ಕಾಂಗ್ರೆಸ್ ಗ್ಯಾರೆಂಟಿ ಯೋಜನೆಗಳ ಸುವರ್ಣ ಯುಗ ಶಿವಮೊಗ್ಗದಿಂದಲೇ ಆರಂಭಿಸಲು ಗೀತಾರನ್ನು ಗೆಲ್ಲಿಸಿ…

19-randeep-surjiwala-congre

ಶಿವಮೊಗ್ಗ: ರಾಜ್ಯ ಸರ್ಕಾರದ ಗ್ಯಾರಂಟಿಯ ಜೊತೆಗೆ ಕೇಂದ್ರದ ಕಾಂಗ್ರೆಸ್ಸ್‌ನ ಗ್ಯಾರಂಟಿಗಳು ದೇಶದ ಪ್ರತಿಯೊಬ್ಬ ನಾಯಕರುಗಳಿಗೆ ತಲುಪಲಿದ್ದು, ಕೇಂದ್ರದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾಕ್ಕೆ ಬರಲಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೀವಾಲ ಹೇಳಿzರೆ.
ಜಿ ಕಾಂಗ್ರೆಸ್ ಕಚೇರಿಯಲ್ಲಿ ಗ್ಯಾರಂಟಿ ಹಬ್ಬ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ರಾಜ್ಯದಲ್ಲಿ ಗ್ಯಾರಂಟಿಯನ್ನು ಘೋಷಿಸಿದಾಗ ನರೇಂದ್ರ ಮೋದಿ, ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರೆಲ್ಲರೂ ಅಪಹಾಸ್ಯ ಮಾಡಿ ನಕ್ಕಿದ್ದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತಾನೇ ಗ್ಯಾರಂಟಿ ಕೊಡುವುದು ಎಂದು ಲೇವಡಿ ಮಾಡಿದ್ದರು. ಆದರೆ ಮತದಾರನ ಆಶೀರ್ವಾದದಿಂದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ನುಡಿದಂತೆ ನಡೆದಿದ್ದೇವೆ. ೬ ತಿಂಗಳ ಒಳಗೆ ಘೋಷಿತ ೫ ಗ್ಯಾರಂಟಿಗಳನ್ನು ನೀಡಿದ್ದೇವೆ ಎಂದರು.
೧ಕೋಟಿ ೩೦ಲಕ್ಷ ಮಹಿಳೆ ಯರಿಗೆ ಪ್ರತಿ ತಿಂಗಳು ೨೦೦೦ ರೂ. ಗಳು ಗಹಲಕ್ಷ್ಮೀ ಯೋಜನೆಯಡಿ ಅವರ ಖಾತೆಗೆ ಜಮಾವಾಗುತ್ತಿದೆ. ಅಕ್ಕಿ ಕೊಳೆಯುತ್ತ ಬಿದ್ದಿದ್ದರೂ ಸಹ ಕೇಂದ್ರದ ಬಿಜೆಪಿ ಸರ್ಕಾರ ರಾಜ್ಯಕ್ಕೆ ಅಕ್ಕಿ ಕೊಡಲು ನಿರಾಕರಿಸಿದರೂ ಕೂಡ ೫ ಕೆ.ಜಿ. ಅಕ್ಕಿ ಮತ್ತು ೫ ಕೆ.ಜಿ. ಅಕ್ಕಿಯ ಹಣವನ್ನು ನೀಡುತ್ತಿದ್ದೇವೆ. ಸುಮಾರು ೪.೪೯ ಕೋಟಿ ಜನರಿಗೆ ಇದರ ಲಾಭ ಸಿಗುತ್ತಿದೆ. ಯುವನಿಧಿಯಡಿ ೧.೫೦ ಲಕ್ಷ ಯುವಕರಿಗೆ ಗ್ಯಾರಂಟಿ ಸಿಗುತ್ತಿದೆ. ಅದು ಮುಂದಿನ ದಿನಗಳಲ್ಲಿ ೧೦ ಲಕ್ಷ ಯುವಕರಿಗೆ ಸಿಗಲಿದೆ. ಶಕ್ತಿ ಯೋಜನೆಯಡಿ ಪ್ರತಿನಿತ್ಯ ೩೫ ಲಕ್ಷ ಮಹಿಳೆಯರು ಉಚಿತವಾಗಿ ರಾಜ್ಯದಾದ್ಯಂತ ಪ್ರಯಣಿಸುತ್ತಿ zರೆ. ೧೭೭ ಕೋಟಿ ರೂ.ಗಳ ಪ್ರಯೋಜನ ಪಡೆದಿzರೆ ಎಂದರು.
