ಪರಿಶುದ್ಧವಾದ ಸಂಬಂಧವೇ ಗೆಳೆತನ ಅದುವೇ ನಿಜವಾದ FRIENDSHIP
ಸ್ನೇಹ ಎಂಬ ಎರಡಕ್ಷರ ಗಳಿಸಿದವ ಸಾವು ಎಂಬೆರಡಕ್ಷರ ಮರೆಯಬಲ್ಲ. ಪ್ರೀತಿ ಎಂಬ ಎರಡಕ್ಷರಕ್ಕಿಂತ ಹಿರಿಯ ಅರ್ಥವನ್ನು ಹೊಂದಿದ ಜಗತ್ತಿನಲ್ಲಿ ಇದಕ್ಕೆ ಸಮನಾದ ಪದ ಮತ್ತೊಂದಿಲ್ಲ. ಜತಿ, ಮತ, ಧರ್ಮವನ್ನು ಮೀರಿ ಎಲ್ಲರೊಳಗೊಂದಾಗಿ ಬೆರೆತು ಮನವನ್ನು ಹರ್ಷಗೊಳಿಸುವುದೇ ಈ ಸ್ನೇಹ.
ಆಗಸ್ಟ್ ಮೊದಲ ಭಾನುವಾರ ಸ್ನೇಹಕ್ಕೊಂದು ಭಾಗ್ಯದಿನ. ಅರಿಯದೇ ಬಂದು ಜೀವನಪೂರ್ತಿ ಮರೆಯದಂತಿರುವುದೇ ಈ ಸ್ನೇಹ. ಅರಿಸ್ಟಾಟಲ್ ಅವರ ಪ್ರಕಾರ ಸ್ನೇಹಿತರೆಂದರೆ ಎರಡು ಶರೀರಗಳಲ್ಲಿ ವಾಸಿಸುತ್ತಿರುವ ಒಂದೇ ಆತ್ಮ ಎಂದಿzರೆ.
ಯುವಕರಲ್ಲಿ ಬೇರೂರಿದ ಈ ಸ್ನೇಹ ಜನ್ಮಾಂತರಗಳ ಸಂಬಂಧವನ್ನು ಒಂದಾಗಿಸು ವುದು. ದೇಹಕ್ಕೆ ಸಾವಿದೆ; ಆದರೆ ನಿಜವಾದ ಸ್ನೇಹಕ್ಕೆ ಸಾವಿಲ್ಲ. ಅದು ಸೂರ್ಯ-ಚಂದ್ರರಿರುವ ತನಕ ಚಿರಂಜೀವಿಯಾದದ್ದು. ಅದಕ್ಕೆ ತನ್ನದೇ ಮೌಲ್ಯವಿದೆ. ಪ್ರೀತಿಯು ಬೆಳೆಯಬೇಕಾದರೆ ಸ್ನೇಹವೇ ಅದರ ಪವಿತ್ರ ತಳಹದಿಯಾಗಿದೆ.
ಆಗಸ್ಟ್ ೧ ಶನಿವಾರ ೧೯೩೫ರಲ್ಲಿ ಅಮೇರಿಕದಲ್ಲಿ ಒಬ್ಬ ವ್ಯಕ್ತಿಯನ್ನು ಕೊಲ್ಲಲಾಯಿತು. ಮರುದಿನವೇ ಅಂದರೆ ಭಾನುವಾರ ಅವನ ಜೀವದ ಗೆಳೆಯ ಸ್ನೇಹಿತನಿಲ್ಲದ ನೋವಿನಿಂದ ಆತ್ಮಹತ್ಯೆ ಮಾಡಿಕೊಂಡ. ಅದರ ಸವಿನೆನಪಿಗಾಗಿಯೇ ಆಗಸ್ಟ್ ಮೊದಲ ಭಾನುವಾರವನ್ನು ವಿಶ್ವದಾದ್ಯಂತ ಸ್ನೇಹಿತರ ದಿನಾಚರಣೆಯನ್ನಾಗಿ ಆಚರಿಸಲಾಯಿತು.
