ಮಣಿಪುದಲ್ಲಿ ಮುಗಿಲು ಮುಟ್ಟಿದ ಮಹಿಳೆಯರ ಆಕ್ರಂದನ ; ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿ: ಡಿಎಸ್‌ಎಸ್ ಆಗ್ರಹ
ಶಿಕಾರಿಪುರ: ಸತತ ೩ ತಿಂಗಳಿನಿಂದ ಮಣಿಪುರದಲ್ಲಿ ಮಹಿಳೆಯರನ್ನು ಬೀದಿಯಲ್ಲಿ ಬೆತ್ತಲೆ ಮಾಡಿ ಅತ್ಯಾಚಾರ ಎಸಗುತ್ತಿದ್ದು, ಮಹಿಳೆಯರ ಆಕ್ರಂದನ ಮುಗಿಲು ಮುಟ್ಟಿದೆ. ಧರ್ಮ ಜಾತಿಯ ಹೆಸರಿನಲ್ಲಿ ಮಹಿಳೆಯರ ಮಾನ ಹಾನಿ, ಪ್ರಾಣ ಹಾನಿ ನಡೆಯುತ್ತಿದ್ದು ಘಟನೆಗೆ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಬೀರೇನ್ ಸಿಂಗ್ ರಾಜೀನಾಮೆ ನೀಡುವಂತೆ ಇಲ್ಲಿನ ದಲಿತ ಸಂಘರ್ಷ ಸಮಿತಿ ಮುಖಂಡ ಚಂದ್ರಪ್ಪ ಸುದ್ದಿಗೋಷ್ಟಿಯಲ್ಲಿ ಆಗ್ರಹಿಸಿದರು.
ಮಣಿಪುರ ರಾಜ್ಯದಲ್ಲಿ ಪರಿಶಿಷ್ಟ ಸಮುದಾಯಕ್ಕೆ ಸೇರಿದ ಕುಕಿ ಸಮುದಾಯವರ ಮೇಲೆ ಕಳೆದ ಮೂರು ತಿಂಗಳಿನಿಂದ ನಿರಂತರ ವಾಗಿ ದೌರ್ಜನ್ಯ, ಮಹಿಳೆಯರ ಬೆತ್ತಲೆ ಮೆರವಣಿಗೆ ಮಾಡಿ, ಅತ್ಯಾಚಾರ, ಕೊಲೆ ಹಿಂಸೆ ವಿಪರೀತವಾಗಿದ್ದು, ಮಹಿಳೆಯರು ಮಕ್ಕಳು ಸಹಿತ ಕುಕಿ ಸಮುದಾಯದ ಆಕ್ರಂದನ ಮುಗಿಲು ಮುಟ್ಟಿದೆ ನಿರಂತರ ಗಲಭೆ ಬೆಂಕಿ ಲೂಟಿ ಯಿಂದ ಮಣಿಪುರ ರಾಜ್ಯ ಹೊತ್ತಿ ಉರಿಯುತ್ತಿದ್ದರೂ ಕೇಂದ್ರ ಸರ್ಕಾರ ಹಾಗೂ ಮಣಿಪುರದ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಬೀರೇನ್ ಸಿಂಗ್ ಕಂಡು ಕಾಣದಂತಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಮನುಕುಲದ ರಾಕ್ಷಸರು ಕುಕಿ ಸಮುದಾಯದ ಸುಮಾರು ೨೦೦ಕ್ಕೂ ಅಧಿಕ ಸಿಕ್ಕ ಸಿಕ್ಕ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯಗಳನ್ನೆಸಗಿ, ಬೆತ್ತಲೆಗೊಳಿಸಿ ಮೆರವಣಿಗೆ, ಅತ್ಯಾಚಾರ ಮಾಡಿ ಕೊಲೆ ಮಾಡುತ್ತಿzರೆ. ನಾಗರೀಕ ಸಮಾಜ ತಲೆತಗ್ಗಿಸುವ ಇಂತಹ ಹೇಯ ಕೃತ್ಯದಿಂದ ಈಗಾಗಲೆ ೧೫೦ಕ್ಕೂ ಅಧಿಕ ಹೆಣ್ಣುಮಕ್ಕಳು ಮರಣ ಹೊಂದಿzರಲ್ಲದೇ, ೧೦ ಸಾವಿರಕ್ಕೂ ಹೆಚ್ಚಿನ ಮನೆಗಳನ್ನು ಸುಟ್ಟು ಭಸ್ಮ ಮಾಡಿzರೆ ಇದನ್ನು ತಡೆಯುವಲ್ಲಿ ಅಲ್ಲಿನ ಮುಖ್ಯಮಂತ್ರಿ ವಿಫಲವಾಗಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಕೂಡಲೇ ರಾಷ್ಟ್ರಪತಿ ಆಡಳಿತ ಜಾರಿಗೊಳಿಸುವಂತೆ ಅವರು ಆಗ್ರಹಿಸಿದರು.
