ಸರಳ ಸಜ್ಜನಿಕೆಯ ಸಮರ್ಥ ಆಡಳಿತಗಾರ ಪ್ರೊ| ಬಿ.ಪಿ. ವೀರಭದ್ರಪ್ಪ…

ಶಿಕ್ಷಣ ಕ್ಷೇತ್ರ ಅತ್ಯಂತ ಶ್ರೇಷ್ಠವಾ ದದ್ದು, ಅಕ್ಷರ ಕಲಿಸಿ ಆಗಸದೆತ್ತರಕ್ಕೆ ಬೆಳೆಸುವವರು ಶಿಕ್ಷಕರು, ನಾಡಿನ ಭವಿಷ್ಯದ ನಾಯಕರನ್ನ ರೂಪಿಸುವಂತಹ ಜವಾಬ್ದಾರಿ ಶಿಕ್ಷಕರ ಮೇಲಿರುತ್ತದೆ. ಇಂತಹ ಅಪರೂಪದ ಶಿಕ್ಷಕರಲ್ಲಿ ಒಬ್ಬರು ಪ್ರೊ| ಬಿ.ಪಿ ವೀರಭದ್ರಪ್ಪನವರು.
ಇವರಿಗೆ ಶಿಕ್ಷಣದ ಬಗೆಗೆ ಅಪಾರವಾದ ಒಲವು. ಕರ್ನಾಟಕದ ಹೆಸರಾಂತ ಅರ್ಥಶಾಸ್ತ್ರಜ್ಞರಲ್ಲಿ ಇವರು ಕೂಡ ಒಬ್ಬರು. ೪೨ ವರ್ಷಗಳ ಕಾಲ ಶಿಕ್ಷಣ ಕ್ಷೇತ್ರದಲ್ಲಿ ಅಧ್ಯಯನಕಾರರಾಗಿ ಸಂಶೋಧಕರಾಗಿ ಹಾಗೂ ಸಮರ್ಥ ಆಡಳಿತಕಾರರಾಗಿ ಗುರುತಿಸಿಕೊಂಡಿ zರೆ. ಅಷ್ಟೇ ಅಲ್ಲದೆ ಸರಳ ಸಜ್ಜನಿಕೆಯ ಮಾತೃಹೃದಯಿ ವ್ಯಕ್ತಿತ್ವಕ್ಕೆ ಹೆಸರುವಾಸಿಯಾದವರು.
ಇವರು ೧೯೫೮ರಲ್ಲಿ ಕರ್ನಾಟಕದ ದಾವಣಗೆರೆ ಜಿಯ ಹೊನ್ನಾಳಿ ತಾಲೂಕಿನ ನ್ಯಾಮತಿ ಗ್ರಾಮದಲ್ಲಿ ಜನಿಸಿದರು. ತಂದೆ ತಾಯಿ ಇಬ್ಬರು ಶಿಕ್ಷಕರಾಗಿದ್ದರಿಂದ ಶಿಕ್ಷಣಕ್ಕೆ ಬಹಳಷ್ಟು ಮಹತ್ವ ಕೊಡುತಿದ್ದರು. ಹಾಗಾಗಿ ವೀರಭದ್ರಪ್ಪನವರಿಗೆ ಮೊದಲಿನಿಂದಲೂ ತಂದೆ ತಾಯಿ ಸಂಬಂಧಿಕರು ಹಾಗೂ ಗುರುವೃಂದದವರಿಂದ ಶಿಕ್ಷಣದ ಬಗ್ಗೆ ಬಹಳಷ್ಟು ಪ್ರೇರಪಣೆ ಸಿಗುತಿತ್ತು. ಇವರ ತಂದೆಯವರು ಶಿಕ್ಷಣ ನಮಗೆ ಒಳ್ಳೆಯದನ್ನು ಮಾಡುತ್ತದೆ, ಶಿಕ್ಷಣ ನಮಗೆ ಸಮಾಜಮುಖಿಯಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ, ಶಿಕ್ಷಣ ಕ್ಷೇತ್ರದಲ್ಲಿ ಬೆಳೆಯಬೇಕು, ಶಿಕ್ಷಣ ಕ್ಷೇತ್ರ ದಲ್ಲಿ ಅಸಾಧ್ಯವಾದದ್ದನ್ನ ಮಾಡಬೇಕು ಎಂದು ಯಾವಾಗಲು ಹೇಳುತ್ತಿದ್ದರು. ಅಂತಹ ಪ್ರೇರಣೆಯ ಮಾತುಗಳು ಶಿಕ್ಷಣದ ಮೇಲೆ ಮತ್ತಷ್ಟು ಪ್ರೀತಿಯನ್ನು ಹೆಚ್ಚಿಸಿದ್ದವು. ಶಿಕ್ಷಣವೇ ನಾನು ನಿಮಗೆ ಕೊಟ್ಟಿರುವ ಅತಿದೊಡ್ಡ ಆಸ್ತಿ ಎಂದು ಪದೇ ಪದೇ ಹೇಳುತ್ತಿದ್ದರು.
