ಮಹಿಳೆಯರ ಸಾಧನೆ ಆಶಾದಾಯಕ ಬೆಳವಣಿಗೆ…
ಶಿಕಾರಿಪುರ: ಇತ್ತೀಚಿನ ವರ್ಷ ದಲ್ಲಿ ಮಹಿಳೆಯರು ಎಲ್ಲ ಕ್ಷೇತ್ರದಲ್ಲಿ ಅಸಾಮಾನ್ಯ ಸಾಧನೆಯ ಮೂಲಕ ಗಮನ ಸೆಳೆಯುತ್ತಿದ್ದು,ಕುಟುಂಬದ ನಿರ್ವಹಣೆ ಕೇವಲ ಪುರುಷರಿಂದ ಮಾತ್ರ ಸಾಧ್ಯ ಎಂಬ ಪರಿಸ್ಥಿತಿಯನ್ನು ಹೋಗಲಾಡಿಸಿ ಮಹಿಳೆಯರು ಕುಟುಂಬಕ್ಕೆ ಆರ್ಥಿಕ ಶಕ್ತಿಯನ್ನು ಕಲ್ಪಿಸಿಕೊಡುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದು ಇಲ್ಲಿನ ಎಲಿಗೆಂಟ್ ಸೇವಾ ಸಂಸ್ಥೆಯ ಅಧ್ಯಕ್ಷೆ ಭವ್ಯ ತಿಳಿಸಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ನಲ್ಲಿ ಐಕಿಅಇ ಪ್ಲೇಸ್ಮೆಂಟ್ ಸೆಲ್ ಹಾಗೂ ಎಲಿಗೆಂಟ್ ಸೇವಾ ಸಂಸ್ಥೆ, ಶಿಕಾರಿಪುರ ಇವರ ಸಹಯೋಗದಲ್ಲಿ ನಡೆದ ಉಚಿತ ಬ್ಯೂಟಿಷಿಯನ್ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೆಲ ದಶಕದ ಹಿಂದೆ ಮಹಿಳೆಯರು ಮನೆಯ ನಾಲ್ಕು ಗೋಡೆಗಳಿಗೆ ಮಾತ್ರ ಸೀಮಿತವಾಗಿದ್ದು ಆದರೆ ಬದಲಾದ ಇಂದಿನ ಕಾಲಘಟ್ಟದಲ್ಲಿ ಮಹಿಳೆಯರು ಎಲ್ಲ ಕ್ಷೇತ್ರದಲ್ಲಿ ತಮ್ಮ ಛಾಪನ್ನು ಮೂಡಿಸುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದು ತಿಳಿಸಿದ ಅವರು, ಪ್ರಸ್ತುತ ಮಹಿಳೆಯರು ಸಮಾಜದಲ್ಲಿನ ಎಲ್ಲ ಆಗುಹೋಗುಗಳಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಿzರೆ ಕುಟುಂಬದ ನಿರ್ವಹಣೆ ಜತೆಗೆ ಸಾಮಾಜಿಕ, ರಾಜಕೀಯ ಸಹಿತ ವಿeನ, ತಂತ್ರeನ ಕ್ಷೇತ್ರದಲ್ಲಿ ಅಸಾಮಾನ್ಯ ಸಾಧನೆಯ ಮೂಲಕ ಪುರುಷ ಪ್ರಧಾನ ಸಮಾಜದಲ್ಲಿ ಬದಲಾವಣೆಯ ಹೊಸತನಕ್ಕೆ ಸಾಕ್ಷಿಯಾಗಿzರೆ ಎಂದರು.