ಕೃಷಿ ಭೂಮಿ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ ಡಿ.ಎಸ್ ಈಶ್ವರಪ್ಪ ಮಾತನಾಡಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶದ ಆಗುಹೋಗುಗಳ ಬಗ್ಗೆ ಚಿಂತನೆ ನಡೆಸದೆ, ವಿಶ್ವ ಗುರುವಾಗಲು ಹೊರಟಿzರೆ. ಹೊಗಳುಭಟ್ಟರಿಂದ ತಾವೇ ವಿಶ್ವಗುರುವೆಂಬಂತೆ ಬಿಂಬಿಸಿಕೊಳ್ಳುತ್ತಿzರೆ. ಈ ರೀತಿ ಬಿಂಬಿಸಿಕೊಳ್ಳಲು ಇವರಿಗೆ ಯಾವುದೇ ರೀತಿಯ ನೈತಿಕತೆ ಇಲ್ಲ. ಬೇಟಿ ಬಚಾವೋ ಬೇಟಿ ಪಡಾವೋ ಎಂದು ಭಾಪಣ ಬಿಗಿಯುವ ಇವರು ಮಣಿಪುರ ರಾಜ್ಯದ ಘಟನೆ ಕಂಡು ಕಾಣದಂತೆ ಕಣ್ಣು ಮುಚ್ಚಿ ಕುಳಿತಿzರೆಂದು ಆರೋಪಿಸಿದರು.
ಉಡುಪಿ ಶೌಚಾಲಯದ ವಿಡಿಯೋ ಚಿತ್ರೀಕರಣದ ಬಗ್ಗೆ ಬೊಬ್ಬೆ ಹೊಡೆಯುವ ಬಿಜೆಪಿ ಮುಖಂಡರು ಮಣಿಪುರದ ಘಟನೆಯನ್ನು ಮುಚ್ಚಿಹಾಕಲು ಕರ್ನಾಟಕದ ಉಡುಪಿಯ ಘಟನೆಯನ್ನು ದೊಡ್ಡದಾಗಿ ಬಿಂಬಿಸಿ ಜನತೆಗೆ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಗೋಷ್ಟಿಯಲ್ಲಿ ಶಿವಶರಣ ಮಾದಾರ ಚನ್ನಯ್ಯ ಸೇವಾ ಸಮಿತಿ ರಾಜದ್ಯಕ್ಷ ಸುರೇಶ ಟಿ ಅರಳೀ ಹಳ್ಳಿ, ಮಾತಂಗ ಪತ್ತಿನ ಸಹಕಾರ ಬ್ಯಾಂಕ್ ಅದ್ಯಕ್ಷ ಕೆ ಚಂದ್ರಪ್ಪ, ವಾಲ್ಮಿಕಿ ಸಮಾಜದ ಸುರೇಶ, ಲೋಕೇಶ್ ನಾಗಿಹಳ್ಳಿ, ಮಹೇಶ್ ತಾಳಗುಂದ ಮತ್ತಿತರರಿದ್ದರು.