹ್ಮದ್, ಮುನಿಯಪ್ಪ, ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.