ಈ ವರ್ಷ ೮೧ನೇ ವಿಶ್ವ ಸ್ನೇಹ ದಿನಾಚರಣೆಯನ್ನು ಎಡೆಯೂ ಆಚರಣೆ ಮಾಡಲಾಗುತ್ತಿದೆ. ವಿಶ್ವ ಸ್ನೇಹಿತರ ದಿನದ ಉದ್ದೇಶವೇನಂದರೆ, ಸ್ನೇಹದ ಮಹತ್ತವನ್ನು ಒತ್ತಿ ಹೇಳುವುದು. ನಮ್ಮ ಜನರ ನಡುವಿನ ಬಲವಾದ ಬಂಧಗಳನ್ನು ಬೆಳೆಸಿ, ಕೃತಜ್ಞತೆಯನ್ನು ವ್ಯಕ್ತಪಡಿಸಲು ಒಟ್ಟಿಗೆ ಸೇರುವುದು. ಒಳ್ಳೆಯ ಸ್ನೇಹ, ಒಳ್ಳೆ ಮನಸ್ಸು ನಂಬಿಕೆಗೆ ಯೋಗ್ಯರೆನಿಸಿದವರು ಸಿಕ್ಕರೆ ಅವರಿಗೆ ತಾಯಿಯ ನಂತರದ ಸ್ಥಾನವನ್ನು ಕೊಡುತ್ತೇವೆ. ಹಾಗಾಗಿ ಬದುಕಲ್ಲಿ ಒಳ್ಳೆಯ ಸ್ನೇಹಿತರು ಸಿಗುವುದು ಅಪರೂಪವೇ ಎನ್ನಬಹುದು.
ಸ್ನೇಹಿತರ ಆಯ್ಕೆಯನ್ನು ಎಚ್ಚರಿಕೆಯಿಂದ ಮಾಡಬೇಕು. ಬದುಕಿನಲ್ಲಿ ಏನೂ ಉಳಿದಿಲ್ಲ, ಎಲ್ಲವನ್ನೂ ಕಳೆದುಕೊಂಡಿದ್ದೇನೆ ಎಂಬ ನಿರಾಸೆಯನ್ನು ದೂರಮಾಡುವ ಶಕ್ತಿ ಸ್ನೇಹಕ್ಕೆ ಮಾತ್ರ ಇದೆ. ಆ ಅಮೂಲ್ಯ ಸ್ನೇಹದ ಸವಿಯನ್ನು ಸವಿದವರೇ ಧನ್ಯ. ನೋವಿನಲ್ಲಿ ಜೊತೆಯಾಗಿ, ನಲಿವು-ಸಂತೋಷಕ್ಕೆ ಕಾರಣವಾಗುವುದೇ ಮಧುರ ಸ್ನೇಹ.
ನಮ್ಮ ಬದುಕಿನಲ್ಲಿ ಸ್ನೇಹವು ಒಂದು ಅದ್ಭುತ ಶಕ್ತಿಯನ್ನು ನೀಡುವ ಜಗತ್ತಿನ ಏಕೈಕ ಬಂಧುವಾಗಿದೆ. ಸರ್ವರ ಹಿತವನ್ನು ಬಯಸುವ ಈ ಸ್ನೇಹದ ಗುರುತಾಗಿ ಕಂಕಣಕಟ್ಟಿ (ಕೈಬೆಲ್ಟ್) ಸಿಹಿ ತಿಂದು ಸಂಭ್ರಮಿಸಿ, ಗೆಳೆತನವನ್ನು ಗಟ್ಟಿಗೊಳಿಸುವುದೇ ಈ ಸ್ನೇಹಿತರ ದಿನಾಚರಣೆಯ ಮಹತ್ವವಾಗಿದೆ. ಎ ರೀತಿಯ ನೋವು ನಲಿವುಗಳನ್ನು ಹಂಚಿಕೊಳ್ಳಲು ಜೀವನದಲ್ಲಿ ಸಹಕರಿಸುವುದು ಸ್ನೇಹ ಮಾತ್ರ. ನಿರ್ಮಲವಾದ ಮನಸ್ಸನ್ನು ಹೊಂದಿ ಅಮೃತದಂತಹ ಅನನ್ಯ ಶಕ್ತಿಯನ್ನು ಒದಗಿಸುವ ಶ್ರೇಷ್ಠ ಸಂಬಂಧಗಳಲ್ಲಿಯೇ ಪಾವಿತ್ರ್ಯತೆಯನ್ನು ಈ ಸ್ನೇಹ ಒಳಗೊಂಡಿದೆ.
ಕೆಲವೊಂದು ಸ್ನೇಹ ಬಾಂಧವ್ಯದ ಹಿಂದೆ ಸೊಗಸಾದ ಕತೆಗಳಿರುತ್ತವೆ ಎಂದಿzರೆ ನಮ್ಮ ಅಭಿನವ ಭಾರ್ಗವ, ಸಾಹಸಸಿಂಹ ಡಾ.ವಿಷ್ಣುವರ್ಧನ್.
