ಶಿಕಾರಿಪುರ: ನಿಜವಾದ ನಾಯಕರು ಎಂದರೆ ನಮ್ಮ ಸೈನಿಕರು. ಇವರ ತ್ಯಾಗ ಬಲಿದಾನ ಗಳನ್ನು ನಮ್ಮ ಯುವ ಜನತೆ ಮರೆತು ಆಧುನಿಕತೆಯಲ್ಲಿ ಮರೆಯಾಗುತ್ತಿ zರೆ ಎಂದು ಯೂಥ್ ಫಾರ್ ಸೇವಾದ ಸಂಯೋಜಕ ಹರೀಶ್ ಹೇಳಿದರು.
ಶಿಕಾರಿಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್‌ಸಿಸಿ ಘಟಕ ಮತ್ತು ಸಮಾಜಕಾರ್ಯ ವಿಭಾಗ ಹಾಗೂ ಯೂಥ್ ಫಾರ್ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಯೋಧ ನಮನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಸೈನಿಕ ಸಂಘದ ಅಧ್ಯಕ್ಷರಾದ ಶಂಕರ್ ಅವರು ಮಾತನಾಡಿ, ಸೇನೆ ಅಂದರೆ ಭಯ ಅಲ್ಲ, ಅದೊಂದು ತುಂಬಾ ಗೌರವದ ಸೇವೆ ಎಂದು ಹೇಳಿದರು.
ಸೇನೆಯಲ್ಲಿ ಸೇವೆ ಮಾಡಲು ಪುಣ್ಯ ಮಾಡಿರಬೇಕು, ಕಷ್ಟ ಪಟ್ಟು ಸೇವೆ ಮಾಡುವುದಲ್ಲ ಇಷ್ಟ ಪಟ್ಟು ಸೇವೆ ಮಾಡಿದರೆ ದೇಶದ ಗಡಿಯಿಂದ ಜೀವನಕ್ಕೆ ಬರಲು ಆಸಕ್ತಿಯೇ ಬರುವುದಿಲ್ಲ ಎಂದು ಮಾಜಿ ಯೋಧ ಶಾಂತಮೂರ್ತಿ ಹೇಳಿದರು.
ಪ್ರಾಂಶುಪಾಲ ಶೇಖರ್ ಮಾತನಾಡಿ, ದೇಶದ ಯುವ ಶಕ್ತಿ ಸೇನೆಯಲ್ಲಿ ಸೇವೆ ಮಾಡುವ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಯೂಥ್ ಫಾರ್ ಸೇವಾದ ಕಾರ್ಯಕರ್ತರು, ಕಾಲೇಜಿನ ಬೋಧಕ ವರ್ಗ ಮತ್ತು ಬೋಧಕೇತರ ವರ್ಗ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.