ಮಹಿಳೆಯರು ಕೇವಲ ಸರ್ಕಾರಿ ಖಾಸಗಿ ಕ್ಷೇತ್ರದಲ್ಲಿನ ಸೇವೆಯಿಂದ ಮಾತ್ರ ಆರ್ಥಿಕವಾಗಿ ಸದೃಢರಾಗಲು ಸಾಧ್ಯ ಎಂಬ ಭ್ರಮೆಯಿಂದ ಹೊರಬಂದು ಸ್ವ ಉದ್ಯೋಗಕ್ಕೆ ಹೆಚ್ಚಿನ ಗಮನ ನೀಡುವಂತೆ ತಿಳಿಸಿದ ಅವರು, ದೇಶದಲ್ಲಿ ಅತಿಯಾದ ಜನಸಂಖ್ಯೆ ಸ್ಪೋಟದಿಂದ ಸರ್ಕಾರ ಪ್ರತಿಯೊ ಬ್ಬರಿಗೂ ಉದ್ಯೋಗ ದೊರಕಿಸಿ ಕೊಡಲು ಅಸಾಧ್ಯ ಈ ದಿಸೆಯಲ್ಲಿ ಸ್ವ ಉದ್ಯೋಗಕ್ಕೆ ಸರ್ಕಾರ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ ಈ ದಿಸೆಯಲ್ಲಿ ಸರ್ಕಾರದ ಪ್ರೋತ್ಸಾಹ ಸೌಲಭ್ಯವನ್ನು ಬಳಸಿಕೊಂಡು ಸ್ವ ಉದ್ಯೋಗ ಕೈಗೊಳ್ಳುವ ಬಗ್ಗೆ ಮಹಿಳೆಯರು ಹೆಚ್ಚು ನಿಗಾವಹಿಸುವಂತೆ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಕಾಲೇಜಿನ ಮಹಿಳಾ ಸಬಲೀಕರಣ ಕೋಶದ ಸಂಚಾಲಕಿ ಸುಮಾ ವಹಿಸಿದ್ದರು. ಎಲಿಗೆಂಟ್ ಸಂಸ್ಥೆಯ ಕಾರ್ಯದರ್ಶಿ ಕುಮಾರ್ ಸಂಸ್ಥೆ ವತಿಯಿಂದ ದೊರೆಯುವ ಹೊಸ ಯೋಜನೆ ಬಗ್ಗೆ ತಿಳಿಸಿ ಸ್ವ -ಉದ್ಯೋಗ ಮಹಿಳೆಯರಿಗೆ ಅತಿ ಅಗತ್ಯ ಎಂದು ತಿಳಿಸಿದರು.
ಸಂಸ್ಥೆಯ ಗೌರವಾಧ್ಯಕ್ಷ ಕಿರಣ್ ಕುಮಾರ್ ಪ್ರಾತ್ಯಕ್ಷಕೆಯ ಮೂಲಕ ಜೀವನದಲ್ಲಿ ಕೌಶಲ್ಯ ಅಗತ್ಯ ಎಂಬುದನ್ನು ಪ್ರಸ್ತುತ ಪಡಿಸಿದರು. ಪ್ರಾಸ್ತಾವಿಕವಾಗಿ ಕಾಲೇಜಿನ ಪ್ಲೇಸ್ಮೆಂಟ್ ಸೆಲ್ ಸಂಚಾಲಕಿ ಡಾ.ಮಂಜುಳ ಮಾತನಾಡಿ, ಬದುಕು ಕಟ್ಟಿಕೊಳ್ಳಲು ನೆರವಾಗುವುದು ತರಬೇತಿ ಕಾರ್ಯಾಗಾರದ ಉದ್ದೇಶ ಎಂದು ತಿಳಿಸಿದರು. ಮುಖ್ಯ ಅತಿಥಿ ಸೌಭಾಗ್ಯ ಹಾಗೂ ಆಶಾ ವೈಯುಕ್ತಿಕ ಅನುಭವ ಹಂಚಿಕೊಂಡು ಸ್ವ- ಉದ್ಯೋಗದಲ್ಲಿನ ಸವಾಲುಗಳನ್ನು ಸ್ವೀಕರಿಸುವಂತೆ ಸಲಹೆ ನೀಡಿದರು. ನಂತರದಲ್ಲಿ ಮೇಕಪ್ ಪ್ರಾತ್ಯಕ್ಷಿಕೆ ಮೂಲಕ ಶಿಬಿರಾರ್ಥಿಗಳಿಗೆ ಉತ್ಸಾಹ ತುಂಬಲಾಯಿತು. ಬೋಧಕ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.