ಮಹಿಳೆ ಅಡುಗೆ ಮನೆಗೆ ಸೀಮಿತವಲ್ಲ:ಗಾಯಿತ್ರಿ ಸಿದ್ದೇಶ್ವರ್
ದಾವಣಗೆರೆ : ಹಿಂದೆ ಮಹಿಳೆ ಅಡುಗೆ ಮನೆಗೆ ಮಾತ್ರ ಸೀಮಿತ ಅನ್ನೋ ಮಾತಿತ್ತು. ಈಗಿನ ಮಹಿಳೆಯರು ಎಲ್ಲ ಕ್ಷೇತ್ರದಲ್ಲೂ ಸಾಧನೆ ಮಾಡುವ ಮೂಲಕ ನಾವು ಅಡುಗೆ ಮನೆಗೆ ಸೀಮಿತವಲ್ಲ. ಅಧಿಕಾರವನ್ನೂ ಮಾಡ್ತಿವಿ ಅಂತ ಸಾಬೀತು ಪಡಿಸುತ್ತಿzರೆ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ್ ತಿಳಿಸಿದರು.
ಹರಿಹರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ೧೫ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಪ್ರಚಾರ ಕಾರ್ಯ ನಡೆಸಿ ಮಾತನಾಡಿದ ಅವರು, ಅಂದು ಚಿತ್ರದುರ್ಗದ ಒನಕೆ ಓಬವ್ವ ತನ್ನ ಗಂಡನ ದಾಹ ತೀರಿಸಲು ನೀರು ತರುವ ವೇಳೆ ಹೈದರಾಲಿ ಸೈನ್ಯ ಕಂಡು ಹೆದರದೆ ಒಬ್ಬೊಂಟಿಯಾಗಿ ಹೋರಾಡಿ ಇಡೀ ಸೈನ್ಯವನ್ನೇ ಸರ್ವನಾಶ ಮಾಡಿದಳು. ಅಂತಹ ಧೀರ ಮಹಿಳೆ ನಮ್ಮ- ನಿಮ್ಮಂತಹ ಮಹಿಳೆಯರಿಗೆ ಆದರ್ಶವಾಗಿzರೆ ಎಂದರು.
ಪ್ರಧಾನಿ ಮೋದಿ ಅವರು ಕೂಡ ಮಹಿಳಾ ಶಕ್ತಿ, ಸಬಲೀಕರಣಕ್ಕೆ ಸಾಕಷ್ಟು ಯೋಜನೆ ಗಳನ್ನು ಜರಿಗೆ ತಂದಿzರೆ. ನಾರಿ ಶಕ್ತಿ ಬಗ್ಗೆ ಅವರಿಗಿರುವಷ್ಟು ಕಾಳಜಿ ಕಾಂಗ್ರೆಸ್ ನಾಯಕರಿಗಿಲ್ಲ. ದೇಶದ ಸಂಸ್ಕತಿ, ಪರಂಪರೆ, ಇತಿಹಾಸ ಉಳಿಸುವ ಕೆಲಸವನ್ನು ನರೇಂದ್ರ ಮೋದಿ ನೇತತ್ವದ ಕೇಂದ್ರ ಸರ್ಕಾರ ಅಚ್ಚುಕಟ್ಟಾಗಿ ಮಾಡುತ್ತಿದೆ. ಅದಕ್ಕಾಗಿ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಬೇಕು ಎಂದರು.
ಮಹಿಳೆಯರು ರಾಜಕಾರಣಕ್ಕೆ ಬರಬೇಕು ಅನ್ನೋ ದೃಢ ಸಂಕಲ್ಪ ದಿಂದ ನನ್ನಂತಹ ಮಹಿಳೆಯರಿಗೆ ಲೋಕಸಭೆಗೆ ಹೋಗಲು ಅವಕಾಶ ಮಾಡಿಕೊಟ್ಟಿzರೆ. ನೀವೆಲ್ಲ ನನ್ನನ್ನು ಗೆಲ್ಲಿಸಿ ಕಳುಹಿಸುವ ಮೂಲಕ ಮೋದಿ ಅವರ ಕೈ ಬಲಪಡಿಸಬೇಕು. ವಿಕಸಿತ ಭಾರತ ನಿರ್ಮಾಣಕ್ಕೆ ಈ ಮೂಲಕ ನೀವು ಸಹಾಯ ಮಾಡಬೇಕು ಎಂದು ಮನವಿ ಮಾಡಿದರು.
ಹರಿಹರ ಶಾಸಕ ಬಿ.ಪಿ. ಹರೀಶ್, ಬಿಜೆಪಿ ಮಾಜಿ ಜಿಧ್ಯಕ್ಷ ಹನಗವಾಡಿ ವೀರೇಶ್, ಜಿ.ಎಸ್. ಅಶ್ವನಿ, ಪ್ರೇಮಮ್ಮ, ಜಯಮ್ಮ, ಬಿ.ಎಂ.ಮರುಳು ಸಿದ್ದಪ್ಪ, ಸಿದ್ದೇಗೌಡರು, ಹನುಮಂತಗೌಡರು, ಪರಮೇಶ್ವರಪ್ಪ, ಶಾಂತಕುಮಾರ್, ಮಹಿಳಾ ಮೋರ್ಚಾದ ಸಾಕ್ಷಿ ಸಿಂಧಿ, ರೂಪಾ, ಗ್ಯಾರಳ್ಳಿ ಶಿವಣ್ಣ, ರಾಜು ಮತ್ತು ಸಾವಿರಾರು ಬಿಜೆಪಿ ಕಾರ್ಯಕರ್ತರು ಪ್ರಚಾರದುದ್ದಕ್ಕೂ ಸಾಥ್ ನೀಡಿದರು.