ತಂದೆ ಶಿಕ್ಷಕರಾಗಿದ್ದರಿಂದ ಶಿಸ್ತಿನ ಪಾಠಗಳನ್ನು ಹೆಚ್ಚು ಕಲಿಸುತ್ತಿದ್ದರು. ಮುಂಜನೆ ೫ ಗಂಟೆಯಿಂದಲೇ ಓದಲು ಕೂರಬೇಕಿತ್ತು. ಹೀಗೆ ಬಾಲ್ಯದಿಂದಲೇ ತಂದೆ ತಾಯಿಯವರಿಂದ ಸಿಕ್ಕಿದಂತಹ ಪ್ರಶಂಸೆ ಹಾಗೂ ಶಿಕ್ಷಕರಿಂದ ಸಿಕ್ಕಿದಂತಹ ಪ್ರೇರಣೆಯ ಮಾತುಗಳು ಪ್ರೊ| ವೀರಭದ್ರಪ್ಪನವರಿಗೆ ಶಿಕ್ಷಣವನ್ನ ಮತ್ತಷ್ಟು ಪ್ರೀತಿಸಲು ಸಹಾಯವಾಯಿತು.
ಪ್ರಾಥಮಿಕ ಹಂತದಲ್ಲಿ ಶಿಕ್ಷಕರು ಕಲಿಸಿದ ಮೌಲ್ಯಗಳನ್ನು ಈಗಲೂ ನೆನೆಯುತ್ತಾರೆ. ತಂದೆಯ ಸ್ನೇಹಿತರೊಬ್ಬರು ಇಂಗ್ಲಿಷ್ ಶಿಕ್ಷಕರಾಗಿದ್ದು ವೀರಭದ್ರಪ್ಪನವರಿಗೆ ಬಹಳಷ್ಟು ಸಹಾಯ ವಾಯಿತು. ತುಂಬಾ ಕಟ್ಟು ನಿಟ್ಟಾಗಿ ಅವರು ಕಲಿಸುತ್ತಿದ್ದರಿಂದ ಬಾಲ್ಯದಲ್ಲಿ ಅವರಿಂದ ಕಲಿತ ಇಂಗ್ಲಿಷ್ ಭಾಷೆಯ ಪಾಠ ಈಗಲೂ ಮನದಲ್ಲಿ ಉಳಿದಿದೆ ಎಂದು ಹೇಳುತ್ತಾರೆ.
