ಮಾ.17 ರಿಂದ ಶಿವಮೊಗ್ಗದಲ್ಲಿ ಕೃಷಿ ಮೇಳ…

ಶಿವಮೊಗ್ಗ: ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜನಗಳ ವಿಶ್ವವಿದ್ಯಾಲಯವು ಮಾ.೧೭ ರಿಂದ ೨೦ರವರೆಗೆ ನಾಲ್ಕು ದಿನಗಳ ಕೃಷಿ ಮತ್ತು ತೋಟಗಾರಿಕಾ ಮೇಳ-೨೦೨೩ನ್ನು ಸುಸ್ಥಿರ ಆದಾಯಕ್ಕಾಗಿ – ಸೆಕೆಂಡರಿ ಕೃಷಿ ತಾಂತ್ರಿಕತೆಗಳು ಮತ್ತು ಮಲ್ಯವರ್ಧನೆ ಎಂಬ ಧ್ಯೇಯದೊಂದಿಗೆ ನವುಲೆ ಕೃಷಿ ವಿವಿ ಆವರಣದಲ್ಲಿ ಆಚರಿಸಲು ಉದ್ದೇಶಿಸಿದೆ ಎಂದು ವಿವಿ ಕುಲಪತಿ ಡಾ|| ಆರ್.ಸಿ. ಜಗದೀಶ್ ಅವರು ಸುದ್ದಿಗೋಷ್ಟಿಯಲ್ಲಿ ಹೇಳಿದರು.
ಮಾ.೧೭ರಂದು ತಾಂತ್ರಿಕ ಸಮಾವೇಶದಲ್ಲಿ ಅಡಿಕೆ ಬೇಸಾಯ ಪದ್ಧತಿಗಳು, ಅಡಿಕೆ ಬೆಳೆಯಲ್ಲಿ ಸಮಗ್ರ ಬೆಳೆ ಸಂರಕ್ಷಣೆ, ಬಹು ಬೆಳೆ ಪದ್ಧತಿ, ಮಾರುಕಟ್ಟೆ ಅವಕಾಶಗಳು ಮತ್ತು ಮಲ್ಯವರ್ಧನೆ ವಿಷಯಗಳ ಕುರಿತು ಹಾಗೂ ತೋಟಗಾರಿಕಾ ಇಲಾಖೆಯ ಯೋಜನೆಗಳ ವಿಷಯದ ಬಗ್ಗೆ ವಿಜನಿಗಳು, ಪ್ರಗತಿಪರ ರೈತ ಹಾಗೂ ಸಂಪನ್ಮೂಲ ವ್ಯಕ್ತಿಗಳಿಂದ ರೈತರಿಗೆ ಸಂವಾದ ನಡೆಯಲಿದೆ ಎಂದರು.
ಮಾ.೧೮ರಂದು ನಡೆಯಲಿರುವ ಸಮಾವೇಶದಲ್ಲಿ ಗೋಡಂಬಿ ಬೆಳೆಯ ಸಂಸ್ಕರಣೆ ಹಾಗೂ ಮಲ್ಯವರ್ಧನೆ, ಸಾಂಬಾರು ಬೆಳೆಗಳಲ್ಲಿ ಮಲ್ಯ ವರ್ಧನೆ, ಹಲಸು, ಬಾಳೆ ಹಾಗೂ ಅಡಿಕೆಯಲ್ಲಿ ಕೊಯ್ಲೋತ್ತರ ತಂತ್ರಜನ ಹಾಗೂ ಮಲ್ಯವರ್ಧನೆ, ಕೃಷಿ ನವೋದ್ಯಮ ಮತ್ತು ಸೆಕೆಂಡರಿ ಕೃಷಿ, ಜೇನು ಕೃಷಿ ಮತ್ತು ಮಲ್ಯವರ್ಧನೆ, ತೋಟಗಾರಿಕೆ ನರ್ಸರಿ ಮತ್ತು ಮಲ್ಯವರ್ಧನೆ, ಕೃಷಿ ಇಲಾಖೆಯ ಕಾರ್ಯಕ್ರಮಗಳ ಕಿರುಪರಿಚಯದ ವಿಷಯದ ಬಗ್ಗೆ ವಿಜನಿಗಳು, ಪ್ರಗತಿಪರ ರೈತ ಹಾಗೂ ಸಂಪನ್ಮೂಲ ವ್ಯಕ್ತಿಗಳಿಂದ ರೈತರಿಗೆ ಸಂವಾದ ಏರ್ಪಡಿಸಲಾಗಿದೆ ಎಂದರು.