೧.೧೮ ಕೋಟಿ ಗ್ರಾಹಕರಿಗೆ ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಇದರ ಜೊತೆಗೆ ಈಗ ರಾಷ್ಟ್ರೀಯ ಕಾಂಗ್ರೆಸ್‌ನಿಂದ ಮಹಾಲಕ್ಷ್ಮೀ ಯೋಜನೆಯಡಿ ಪ್ರತಿ ವರ್ಷ ಪ್ರತಿ ಕುಟುಂಬದ ಒಬ್ಬ ಮಹಿಳೆಗೆ ೧ ಲಕ್ಷ ನೀಡಲಾಗುತ್ತಿದ್ದು, ತಿಂಗಳಿಗೆ ೮,೩೦೦ ರೂ.ಸಿಗಲಿದೆ. ರಾಜ್ಯದ ಮಹಿಳೆಯರಿಗೆ ಗಹಲಕ್ಷ್ಮೀಯ ೨ ಸಾವಿರ ಸೇರಿ ೧೦,೩೦೦ ರೂ. ಸಿಗಲಿದೆ. ವಿದ್ಯಾವಂತ ನಿರುದ್ಯೋಗಿ ಗಳಿಗೂ ಕೂಡ ಯುವ ಬೆಳಕು ಯೋಜನೆಯಡಿ ಪ್ರತಿವರ್ಷ ೧ ಲಕ್ಷ ವೇತನ ಸಿಗಲಿದೆ. ಕೃಷಿ ಸಾಲ ಮನ್ನಾಕ್ಕೆ ಶಾಶ್ವತ ಆಯೋಗ ರಚನೆ ಮಾಡಿ, ಇಡೀ ದೇಶದ ಎ ರೈತರಿಗೆ ೨ ಲಕ್ಷ ರೂ.ಗಳವರೆಗೆ ಸಾಲ ಮನ್ನಾ ಮಾಡಲಾಗುವುದು. ರಾಷ್ಟ್ರೀಯ ಕನಿಷ್ಟ ವೇತನಯಡಿ ನರೇಗಾ ಕಾರ್ಮಿಕರಿಗೆ ಶ್ರಮಿಕ್ ನ್ಯಾಯ ಯೋಜನೆಯಡಿ ದಿನಕ್ಕೆ ೪೦೦ ರೂ. ಕೂಲಿ ಮತ್ತು ರಾಜ್ಯದ ೧೩೦ ರೂ. ಸೇರಿ ೫೩೦ ರೂ.ಗಳು ಕೂಲಿ ಸಿಗಲಿದೆ. ಸಾಮಾಜಿಕ ಮತ್ತು ಆರ್ಥಿಕ ಸಮಾನತೆಗಾಗಿ ಜತಿ ಗಣತಿಯನ್ನು ಕೂಡ ಮಾಡಲಾಗು ವುದು. ರೈತರಿಗೆ ಎಂಎಸ್‌ಪಿ ಬೆಲೆ ನಿಗಧಿಪಡಿಸಲು ಕಾನೂನು ರಚಿಸ ಲಾಗುವುದು. ೫ನೇ ಗ್ಯಾರಂಟಿ ಯಾಗಿ ದೇಶದ ಎ ಪರಿವಾರಕ್ಕೆ ಸರ್ಕಾರದಿಂದಲೇ ಪ್ರೀಮಿಯಂ ಭರಿಸಿ ೨೫ ಲಕ್ಷ ರೂ.ಗಳ ಆರೋಗ್ಯ ವಿಮೆಯನ್ನು ನೀಡಲಾಗುವುದು. ಇದರಿಂದ ಕ್ಯಾಶ್‌ಲೆಸ್ ಚಿಕಿತ್ಸೆಯನ್ನು ಪಡೆಯಬಹುದು ಎಂದರು.
ಇದಕ್ಕೆಲ್ಲ ಶಿವಮೊಗ್ಗದಿಂದಲೇ ಮೊದಲ ಜಯದ ಬಾವುಟ ಹಾರಿಸಬೇಕು. ಗೀತಾ ಶಿವರಾಜ್ ಕುಮಾರ್ ಅವರನ್ನು ಹೆಚ್ಚಿನ ಮತಗಳಿಂದ ಗೆಲ್ಲಿಸಬೇಕು. ನಮ್ಮ ಬೂತ್ ನಮ್ಮ ಜವಬ್ದಾರಿ ಎಂಬ ಅಭಿಯಾನ ಪ್ರಾರಂಭಿಸಲಾಗಿದ್ದು, ಪ್ರತಿ ಮನೆಗೆ ಬೆಳಿಗ್ಗೆ ಕಾರ್ಯ ಕರ್ತರು ಬೂತ್ ಮಟ್ಟದಲ್ಲಿ ಮನೆಮನೆಗೆ ತೆರಳಿ ರಾಷ್ಟ್ರೀಯ ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ತಿಳುವಳಿಕೆ ನೀಡಬೇಕು. ಊಟ ನಿದ್ರೆ ಬಿಟ್ಟು ಕಾಂಗ್ರೆಸ್ ಕಾರ್ಯಕರ್ತರು ಈ ಕಾರ್ಯವನ್ನು ಮಾಡಬೇಕು. ಮಂತ್ರಿಯೇ ಇರಲಿ, ಯಾವುದೇ ದೊಡ್ಡ ಪದಾಧಿಕಾರಿಗಳು ಇದ್ದರೂ ಸಹ ಪಕ್ಷದ ಕೆಲಸವನ್ನು ಮಾಡದಿದ್ದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದರು.