ಕಾಲೇಜು ದಿನಗಳಲ್ಲಿ ಲಂಡನ್‌ನ ಲಂಡನ್ ಸ್ಕೂಲ್ ಆಫ್ ಎಕಾನಮಿಗೆ ಹೋದಾಗ. ಅಲ್ಲಿ ೨೦೦ ದೇಶಗಳ ಪ್ರತಿನಿಧಿಗಳನ್ನು ಕುರಿತು ಮಾತನಾಡಿದಾಗ ಬಾಲ್ಯದಲ್ಲಿ ಇಂಗ್ಲಿಷ್ ಭಾಷೆ ಕಲಿಸಿದ ಗುರುಗಳನ್ನು ನೆನೆಸಿಕೊಂಡಿದ್ದರಂತೆ. ಪ್ರೊ| ವೀರಭದ್ರಪ್ಪನವರು ಶಿವಮೊಗ್ಗ ಜಿಯ ಸಾಗರ ತಾಲೂಕಿನ ಪ್ರತಿಷ್ಠಿತ ಎಲ್.ಬಿ.ಎಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿ. ಬಿ.ಎ. ಪದವಿಯನ್ನು ಪಡೆದುಕೊಂಡಿರುತ್ತಾರೆ. ನಂತರ ಇವರು ದೇಶದ ಹಿರಿಯ ವಿಶ್ವ ವಿದ್ಯಾಲಯಗಳಲ್ಲಿ ಒಂದಾದ ಮೈಸೂರು ವಿಶ್ವ ವಿದ್ಯಾಲಯ ದಿಂದ ಅರ್ಥಶಾಸ್ತ್ರ ವಿಷಯದಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ಪದವಿಯನ್ನು ಪಡೆಯುತ್ತಾರೆ. ಆರಂಭದ ದಿನಗಳಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸು ತ್ತಾರೆ. ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ, ಕಲಾ ವಿಭಾಗದ ಡೀನ್ ಆಗಿ, ಹಣಕಾಸು ಅಧಿಕಾರಿಯಾಗಿ, ನಂತರ ದಾವಣಗೆರೆ ವಿವಿ ಪ್ರಭಾರಿ ಉಪಕುಲಪತಿಗಳಾಗಿ ಕಾರ್ಯ ನಿರ್ವಹಿಸಿzರೆ. ನಂತರ ಇವರು ೩ ಆಗಸ್ಟ್ , ೨೦೧೯ರಂದು ಕುವೆಂಪು ವಿಶ್ವವಿದ್ಯಾಲಯದ ಕುಲಪತಿಗಳಾಗಿ ಅಧಿಕಾರವನ್ನು ಸ್ವೀಕರಿಸುತ್ತಾರೆ.
ರಾಜ್ಯದಲ್ಲಿ ಆರ್ಥಿಕ ಆಡಳಿತ, ಸಾಮಾಜಿಕ ನ್ಯಾಯ ಮತ್ತು ಬಡತನ ನಿರ್ಮೂಲನೆಯ ಕಾರ್ಯಕ್ರಮವನ್ನು ಕುರಿತು ಕುಲಂಕುಶ ಅಧ್ಯಯನ ಮಾಡಿದ್ದರು. ಕುವೆಂಪು ವಿಶ್ವವಿದ್ಯಾಲಯ ಇವರ ಅದ್ಭುತ ಸಂಶೋಧನೆಗಾಗಿ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿತು. ಇವರ ಸಂಶೋಧನಾ ವಿಶೇಷತೆಯು ಗ್ರಾಮೀಣ ಅಭಿವೃದ್ಧಿ, ಅಭಿವೃದ್ಧಿ ಅರ್ಥಶಾಸ್ತ್ರ, ಕಲ್ಯಾಣ ಅರ್ಥಶಾಸ್ತ್ರ, ಆರ್ಥಿಕ ನೀತಿ ಮತ್ತು ಸಾರ್ವಜನಿಕ ನೀತಿ, ಭಾರತೀಯ ಕೃಷಿ, ಕಿರು ಹಣಕಾಸು, ಜಗತೀಕರಣ, ಸಮಾಜ ಕಲ್ಯಾಣ, ಸಾರ್ವಜನಿಕ ಅರ್ಥಶಾಸ್ತ್ರ, ಆರ್ಥಿಕ ಯೋಜನೆ, ವಿತ್ತೀಯ ಅರ್ಥಶಾಸ್ತ್ರ ಇತ್ಯಾದಿಗಳನ್ನು ಒಳಗೊಂಡಿದೆ.
