ಸಮರ್ಥ ನಾಯಕರನ್ನು ಸ್ವಾಗತಿಸುವುದರಲ್ಲಿ ತಪ್ಪೇನಿದೆ: ಮುಕ್ತಿಯಾರ್ ಅಹಮದ್…
ಶಿವಮೊಗ್ಗ : ಸೌಹಾರ್ದತೆಯ ತವರೂರಾದ ಶಿವಮೊಗ್ಗ ನಗರದಲ್ಲಿ ಶಾಂತಿ, ಸೌಹಾರ್ದತೆ ಪುನರ್ ಸ್ಥಾಪಿಸಲು ಈ ಬಾರಿ ಚುನಾವಣೆ ಯಲ್ಲಿ ಬಿಜೆಪಿಯನ್ನು ಸೋಲಿಸಲೇ ಬೇಕಾದ ಅನಿವಾರ್ಯತೆ ಇದೆ ಎಂದು ಜಿ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಮುಕ್ತಿಯಾರ್ ಆಹಮ್ಮದ್ ಹೇಳಿzರೆ.
ಶಿವಮೊಗ್ಗ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಪಕ್ಷ ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ಸಂಘಟನಾತ್ಮಕ ಶಕ್ತಿಯಿಂದ ಹೋರಾಡಿ ಗೆಲುವು ಸಾಧಿಸುವ ದಿಕ್ಕಿನಲ್ಲಿ ಕಾಂಗ್ರೇಸ್ ಹೈಕಮಾಂಡ್ ಮುಂದಾಗಬೇಕು ಎಂದು ಮನವಿ ಮಾಡಿದ್ದಾರೆ.
ಈ ಬಾರಿ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಬಯಸಿ ಈಗಾಗಲೆ ಟಿಕೆಟ್‌ಗಾಗಿ ೧೧ ಮಂದಿ ಮೂಲ ಕಾಂಗ್ರೆಸ್ಸಿಗರು ಅರ್ಜಿ ಸಲ್ಲಿಸಿರುವುದು ಸರಿಯಷ್ಟೆ. ಆದರೆ ಈ ೧೧ ಜನರಿಗೂ ಬಿಜೆಪಿ ವಿರುದ್ದ ರಾಜೀ ರಹಿತವಾಗಿ ಹೋರಾಡುವ ಶಕ್ತಿಯಾಗಲಿ, ಸಾಮರ್ಥ್ಯವಾಗಲಿ ಕಂಡುಬರುತ್ತಿಲ್ಲ. ಕೇವಲ ಸ್ಪರ್ಧೆಯ ನೆಪದಲ್ಲಿ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳುವ ಹಿತಾಸಕ್ತಿ ಇದೆಯೇ ವಿನಃ ಇವರುಗಳಿಗೆ ಬಿಜೆಪಿ ವಿರುದ್ದ ಬದ್ದತೆಯಿಂದ ಹೋರಾಡುವ ಇಚ್ಛಾಶಕ್ತಿಯ ಕೊರತೆ ಎದ್ದುಕಾಣುತ್ತಿದೆ. ಈ ಕಾರಣದಿಂದ ಜಾತ್ಯತೀತವಾಗಿ ಚಿಂತಿಸುವ ಮತ್ತು ನಗರದಲ್ಲಿ ಸೌಹಾರ್ದತೆ ಬಯಸುವ ಮತ್ತು ಎಲ್ಲರನ್ನೂ ಪ್ರಿತಿಯಿಂದ ಒಟ್ಟಾಗಿ ಕೊಂಡೊಯ್ಯುವ ಸಾಮರ್ಥ್ಯವಿರುವ ಯಾವುದೇ ಸಮಾಜದ ಮುಖಂಡರು ಪಕ್ಷಕ್ಕೆ ಬರುವುದನ್ನು ಸ್ವಾಗತಿಸುವುದರಲ್ಲಿ ತಪ್ಪಿಲ್ಲ ಎಂದಿzರೆ.
ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿರುವ ೧೧ ಜನ ಆಕಾಂಕ್ಷಿಗಳು ಇದುವರೆಗೂ ಪರಸ್ಪರ ಒಬ್ಬರನ್ನೊಬ್ಬರು ಕಾಲೆಳೆದಾಟದಲ್ಲಿ ತೊಡಗಿದ್ದವರು. ಇದೀಗ ಪಕ್ಷದ ನಾಯಕರ ಮುಂದೆ ತಮ್ಮ ಸ್ವಾರ್ಥ ರಾಜಕಾರಣಕ್ಕಾಗಿ ಪರಸ್ಪರ ಒಗ್ಗಟ್ಟನ್ನು ಪ್ರದರ್ಶಿಸಿರುವುದು ಸೋಜಿಗದ ಸಂಗತಿ. ಇದರ ಹಿಂದೆ ಬಿಜೆಪಿ ಅಭ್ಯರ್ಥಿಗೆ ಅನುಕೂಲಕರ ವಾತಾವರಣ ಮಾಡಿಕೊಡುವ ಷಡ್ಯಂತ್ರವಿದೆ ಎಂಬುದನ್ನು ಕೆಪಿಸಿಸಿ ಅಧ್ಯಕ್ಷರು ಅರ್ಥಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದ್ದಾರೆ.
ಈಗಾಗಲೆ ಆಯನೂರು ಮಂಜುನಾಥ್ ಅವರು ಕಾಂಗ್ರೆಸ್ ಪಕ್ಷ ಸೇರಲಿzರೆ ಎಂಬ ಸುದ್ದಿ ಇದೆ. ಇದು ನಿಜವೇ ಆಗಿದ್ದರೆ ಇದೊಂದು ಆಶಾದಾಯಕ ಬೆಳವಣಿಗೆ ಯಾಗುತ್ತದೆ. ಆಯನೂರು ಮಂಜುನಾಥ್ ಅವರ ಕಾಂಗ್ರೆಸ್ ಸೇರ್ಪಡೆ ಜಿಯಲ್ಲಿ ಕಾಂಗ್ರೆಸ್ ಎದುರಿಸುತ್ತಿರುವ ನಾಯಕತ್ವ ಕೊರತೆಯನ್ನು ನೀಗಿಸಬಹುದು. ಕಾಂಗ್ರೆಸ್‌ನ ಸಾಂಪ್ರಾಯಿಕ ಮತಗಳ ಜೊತೆಗೆ ಆಯನೂರು ಮಂಜುನಾಥ್ ಅವರ ದಿಟ್ಟ ನಾಯಕತ್ವ, ಸಂಘಟನಾ ಶಕ್ತಿಯಿಂದ ಕಾಂಗ್ರೆಸ್‌ಗೆ ಗೆಲುವು ಸಾಧ್ಯವಾಗುವುದಲ್ಲದೆ ಜಿಯ ಇತರೆ ವಿಧಾನಸಭಾ ಕ್ಷೇತ್ರಗಳ ಮೇಲೂ ಪ್ರಭಾವ ಬೀರಿ ಜಿಲ್ಲೆ/ಯಲ್ಲಿ ಕಾಂಗ್ರೆಸ್‌ಗೆ ಶಕ್ತಿ ಬರಲಿದೆ. ಆಯನೂರು ಮಂಜುನಾಥ್ ಅವರು ಪಕ್ಷಕ್ಕೆ ಬರುವುದಾದರೆ ಮುಸ್ಲಿಂ ಸಮುದಾಯ ಅವರನ್ನು ಸ್ವಾಗತಿಸುತ್ತದೆ ಎಂದಿzರೆ.