ರಾಜ್ಯದ ಕಾನೂನು ಸುವ್ಯವಸ್ಥೆಗೆ ಯಾವ ಜತಿ ಧರ್ಮ ದವರಿಗೂ ಕೂಡ ಬಿಡುವ ಪ್ರಶ್ನೆಯೇ ಇಲ್ಲ. ಅಪರಾಧಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು. ಜಿಎಸ್‌ಟಿಯಿಂದ ಕೇಂದ್ರಕ್ಕೆ ನೂರು ರೂ. ರಾಜ್ಯದಿಂದ ಹೋದರೆ, ಕೇವಲ ೧೩ ರೂ. ಸಿಗುತ್ತಿದ್ದು, ರಾಜ್ಯ ಬರಗಾಲದಿಂದ ಬಳಲುತ್ತಿದ್ದರು ಕೂಡ ಕೇಂದ್ರ ಸರ್ಕಾರ ರಾಜ್ಯದ ಪಾಲನ್ನು ನೀಡಿಲ್ಲ. ನಾವು ಅಧಿಕಾರಕ್ಕೆ ಜೂ.೩ರ ಬಳಿಕ ಬಂದ ನಂತರ ಜಿ.ಎಸ್.ಟಿ. ಯನ್ನು ರದ್ದುಪಡಿಸ ಲಾಗುವುದು. ಈಗ ೭ ವಿಧಗಳಿಂದ ಜಿಎಸ್‌ಟಿ ಸಂಗ್ರಹ ಮಾಡುತ್ತಿzರೆ. ಈ ಅವೈeನಿಕ ತೆರಿಗೆ ಪದ್ಧತಿಯನ್ನು ತೆಗೆಯುತ್ತೇವೆ ಎಂದರು.
ಬಿಜೆಪಿ ೨೦೦ ಸ್ಥಾನಗಳನ್ನು ದಾಟಲ್ಲ. ಮೋದಿ ಸರ್ಕಾರ ಮತದಾರರ ಕೈಗೆ ಚೆಂಬು ನೀಡುವ ಸರ್ಕಾರ ಎಂದು ಚೆಂಬು ಇರುವ ಜಹಿರಾತನ್ನು ಪ್ರದರ್ಶಿಸಿದರು. ೨ ಕೋಟಿ ನೌಕರಿ ನೀಡಿಲ್ಲ. ೧೫ ಲಕ್ಷ ಖಾತೆಗೆ ಜಮಾ ಮಾಡಿಲ್ಲ, ನಮಗೆ ಮತದಾರರೇ ದೇವರು ಎಂದರು.
ಈ ಸಂದರ್ಭದಲ್ಲಿ ಜಿ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್, ಶಾಸಕರಾದ ಬೇಳೂರು ಗೋಪಾಲಕಷ್ಣ, ಬಿ.ಕೆ. ಸಂಗಮೇಶ್, ಮಂಜುನಾಥ ಭಂಡಾರಿ, ಪ್ರಮುಖರಾದ ಎಂ.ಶ್ರೀಕಾಂತ್, ಹೆಚ್.ಸಿ. ಯೋಗೀಶ್, ಹೆಚ್.ಎಸ್. ಸುಂದರೇಶ್, ವಿಜಯಕುಮಾರ್ ಧನಿ, ಚಂದ್ರಭೂಪಾಲ್, ಎನ್. ರಮೇಶ್, ಡಾ. ಶ್ರೀನಿವಾಸ ಕರಿಯಣ್ಣ, ಅನಿತಾಕುಮಾರ್, ಕಲೀಂ ಪಾಶಾ, ರವಿಕುಮಾರ್, ಪಲ್ಲವಿ, ಗಿರೀಶ್ , ರಂಗನಾಥ್, ರೇಖಾ ರಂಗನಾಥ್, ಮತ್ತಿತರರು ಇದ್ದರು.