ಪ್ರೊ| ವೀರಭದ್ರಪ್ಪನವರು ದಕ್ಷ ಹಾಗೂ ಕ್ರಿಯಾಶೀಲ ಸಂಶೋಧಕರು. ಇವರು ೨೦ ಪಿಎಚ್‌ಡಿ ಮತ್ತು ೨೫ ಎಂ.ಫಿಲ್. ವಿದ್ಯಾರ್ಥಿಗಳಿಗೆ ಯಶಸ್ವಿ ಯಾಗಿ ಮಾರ್ಗದರ್ಶನ ಮಾಡಿzರೆ. ಮೈಸೂರು ವಿಶ್ವವಿದ್ಯಾಲಯ, ಕುವೆಂಪು ವಿಶ್ವವಿದ್ಯಾಲಯ ಮತ್ತು ದಾವಣಗೆರೆ ವಿಶ್ವವಿದ್ಯಾಲಯಗಳ ಇವರ ವಿದ್ಯಾರ್ಥಿ ಗಳು ಇವರ ಪ್ರಾಮಾಣಿಕತೆ ಮತ್ತು ಇವರ ಬೋಧನೆಯ ಬದ್ಧತೆಯನ್ನು ಈಗಲೂ ಗೌರವಿಸುತ್ತಾರೆ.
ನೂರಕ್ಕೂ ಹೆಚ್ಚು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಶೋಧನಾ ಪ್ರಬಂಧಗಳನ್ನು ಕೂಡ ಪ್ರಕಟಿಸಿದ ಹೆಗ್ಗಳಿಕೆ ಇವರzಗಿದೆ. ಕುವೆಂಪು ವಿಶ್ವವಿದ್ಯಾನಿಲಯದ ಎಕನಾಮಿಕ್ ಜರ್ನಲ್‌ನ ಪ್ರಧಾನ ಸಂಪಾದಕರಾಗಿ, ಸದರ್ನ್ ಎಕನಾಮಿಸ್ಟ್‌ನ ಸಂಪಾದಕರಾಗಿ, ಇಂಡಿಯನ್ ಎಕನಾಮಿಕ್ ಜರ್ನಲ್‌ನ ಪೀರ್ ವಿಮರ್ಶಕರಾಗಿಯೂ ಕೂಡ ಕಾರ್ಯ ನಿರ್ವಹಿಸಿzರೆ. ಇಂಟರ್ ನ್ಯಾಷನಲ್ ಬಿಸಿನೆಸ್ ಮ್ಯಾನೇಜ್‌ಮೆಂಟ್ ಜರ್ನಲ್‌ನ ಸಲಹಾ ಮಂಡಳಿಯ ಲ್ಲಿಯೂ ಕಾರ್ಯ ನಿರ್ವಹಿಸಿzರೆ
ಇಷ್ಟೇ ಅಲ್ಲದೆ ಯುರೋಪ್, ಟುನೀಶಿಯಾ, ಟರ್ಕಿ, ಈಜಿಪ್ಟ್, ಥೈಲ್ಯಾಂಡ್, ಜಪಾನ್, ತೈವಾನ್ ಮುಂತಾದ ದೇಶಗಳ ಸಮಾವೇಶಗಳಲ್ಲಿ ಅರ್ಥಶಾಸ್ತ್ರಕ್ಕೆ ಸಂಬಂಧಿಸಿದ ಹಲವಾರು ಪೇಪರ್‌ಗಳನ್ನು ಪ್ರಕಟಿಸಿzರೆ. ಅಲ್ಲದೆ ಬೋರ್ಡ್ ಆಫ್ ಸ್ಟಡೀಸ್, ಬೋರ್ಡ್ ಆಫ್ ಎಕ್ಸಾಮಿನೇಷನ್, ಡಾಕ್ಟರಲ್ ಕಮಿಟಿ, ಎಂಫಿಲ್ ಕಮಿಟಿ, ಅಕಾಡೆಮಿಕ್ ಕೌನ್ಸಿಲ್, ಸೆನೆಟ್, ಸಿಂಡಿಕೇಟ್ ಫೈನಾನ್ಸ್ ಆಫೀಸರ್, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡಿ ಶಿಮ್ಲಾ, ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಫೈನಾನ್ಸ್ ಅಂಡ್ ಪಾಲಿಸಿ ನವದೆಹಲಿ, ತಿರುಪತಿ ವಿಶ್ವವಿದ್ಯಾಲಯ, ಬಾಂಬೆ ಸ್ಕೂಲ್ ಆಫ್ ಎಕನಾಮಿಕ್ಸ್, ಮದ್ರಾಸ್ ಸ್ಕೂಲ್ ಆಫ್ ಎಕನಾಮಿಕ್ಸ್, ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್, ಮಧುರೈ ಕಾಮರಾಜ್ ವಿಶ್ವವಿದ್ಯಾಲಯ, ಗೋಖಲೆ ಇನ್‌ಸ್ಟಿಟ್ಯೂಟ್ ಆಫ್ ಎಕನಾಮಿಕ್ಸ್ ಅಂಡ್ ಪಾಲಿಟಿಕ್ಸ್, ಮುಂತಾದ ವಿದ್ಯಾಲಯಗಳಲ್ಲಿ ಅತಿಥಿ ಪ್ರಾಧ್ಯಾಪಕ ರಾಗಿ ಡಾ.ವೀರಭದ್ರಪ್ಪನವರು ಸೇವೆಯನ್ನು ಸಲ್ಲಿಸಿzರೆ.
ಅಷ್ಟೇ ಅಲ್ಲದೆ ಅವರು ಅನೇಕ ವೃತ್ತಿಪರ ಸಂಸ್ಥೆಗಳು ಮತ್ತು ಇಂಡಿಯನ್ ಎಕನಾಮಿಕ್ ಅಸೋಸಿಯೇಷನ್, ಇಂಟರ್‌ನ್ಯಾಷನಲ್ ಎಕನಾಮಿಕ್ ಕಾಂಗ್ರೆಸ್, ಕರ್ನಾಟಕ ಎಕನಾಮಿಕ್ ಅಸೋಸಿಯೇಷನ್, ಕರ್ನಾಟಕ ಎಕನಾಮಿಕ್ ಫೆಡರೇಶನ್, ಇಂಡಿಯನ್ ಸೊಸೈಟಿ ಆಫ್ ಅಗ್ರಿಕಲ್ಚರಲ್ ಎಕನಾಮಿಕ್ಸ್ ಮತ್ತು ಇಂಡಿಯನ್ ಸೊಸೈಟಿ ಆಫ್ ಲೇಬರ್ ಎಕನಾಮಿಕ್ಸ್‌ನಂತಹ ಇತರ ಸಂಸ್ಥೆಗಳೊಂದಿಗೆ ಸಂಬಂಧ ಹೊಂದಿzರೆ ಹಾಗೂ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಬಜೆಟ್‌ಗಳಲ್ಲಿ ಮತ್ತು ಚರ್ಚೆಗಳಲ್ಲಿ ಅನೇಕ ಬಾರಿ ಭಾಗವಹಿಸಿzರೆ ಮತ್ತು ಪ್ರಬಂಧಗಳನ್ನು ಮಂಡಿಸಿzರೆ. ಉದ್ಘಾಟನಾ ಭಾಷಣ, ಪ್ರಮುಖ ಟಿಪ್ಪಣಿ ಭಾಷಣ ಮಾಡಿzರೆ ಮತ್ತು ಭಾರತ ಮತ್ತು ವಿದೇಶಗಳಲ್ಲಿ ನೂರಾರು ಸಮ್ಮೇಳನಗಳು, ಸೆಮಿನಾರ್ ಗಳು, ವಿಚಾರಗೋಷ್ಠಿಗಳು ಮತ್ತು ವಿಚಾರ ಸಂಕಿರಣಗಳಲ್ಲಿ ಅನೇಕ ಅಧಿವೇಶನಗಳ ಅಧ್ಯಕ್ಷತೆ ವಹಿಸಿzರೆ. ಇವರ ಕೆಲವು ಉಪನ್ಯಾಸಗಳನ್ನು ಆಲ್ ಇಂಡಿಯಾ ರೇಡಿಯೋ ಮತ್ತು ದೂರದರ್ಶನ ಪ್ರಸಾರ ಮಾಡಿತು.
ಕುವೆಂಪು ವಿಶ್ವವಿದ್ಯಾಲಯದ ಕುಲಪತಿಗಳಾಗಿ ಆಡಳಿತ ನಡೆಸಿದ ಇವರ ಅವಧಿಯಲ್ಲಿ ವಿಶ್ವವಿದ್ಯಾಲಯವು ಎನ್.ಐ.ಆರ್.ಎಫ್ ರಾಂಕಿಂಗ್‌ನಲ್ಲಿ ೭೩ನೇ ಸ್ಥಾನವನ್ನು ಪಡೆದುಕೊಂಡಿತ್ತು. ಕೆ.ಎಸ್.ಯು.ಆರ್.ಎಫ್ ರಾಂಕಿಂಗ್ ನಲ್ಲಿ ರಾಜ್ಯದ ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳಲ್ಲಿಯೇ ಮೊದಲ ಸ್ಥಾನ ಗಳಿಸಿದ ಸಾಧನೆ ಮಾಡಿತ್ತು. ನವೆಂಬರ್ ತಿಂಗಳಲ್ಲಿ ಬಿಡುಗಡೆಗೊಂಡ ಪ್ರತಿಷ್ಠಿತ ಕ್ಯೂ.ಎಸ್ ಜಗತಿಕ ವಿಶ್ವವಿದ್ಯಾಲಯಗಳ ಶ್ರೇಣಿಯ ಏಷ್ಯಾ ವಿಭಾಗದಲ್ಲಿ ಕುವೆಂಪು ವಿಶ್ವವಿದ್ಯಾಲಯವು ಮೊದಲ ಬಾರಿಗೆ ಸ್ಥಾನ ಪಡೆದು ಟಾಪ್ ೫೦೦ ವಿವಿಗಳ ಪಟ್ಟಿಯಲ್ಲಿ ಗುರುತಿಸಿಕೊಂಡ ಸಾಧನೆ ಮಾಡಿದರ ಹಿಂದೆ ಪ್ರೊ.ಬಿ.ಪಿ ವೀರಭದ್ರಪ್ಪನವರ ಶೈಕ್ಷಣಿಕ ದೂರದೃಷ್ಟಿತನಕ್ಕೆ ಸಾಕ್ಷಿಯಾಗಿದೆ.
ಹಲವು ವರ್ಷಗಳಿಂದ ನೆನಗುದಿಗೆ ಬಿದಿದ್ದ ಬೋದಕೇತರ ನೌಕರರ ಪದೋನ್ನತ್ತಿ ಕ್ರಿಯೆಗೆ ಚಾಲನೆ ನೀಡಿ ಆಡಳಿತ ವರ್ಗದ ಸಂತಸಕ್ಕೆ ಕಾರಣ ವಾದರೂ. ಕೊರೋನಾ ಸಂಕಷ್ಟ ಕಾಲದಲ್ಲಿಯೂ ಆನ್ ಲೈನ್ ಮೂಲಕ ಘಟಿಕೋತ್ಸವ ನಡೆಸುವ ದಿಟ್ಟ ನಿಲುವಿನೊಂದಿಗೆ ಮುಂದಡಿ ಇಟ್ಟು ಯಶಸ್ಸು ಸಾಧಿಸಿರುವುದು. ಇತರೆ ವಿಶ್ವವಿದ್ಯಾಲಯಗಳಿಗೆ ಇಂದಿಗೂ ಮಾದರಿಯಾಗಿದೆ.