ಮಾ.೧೯ರಂದು ಸಿರಿಧಾನ್ಯಗಳು ಆರೋಗ್ಯ ಮತ್ತು ಭವಿಷ್ಯದ ಬೆಳೆ, ಸಮಗ್ರ ಕೃಷಿ ಪದ್ಧತಿ, ಸುಸ್ಥಿರ ಆದಾಯಕ್ಕಾಗಿ ಸಮಗ್ರ ಕೃಷಿ ಪದ್ಧತಿಗಳು, ಸಿರಿಧಾನ್ಯಗಳ ಸಂರಕ್ಷಣೆ ಹಾಗೂ ಮಲ್ಯವರ್ಧನೆಯಲ್ಲಿ ರೈತ ಉತ್ಪಾದಕ ಸಂಸ್ಥೆಗಳ ಪಾತ್ರ ಮತ್ತು ಸಿರಿಧಾನ್ಯಗಳ ವೈವಿಧ್ಯತೆ ಮತ್ತು ಮಾರುಕಟ್ಟೆ ಅವಕಾಶಗಳು ವಿಷಯದ ಬಗ್ಗೆ ವಿಜನಿಗಳು, ಪ್ರಗತಿಪರ ರೈತ ಹಾಗೂ ಸಂಪನ್ಮೂಲ ವ್ಯಕ್ತಿಗಳಿಂದ ರೈತರಿಗೆ ಸಂವಾದ ನಡೆಯಲಿದೆ ಎಂದರು.

ಕೃಷಿ ಮತ್ತು ತೋಟಗಾರಿಕಾ ಮೇಳದ ವಿಶೇಷತೆಗಳು : ತಂತ್ರಜನ ಉದ್ಯಾನವನ, ಸಮಗ್ರ ಕೃಷಿ ಪದ್ಧತಿ, ಸಂರಕ್ಷಿತ ಕೃಷಿ, ಹೈ-ಟೆಕ್ ತೋಟಗಾರಿಕೆ-ಹೈಡ್ರೋಫೋನಿಕ್ ಕೃಷಿ, ಪುಷ್ಪ ಕೃಷಿ, ಜೇನು ಸಾಕಾಣಿಕೆ, ದ್ವಿದಳ ಧಾನ್ಯ ತಳಿ ಪ್ರಾತ್ಯಕ್ಷಿಕೆ, ಸಿರಿಧಾನ್ಯಗಳ ಮಹತ್ವ, ಕೃಷಿ- ತೋಟಗಾರಿಕೆ-ಅರಣ್ಯ ಸಮಗ್ರ ಪದ್ಧತಿಗಳು, ಸಾವಯವ ಕೃಷಿ, ಅಣಬೆ ಬೇಸಾಯ, ಪಶುಸಂಗೋಪನೆ ಮತ್ತು ಮೀನುಗಾರಿಕೆ ತಂತ್ರಜನಗಳು, ಕೊಯ್ಲೋತ್ತರ ತಾಂತ್ರಿಕತೆ, ಕೃಷಿ ಉತ್ಪನ್ನ ಸಂಸ್ಕರಣೆ, ಮಲ್ಯವರ್ಧಿತ ಕೃಷಿ ಉತ್ಪನ್ನಗಳು, ಹನಿ ಮತ್ತು ತುಂತುರು ನೀರಾವರಿ ಪದ್ಧತಿಗಳು, ಹವಾಮಾನ ಆಧಾರಿತ ಕೃಷಿ, ಕೃಷಿ ಪರಿಕರ ಮತ್ತು ಯಂತ್ರೋಪಕರಣಗಳ ಪ್ರದರ್ಶನ, ಶ್ರೇಷ್ಠ ಕೃಷಿಕರು ಮತ್ತು ಕೃಷಿ ಮಹಿಳೆಯರಿಗೆ ಪ್ರಶಸ್ತಿ ಪ್ರಧಾನ, ರೈತರ ಯಶೋಗಾಥೆ ಮತ್ತು ಕೃಷಿ ತಜ್ಞರೊಂದಿಗೆ ಸಂವಾದ, ರೈತರ ಸಮಸ್ಯೆಗಳಿಗೆ ತಜ್ಞರಿಂದ ಸಲಹೆ ದೊರೆಯಲಿವೆ. ಈ ಮೇಳದಲ್ಲಿ ವಿಶೇಷವಾಗಿ ವಿಶ್ವಸಂಸ್ಥೆಯು ಭಾರತ ಸರ್ಕಾರದ ಪ್ರಸ್ತಾವನೆಯನ್ನು ಒಪ್ಪಿಕೊಂಡು ಅಂತರರಾಷ್ಟ್ರೀಯ ಸಿರಿಧಾನ್ಯಗಳ ವರ್ಷ-೨೦೨೩ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ಸಿರಿಧಾನ್ಯಗಳ ಸುಸ್ಥಿರ ಉತ್ಪಾದನೆ ಮತ್ತು ಗುಣಮಟ್ಟವನ್ನು ಹೆಚ್ಚಿಸುವುದರ ಜೊತೆಗೆ ಆಹಾರ ಭದ್ರತೆ ಮತ್ತು ಪೋಷಣೆಗೆ ಸಿರಿಧಾನ್ಯಗಳ ಕೊಡುಗೆ ಕುರಿತು ಜಗೃತಿ ಮೂಡಿಸುವ ಉದ್ದೇಶ ಹೊಂದಲಾಗಿದೆ ಎಂದರು.
ಈ ಕೃಷಿ ಮೇಳವನ್ನು ಮುಖ್ಯಮಂತ್ರಿ ಬೊಮ್ಮಾಯಿ ಅವರು ಉದ್ಘಾಟಿಸಲಿದ್ದು, ಕೃಷಿ ಸಚಿವ ಬಿ.ಸಿ.ಪಾಟೀಲ್, ಮಾಜಿ ಸಿಎಂ ಯಡಿಯೂರಪ್ಪ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿರುವರು. ಶಾಸಕ ಕೆ.ಬಿ.ಅಶೋಕನಾಯ್ಕ್ ಅಧ್ಯಕ್ಷತೆ ವಹಿಸುವರು ಎಂದರು.
ಇದೇ ಸಂದರ್ಭದಲ್ಲಿ ವಿವಿ ವ್ಯಾಪ್ತಿ ಗೊಳಪಡುವ ಏಳು ಜಿಲ್ಲೆಗಳಿಂದ ಕೃಷಿ ಮತ್ತು ತೋಟಗಾರಿಕೆಯಲ್ಲಿ ಸಾಧನೆಗೈದ ರೈತರು ಮತ್ತು ರೈತ ಮಹಿಳೆಯರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುವುದು. ಅಲ್ಲದೇ ವಿವಿಧ ನವೀನ ತಾಂತ್ರಿಕತೆಗಳು ಮತ್ತು ವಿವಿಧ ಬೆಳೆಗಳ ಹೊಸ ತಳಿಗಳನ್ನು ಮತ್ತು ರೈತ ಸಮೂಹಕ್ಕೆ ಮಾಹಿತಿಗಾಗಿ ವಿವಿಧ ಬೆಳೆ ಹಾಗೂ ತಾಂತ್ರಿಕತೆಗಳನ್ನು ಹೊತ್ತ ತಾಂತ್ರಿಕ ಕೈಪಿಡಿ ಬಿಡುಗಡೆ ಗೊಳಿಸಲಾಗುವುದು ಎಂದರು.
ಕೃಷಿ ವಿವಿ ವಿಸ್ತರಣಾ ನಿರ್ದೇಶಕ ಡಾ| ಹೇಮ್ಲಾನಾಯ್ಕ್, ಮೃತ್ಯುಂಜಯ ಸಿ.ವಾಲಿ, ಡೀನ್ ಡಾ| ದುಶ್ಯಂತ ಕುಮಾರ್ ಇನ್ನಿತರರು ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.