ಕಾಂಗ್ರೆಸ್-ಬಿಜೆಪಿಯಿಂದ ಪರಿಶಿಷ್ಠರ ಅನುದಾನ ಬಳಕೆಯಲ್ಲಿ ವಿಫಲ: ಆರೋಪ

ಶಿವಮೊಗ್ಗ: ಪರಿಶಿಷ್ಟ ಜತಿ- ಪಂಗಡದ ಅನುದಾನ ಬಳಸಿ ಕೊಳ್ಳುವಲ್ಲಿ ಬಿಜಪಿ ಮತ್ತು ಕಾಂಗ್ರೆಸ್ ಎರಡೂ ವಿಫಲವಾಗಿವೆ ಎಂದು ಬಹುಜನ ಸಮಾಜ ಪಾರ್ಟಿಯ ಜಿಧ್ಯಕ್ಷ ಎ.ಡಿ. ಶಿವಪ್ಪ ಸುದ್ದಿ ಗೋಷ್ಟಿಯಲ್ಲಿ ಆರೋಪಿಸಿದರು.
ಪರಿಶಿಷ್ಟರ ಎಸ್‌ಸಿ. ಎಸ್‌ಪಿ ಮತ್ತು ಟಿಎಸ್‌ಪಿ ಅನುದಾನದಲ್ಲಿ ಹನ್ನೊಂದು ಸಾವಿರ ಕೋಟಿ ಹಣವನ್ನು ಕಲಂ ೭ಡಿ ಅಡಿಯಲ್ಲಿ ಬೇರೆಬೇರೆ ಬಾಬ್ತುಗಳಿಗೆ ಬಳಸುತ್ತಾ, ಅನ್ಯಾಯ ಮಾಡಲಾಗುತ್ತಿದೆ. ಕಲಂ ೭ಡಿ ಅಡಿಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಎರೆಡೂ ಸರ್ಕಾರಗಳು ಪರಿಶಿಷ್ಟರ ಅನುದಾನದ ಹಣವನ್ನು ಬಳಸಿಕೊಳ್ಳದೆ ವಂಚಿಸಿವೆ ಎಂದರು.
ಈ ಹಿಂದೆ ಬಿಜೆಪಿ ಸರ್ಕಾರ ಇzಗ ಕಲಂ ೭ಡಿ ಅಡಿಯಲ್ಲಿ ಸುಮಾರು ೧೯ಸಾವಿರ ಕೋಟಿ ಅನುದಾನವನ್ನು ಬೇರೆ ಬಾಬ್ತುಗಳಿಗೆ ಬಳಸಿಕೊಳ್ಳಲಾಗಿತ್ತು. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಮೊದಲು ಕಲಂ ೭ಡಿಯನ್ನು ರದ್ದುಪಡಿಸುತ್ತೇವೆ ಎಂದು ಹೇಳಿದ್ದರು. ಆದರೆ ಆ ಪಕ್ಷವೂ ಕೂಡ ಕೆಲವು ಒತ್ತಡಗಳಿಗೆ ಸಿಕ್ಕು ಪರಿಶಿಷ್ಟರಿಗೆ ಮೀಸಲಾಗಿಟ್ಟಿದ್ದ ೩೪,೨೯೪ ಕೋಟಿ ಹಣವನ್ನು ಸಮರ್ಥವಾಗಿ ಬಳಸಿಕೊಂಡಿಲ್ಲ. ಆದ್ದರಿಂದ ಕಾಂಗ್ರೆಸ್ ಪಕ್ಷ ಕೂಡ ಪರಿಶಿಷ್ಟರ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದರು.
ಈ ೧೧ ಸಾವಿರಕ ಕೋಟಿ ಅನುದಾನವನ್ನು ಪ್ರತಿ ಕುಟುಂಬ ಗಳಿಗೆ ಐದು ಲಕ್ಷ ರೂ.ನಂತೆ ನೀಡಿದ್ದರೆ ಸುಮಾರು ೨.೨೦ ಲಕ್ಷ ಮನೆಗಳನ್ನು ಕಟ್ಟಿ ಕೊಡಬಹುದಿತ್ತು. ಇದರಿಂದ ವಸತಿ ಸಮಸ್ಯೆ ಪರಿಹಾರ ವಾಗುತ್ತಿತ್ತು ಅಥವಾ ನಿರುದ್ಯೋಗಿ ಗಳಿಗೆ ತಲಾ ಐದು ಲಕ್ಷ ರೂ. ಬಂಡವಾಳ ನೀಡಿದ್ದರೆ ತಮ್ಮ ಕಾಲ ಮೇಲೆ ತಾವು ನಿಲ್ಲುತ್ತಿದ್ದರು. ಆದರೆ ಈ ಎರಡನ್ನೂ ಮಾಡದ ಎರಡೂ ಸರ್ಕಾರಗಳು ಬೇರೆಬೇರೆ ಬಾಬ್ತು ಗಳಿಗೆ ಹಣ ವರ್ಗಾವಣೆ ಮಾಡಿ ಪರಿಶಿಷ್ಟರನ್ನು ವಂಚಿಸಿವೆ ಎಂದು ದೂರಿದರು.
ಆದ್ದರಿಂದ ತಕ್ಷಣವೇ ಕಾಂಗ್ರೆಸ್ ಸರ್ಕಾರ ೭ ಡಿ ಕಲಂ ಅನ್ನು ರದ್ದುಪಡಿಸಿ ೧೧ಸಾವಿರ ಕೋಟಿ ಹಣವನ್ನು ಪರಿಶಿಷ್ಟರ ಕಲ್ಯಾಣಕ್ಕಾಗಿ ಬಳಸಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಎಸ್‌ಪಿ ಜಿ ಸಂಯೋಜಕ ಹೆಚ್.ಎನ್. ಶ್ರೀನಿವಾಸ್, ಉಪಾಧ್ಯಕ್ಷ ಪ್ರೊ| ಕೃಷ್ಣಪ್ಪ, ಖಜಂಚಿ ಎ.ಡಿ. ಲಕ್ಷ್ಮೀಪತಿ, ಸಂಘಟನಾ ಕಾರ್ಯದರ್ಶಿ ಮಂಜುನಾಥ್, ಗುತ್ಯಪ್ಪ ಇದ್ದರು.