ಮಲೆನಾಡಿನ ಭಾಗಗಳಲ್ಲಿ ಶೈಕ್ಷಣಿಯ ಉತ್ಕೃಷ್ಟ ಬೇರುಗಳನ್ನು ಬಲಗೊಳಿಸಲು ಶಿವಮೊಗ್ಗದಲ್ಲಿ ಲಂಡನ್ ಸ್ಕೂಲ್ ಆಫ್ ಎಕನಾಮಿಕ್‌ನ ಮಾದರಿಯ ಸಹ್ಯಾದ್ರಿ ಸ್ಕೂಲ್ ಆಫ್ ಎಕನಾಮಿಕ್ ಮತ್ತು ಶಿಕಾರಿಪುರದಲ್ಲಿ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರಗಳನ್ನು ಆರಂಭಿಸಲು ಯೋಜನೆ ರೂಪಿಸವಲ್ಲಿ ಮೊದಲ ಹೆಜ್ಜೆ ಇಟ್ಟಿದವರು ಪ್ರೊ| ವೀರಭದ್ರಪ್ಪನವರು. ವಿವಿ ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಜ್ಜುಗೊಳಿಸಲು ಶಾಶ್ವತ ಕೋಚಿಂಗ್ ಸೆಂಟರ್ ಹಾಗೂ ಸರ್ವತೋಮುಖ ಬೆಳವಣಿಗೆಗಾಗಿ ಕೌಶಲ್ಯ ಕೇಂದ್ರ ಸ್ಥಾಪನೆಯನ್ನು ಮಾಡುವಲ್ಲಿ ಮೊದಲಿಗರಾಗಿದ್ದರು. ಆಡಳಿತದ ಚುಕ್ಕಾಣಿ ಹಿಡಿದಿದ್ದರು
ಶೈಕ್ಷಣಿಕ ಚಟುವಟಿಕೆಯ ಸೆಳೆತವನ್ನು ಒಂದಿನಿತೂ ಕಳೆದುಕೊಳ್ಳದ ಪ್ರೊ| ಬಿ.ಪಿ ವೀರಭದ್ರಪ್ಪನವರು ತಮ್ಮಂತೆಯೇ ವಿಶ್ವವಿದ್ಯಾಲಯದ ಅಧ್ಯಾಪಕರು ಶೈಕ್ಷಣಿಕ ಮನೋಧರ್ಮವನ್ನು ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಶ್ರೇಷ್ಠ ಚಿಂತಕರು, ಶಿಕ್ಷಣ ತಜ್ಞರು, ವಿದ್ವಾಂಸರುಗಳನ್ನು ವಿಶ್ವವಿದ್ಯಾಲಯಕ್ಕೆ ಆಹ್ವಾನಿಸುವ ಅದ್ಭುತ ಆಲೋಚನೆ ಹೊಂದಿದ್ದರು.