ಒಬ್ಬ ಉತ್ತಮ ಸ್ನೇಹಿತ ಗುಟ್ಟನ್ನು ರಟ್ಟು ಮಾಡಬಾರದು, ನಿಷ್ಠೂರನಾಗಿರಬಾರದು. ಚಂಚಲ ಮನಸ್ಸು ಹೊಂದಿರಕೂಡದು, ಕ್ರೋಧ, ಜೂಜಿನಿಂದ ದೂರವಾಗಿರಬೇಕು. ಆದರ್ಶ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಒಡಹುಟ್ಟಿದವರಿಗಿಂತ ಆತ್ಮೀಯ ಬಾಂಧವರೇ ಶ್ರೇಷ್ಠ ಎನ್ನುವಂತೆ ಅದ್ಭುತ ಸಾಧನೆಗೆ ಈ ಸ್ನೇಹ ಪ್ರೇರಕ ಶಕ್ತಿಯಾಗಿದೆ.
ಸ್ನೇಹವೆಂದರೆ ಗೌರವ, ಪ್ರೀತಿ, ವಾತ್ಸಲ್ಯ, ನಿಷ್ಠೆ ಮತ್ತು ನಂಬಿಕೆ. ನಿಜವಾದ ಸ್ನೇಹವನ್ನು ಪದಗಳು ಅಥವಾ ಆಲೋಚನೆಗಳಿಂದ ಅಳೆಯಲು ಸಾಧ್ಯವಿಲ್ಲ. ಒಬ್ಬ ಸ್ನೇಹಿತ ಎಂದರೆ ನೀವು ನಿಮ್ಮನ್ನು ತಿಳಿದಿರುವುದಕ್ಕಿಂತ ಚೆನ್ನಾಗಿ ತಿಳಿದಿರುವ ವ್ಯಕ್ತಿ. ಸ್ನೇಹವೆಂದರೆ ಯಾರೊಂದಿಗಾದರೂ ಸುರಕ್ಷಿತವಾಗಿರುವುದನ್ನು ಅನುಭವಿಸುವ ಅನಿರ್ವಚನೀಯ ಸೌಕರ್ಯ. ಆಲೋಚನೆಗಳನ್ನು ಅಥವಾ ಜೀವಂತ ಪದಗಳನ್ನು ಅಳೆಯಲು ಸಾಧ್ಯವಿಲ್ಲ ಎಂದು ಎಲಿಯಟ್ ಹೇಳಿzನೆ.
ಸ್ನೇಹಿತರು ಉಚಿತ ಚಿಕಿತ್ಸೆ ನೀಡುತ್ತಾರೆ ಎಂದು ಇನ್ನೊಬ್ಬ ಹೇಳಿzನೆ. ಸೂರ್ಯನಿಲ್ಲದಿದ್ದರೂ ಹೂವು ಅರಳಲು ಸಾಧ್ಯವಿಲ್ಲ ಹಾಗೂ ಸ್ನೇಹ ಮತ್ತು ಪ್ರೀತಿ ಇಲ್ಲದಿದ್ದರೂ ಮನುಷ್ಯ ಬದುಕಲು ಸಾಧ್ಯವಿಲ್ಲವೆಂದು ಮ್ಯಾಕ್ಸ್ ಮುಲ್ಲರ್ ಹೇಳಿರುವನು.
ಕಾಳಿದಾಸ ಭೋಜರಾಜರ ಹಾಗೂ ಮಹಾಭಾರತದಲ್ಲಿ ಬರುವ ಕೃಷ್ಣ-ಕುಚೇಲರಂತೆ ನಮ್ಮ ಸ್ನೇಹವಿರಬೇಕು. ಸ್ನೇಹಕ್ಕೆ ಬಡತನ, ಸಿರಿತನ ಎಂಬ ಬೇಧವಿಲ್ಲ. ಸಿರಿ ಸಂಪತ್ತಿಗಿಂತ ಸ್ನೇಹ ಸಂಪತ್ತೇ ದೊಡ್ಡದು. ಜೀವಗಳು ಎರಡಾದರೂ ಮನಸ್ಸು ಒಂದೇ ಎಂದು ಹೇಳುವುದೇ ಗೆಳೆತನ. ಹಣ, ಅಂತಸ್ತು, ಅಧಿಕಾರಕ್ಕಿಂತ ಗುಣಕ್ಕಾಗಿ ಸ್ನೇಹ ಸಂಬಂಧವಿರಬೇಕು. ಇಂದಿನ ದಿನಗಳಲ್ಲಿ ಹಣದಿಂದಲೇ ಪ್ರತಿ ಯೊಂದನ್ನು ಅಳೆಯುತ್ತಾರೆ. ಇದು ತುಂಬಾ ದುರಂತವಾಗಿದೆ. ಇದರಿಂದ ನಂಬಿಕೆ, ವಿಶ್ವಾಸ ಬೆಳೆಯುವುದಿಲ್ಲ. ಸ್ನೇಹ ಕಷ್ಟ ಸುಖಗಳಲ್ಲಿ ನಿಜವಾಗಿ ಭಾಗಿಯಾಗುತ್ತದೆ. ಜನಪದರು ಗೆಳೆತನಕ್ಕೆ ಮಹತ್ವ ಸ್ಥಾನ ನೀಡಿzರೆ.
