ತುಂಗಾನಗರ ಪೊಲೀಸರಿಂದ ಗೋವುಗಳ ರಕ್ಷಣೆ…

ಶಿವಮೊಗ್ಗ : ನಗದಲ್ಲಿ ಇಂದು ಬೆಳ್ಳಂಬೆಳಿಗ್ಗೆ ತುಂಗಾನಗರ ಪೊಲೀಸರು ದಾಳಿ ನಡೆಸಿ ೧೦ ಗೋವುಗಳನ್ನು ರಕ್ಷಿಸಿ, ಈರ್ವ ಆರೋಪಿಗಳನ್ನು ಬಂಧಿಸಿದ್ದಾರೆ.
ಖಚಿತ ಮಾಹಿತಿ ಆಧಾರದ ಮೇರೆಗೆ ನಡೆದ ಈ ದಾಳಿಯಲ್ಲಿ ಬೊಲೆರೋ ಪಿಕಪ್ ಮತ್ತು ದ್ವಿಚಕ್ರ ವಾಹನಗಳನು ಸಹ ವಶಕ್ಕೆ ಪಡೆಯಲಾಗಿದೆ.
ಇಂದು ಬೆಳಿಗ್ಗೆ ೫.೩೦ರ ಸುಮಾರಿಗೆ ಅರಕೆರ ರಸ್ತೆ ರಾಮೇನಕೊಪ್ಪ ಸಮೀಪದಲ್ಲಿ ಬೊಲೆರೋ ವಾಹನದಲ್ಲಿ ೧೦ ಗೋವುಗಳನ್ನ ಹಿಂಸಾತ್ಮಕವಾಗಿ ಕಟ್ಟಿಕೊಂಡು ಕಸಾಯಿ ಖಾನೆಗಳಿಗೆ ಸಾಗಿಸುತ್ತಿದ್ದ ವೇಳೆ ತುಂಗಾನಗರ ಪೊಲೀಸರು ಮಿಂಚಿನ ದಾಳಿ ನಡೆಸಿzರೆ.
ಈ ದಾಳಿಯಲ್ಲಿ ೧೦ ಗೋವುಗಳನ್ನ ರಕ್ಷಿಸಿ ಗೋಶಾಲೆಗೆ ಸಾಗಿಸಲಾಗಿದೆ. ಪ್ರಕರಣದಲ್ಲಿ ಈರ್ವ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದ್ದು ವಶಕ್ಕೆ ಪಡೆದವಲ್ಲಿ ಒಬ್ಬನು ಸುಲ್ತಾನ್ ಪಾಳ್ಯದ ನಯಾಜ್ ಎಂದು ತಿಳಿದು ಬಂದಿದೆ.
ಈ ದಾಳಿಯ ನೇತೃತ್ವವನ್ನು ತುಂಗ ನಗರ ಪೊಲೀಸ್ ಠಾಣೆಯ ಪಿಐ ಮಂಜುನಾಥ್ ವಹಿಸಿದ್ದು, ತಂಡದಲ್ಲಿ ಪಿಎಸ್‌ಐಗಳಾದ ರಾಜೂ ರೆಡ್ಡಿ, ಕುಮಾರ್, ಸಿಬ್ಬಂದಿಗಳಾದ ರಾಜು, ನಾಗಪ್ಪ,ಹರೀಶ್ ನಾಯ್ಕ್, ಹಾಗೂ ಸಂತೋಷ್ ಭಾಗಿಯಾಗಿದ್ದರು.