ಕೋವಿಡ್-೧೯ ಸಂಕಷ್ಟದ ಅವಧಿಯಲ್ಲಿ ಶೈಕ್ಷಣಿಕ ಚಟುವಟಿಕೆಗಳಿಗೆ ಯಾವುದೇ ಅಡ್ಡಿ ಆತಂಕಗಳು ಉಂಟಾಗದ ರೀತಿಯಲ್ಲಿ ಆನ್‌ಲೈನ್ ಮೂಲಕ ಪಾಠಪ್ರವಚನಗಳು, ವಬಿನಾರ್‌ಗಳನ್ನು ನಡೆಸಲು ಸೂಚನೆ ನೀಡಿ ಬೋಧಕರು ಮತ್ತು ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರರಾಗಿzರೆ. ವನ್ಯಜೀವಿ ಮತ್ತು ನಿರ್ವಹಣೆ ವಿಭಾಗ, ಜೈವಿಕ ತಂತ್ರeನ ವಿಭಾಗ, ವಾಣಿಜ್ಯ ವಿಭಾಗ, ಪತ್ರಿಕೋದ್ಯಮ ಮತ್ತು ಸಮೂಕ ಸಂವಹನ ವಿಭಾಗಗಳು ರಾಷ್ಟ್ರೀಯ ಮಟ್ಟದ ವೇಬಿನಾರ್ ಆಯೋಜಿಸುವುದರ ಹಿಂದೆ ಪ್ರೊ.ಬಿ.ಪಿ ವೀರಭದ್ರಪ್ಪರವರ ಸ್ಪೂರ್ತಿದಾಯಕ ಆಲೋಚನೆಗಳು ಕಾರಣವೆಂದರೆ ತಪ್ಪಾಗಲಾರದು.
೨೦೧೯ರ ಆಗಸ್ಟ್ ತಿಂಗಳ ಆರಂಭ ದಲ್ಲಿ ಸುರಿದ ಭಾರಿ ಮಳೆಗೆ ಉತ್ತರ ಕರ್ನಾಟಕ ಮತ್ತು ಮಲೆನಾಡು ಜಿಗಳಲ್ಲಿ ಉಂಟಾದ ಅತಿವೃಷ್ಟಿ ಯಿಂದಾಗಿ ಲಕ್ಷ ಕೋಟಿಗೂ ಅಧಿಕ ಮೊತ್ತದ ಹಾನಿಯಾಗಿತ್ತು. ಆಗ ಪರಿಹಾರ ಮತ್ತು ಪುನರ್ ನಿರ್ಮಾಣ ಕಾರ್ಯದಲ್ಲಿ ಸರ್ಕಾರದೊಂದಿಗೆ ಕೈಜೋಡಿಸುವ ನಿಟ್ಟಿನಲ್ಲಿ. ಇತರೆ ಸರ್ಕಾರ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳಿಗಿಂತ ಮುಂಚಿತವಾಗಿ ಕುವೆಂಪು ವಿಶ್ವವಿದ್ಯಾಲಯದ ಸಿಬ್ಬಂದಿಯ ಒಂದು ದಿನದ ವೇತನವನ್ನು ಸಂಗ್ರಹಿಸಿ ಮುಖ್ಯಮಂತ್ರಿಗಳ ಪರಿಹಾರ ನಿಽಗೆ ನೀಡುವಂತಹ ನಿರ್ಧಾರವನ್ನು ಕೈಗೊಂಡು ಎಲ್ಲರ ಮೆಚ್ಚುಗೆ ಪಾತ್ರರಾದರು.
ತಮ್ಮ ಆಡಳಿತ ಅವಧಿಯಲ್ಲಿ ಪ್ರೊ. ವೀರಭದ್ರಪ್ಪನವರು ಎಲ್ಲರ ಪ್ರೀತಿಯ ಪಾತ್ರರಾಗಿದ್ದರು. ಇವೆ ಸಾಧ್ಯವಾಗಿರು ವುದು ಅವರ ಕಾರ್ಯದಕ್ಷತೆ ಮತ್ತು ನಿಷ್ಠೆಯ ಪ್ರಾಮಾಣಿಕತೆಯಿಂದ ಎಂದು ಹೇಳಬಹುದು. ಇವರ ದಕ್ಷತೆ ಕ್ರಿಯಾಶೀಲತೆ ಮತ್ತು ಕಾರ್ಯಬದ್ಧತೆ ಇವರನ್ನು ಸಮರ್ಥ ಆಡಳಿತಗಾರರನ್ನಾಗಿ ಮಾಡಿದೆ.

ಲಿಂಗರಾಜು.ಡಿ, ಶಿವಮೊಗ್ಗ