ನಾನು ನನ್ನ ಗೆಳತಿ ಕೂಡಿ ನೀರಿಗೆ ಹೋಗಿ
ಕುಲವ ಕೇಳ್ಯಾರ ಬಹುಮಂದಿ| ಕೇಳಿದರ
ಕುಲವೆರಡು ನಮ್ಮ ಮನವೊಂದು
ಮನೆಯ ಮುಂದಿನ ಗೆಳತಿ ದನಿಯ ಕೂಡಿಸಬಾರ
ದನಿಸುದ್ದ ನಿನ್ನ ಗುಣಸುದ್ದ| ಗೆಳೆತವ್ವ
ಗುಣಕ ಕಟ್ಟೀನಿ ಗೆಳೆತನ
ಹೀಗೆ ಗ್ರಾಮೀಣ ಅನಕ್ಷರಸ್ಥರ ಈ ತ್ರಿಪದಿಯಲ್ಲಿ ಜೀವನದ ಮೌಲ್ಯ ಕಾಣಸಿಗುತ್ತದೆ. ಕೆರೆಗೆಹಾರದಂತಹ ಕಥೆಗಳಲ್ಲಿ ಗೆಳೆತನದ ಬಗ್ಗೆ ತಿಳಿಯಬಹುದು.
ಹೃದಯದ ಹೂವಿಗೆ ಸ್ನೇಹವೇ ಮಂದಾರ. ಸ್ನೇಹಿತನನ್ನು ಆರಿಸಿಕೊಳ್ಳುವ ಹಕ್ಕು ದೇವರು ನಮಗೆ ಬಿಟ್ಟಿರುವಾಗ ಆ ದೇವರು ವಂದನಾರ್ಹ ಎಂದಿzನೆ ಎಜ್ನರ್.
ಅದಕ್ಕಾಗಿಯೇ ಹಿರಿಯರು ರಕ್ತ ಸಂಬಂಧಕ್ಕಿಂತ ಆತ್ಮ ಸಂಬಂಧ ದೊಡ್ಡದು ಎಂದಿzರೆ. ಇನ್ನೊಬ್ಬ ವಿದೇಶಿ ಚಿಂತಕ ವೇಲ್ಸ್ ಹೀಗೆ ಹೇಳಿzನೆ. ಸ್ನೇಹ ಎಂಬುದು ಒಂದು ಗಿಡ, ಅದಕ್ಕೆ ಆಗಿಂದಾಗ್ಗೆ ನೀರೆರೆಯುತ್ತಿರಬೇಕು ಎಂದಿzನೆ.
ಸ್ನೇಹ ಮತ್ತು ಸದ್ಗುಣಗಳಿಂದ ಮನುಷ್ಯನನ್ನು ಗೆಲ್ಲಬಹುದೇ ವಿನಃ ಬಲದಿಂದಲ್ಲ ಎಂದು ನಮ್ಮ ಸರ್ವಪಲ್ಲಿ ರಾಧಾಕೃಷ್ಣನ್ ಹೇಳಿzರೆ. ಊಐಉಘೆಈ ಅಂದರೆ, ಊಐಯಾಗಿ ಉಘೆಈವರೆಗೂ ಸಿಗುವ ಐಕೈಕ ಆuಘೆಈ ದಟ್ಟ್ ಕಾಲ್ಡ್ ಊಐಉಘೆಈ ಒಟ್ಟಿನಲ್ಲಿ ಹೇಳುವುದಾದರೆ ಸ್ನೇಹ ಎಂಬುದು ಖಡಿಛಿಛಿಠಿ ಏಟ್ಞಛಿqs, ಅದನ್ನು ಕೊಂಡುಕೊಳ್ಳಲಾಗದು ಕೊಟ್ಟು Iಟ್ಞಛಿqs ಎನ್ನಬಹುದು.
-ಹೆಚ್.ಎಂ.ಗುರುಬಸವರಾಜಯ್ಯ
ಕನ್ನಡ ಉಪನ್ಯಾಸಕರು