ಯುದ್ದ ಟ್ಯಾಂಕರ್‌ಗೆ ಅದ್ದೂರಿ ಸ್ವಾಗತ…
ಶಿವಮೊಗ್ಗ: ಶಿವಮೊಗ್ಗ ನಗರಕ್ಕೆ ಇಂದು ಸಂತೋಷದ ದಿನವಾಗಿದೆ. ಸ್ವಾತಂತ್ರ್ಯದ ೭೫ರ ಸಂಭ್ರಮ ದಲ್ಲಿರುವ ನಾವು ಬಾಂಗ್ಲಾ ಮತ್ತು ಪಾಕಿಸ್ತಾನ ಯುದ್ಧದಲ್ಲಿ ಪಾಲ್ಗೊಂಡ ಟಿ-೫೫ ನಿಷ್ಕ್ರಿಯ ಯುದ್ಧ ಟ್ಯಾಂಕರ್ ಅನ್ನು ಇಂದು ನಗರಕ್ಕೆ ತರಲಾಗಿದೆ.
ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಮಹಾನಗರ ಪಾಲಿಕೆ ಮತ್ತು ನಿವೃತ್ತ ಸೈನಿಕರ ಸಂಘದಿಂದ ಟ್ಯಾಂಕರ್ ಅನ್ನು ಸಂಭ್ರಮದಿಂದ ಬರಮಾಡಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಸ್.ಎನ್. ಚನ್ನಬಸಪ್ಪ, ೨೦೨೦ರಲ್ಲಿ ರಕ್ಷಣಾ ಇಲಾಖೆಗೆ ನಿಷ್ಕ್ರಿಯ ಯುದ್ಧ ಟ್ಯಾಂಕರ್ ಅಥವಾ ವಿಮಾನಗಳನ್ನು ನೀಡುವಂತೆ ಮನವಿ ಮಾಡಿzವು. ಈಗ ಅದಕ್ಕೆ ಫಲ ಸಿಕ್ಕಿದೆ. ಸೈನಿಕ ಇಲಾಖೆಯ ಉಪನಿರ್ದೇಶಕ ಹಿರೇಮಠ್ ಅವರು ವಿಶೇಷ ಆಸಕ್ತಿ ವಹಿಸಿದ್ದರು. ಪೂನಾದ ರಕ್ಷಣಾ ಕಾರ್ಯಾಲಯದಿಂದ ಮೂರು ದಿನ ಪ್ರಯಾಣ ಮಾಡಿ ಯುದ್ಧ ಟ್ಯಾಂಕರ್ ನಗರಕ್ಕೆ ಆಗಮಿಸಿದೆ. ಇದು ೧೯೭೧ರ ಬಾಂಗ್ಲಾ ಯುದ್ಧದ ಗೆಲುವಿಗೆ ಕಾರಣವಾಗಿತ್ತು. ಈಗ ಇಲ್ಲಿ ಸ್ಥಾಪನೆಯಾಗುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಇದನ್ನು ಎಲ್ಲಿ ಸ್ಥಾಪಿಸಬೇಕೆಂದು ಇನ್ನೂ ಅಂತಿಮ ತೀರ್ಮಾನ ವಾಗಿಲ್ಲ. ಸದ್ಯದ ಇನ್ನೊಂದು ನಿಷ್ಕ್ರಿಯ ವಿಮಾನ ಕೂಡ ಬರಲಿದ್ದು, ಎಂ.ಆರ್.ಎಸ್. ವೃತ್ತ ಅಥವಾ ಫ್ರೀಡಂ ಪಾರ್ಕ್ ಅಥವಾ ಐಬಿ ಸರ್ಕಲ್ ನಲ್ಲಿ ಸ್ಥಾಪಿಸಲು ಯೋಚನೆ ಇದೆ .ಯುವಕರಲ್ಲಿ ಸೈನ್ಯಕ್ಕೆ ಸೇರ್ಪಡೆ ಆಗಬೇಕೆಂಬ ಮನೋಭಾವ ಬೆಳೆಸಲು ಶಿವಮೊಗ್ಗದ ಮುಖ್ಯ ವೃತ್ತದಲ್ಲಿ ಸ್ಥಾಪಿಸಲಾಗುವುದು. ಈ ಟ್ಯಾಂಕರ್‌ಗಾಗಿ ೨೦೨೨ರಲ್ಲಿ ಪಾಲಿಕೆ ಬಜೆಟ್‌ನಲ್ಲಿ ೨೫ ಲಕ್ಷ ರೂ. ಅನು ದಾನ ತೆಗೆದಿರಿಸಲಾಗಿತ್ತು ಎಂದರು.
ಮಾಜಿ ಸೈನಿಕರ ಸಂಘದ ಕಾರ್ಯದರ್ಶಿ ಉಮೇಶ್ ಬಾಪಟ್ ಮಾತನಾಡಿ, ನಮಗೆಲ್ಲರಿಗೂ ಇಂದು ಸಂಭ್ರಮದ ದಿನವಾಗಿದೆ. ಮಾಜಿ ಸೈನಿಕರ ಸಂಘ ಇದನ್ನು ತರಲು ತುಂಬಾ ಪ್ರಯತ್ನ ಮಾಡಿತ್ತು. ಯುವಕ, ಯುವತಿ ಯರಿಗೆ ಇದೊಂದು ಆಕರ್ಷಣೆ ಮತ್ತು ಪ್ರೇರಣೆಯಾಗಿದೆ. ಎ ನಗರಗಳಿಗೆ ಈ ಅವಕಾಶ ಸಿಕ್ಕಿಲ್ಲ. ಸಂಸದರ ಮತ್ತು ನಮ್ಮ ಸಂಘದ ಪ್ರಯತ್ನದಿಂದ ಮತ್ತು ಮಹಾನಗರ ಪಾಲಿಕೆ ಆಸಕ್ತಿಯಿಂದ ಇದು ಸಾಧ್ಯ ವಾಗಿದೆ. ಈ ಟ್ಯಾಂಕ್ ಯು.ಎಸ್. ಎಸ್.ಆರ್.(ರಷ್ಯಾ)ನಲ್ಲಿ ನಿರ್ಮಾ ಣಗೊಂಡಿತ್ತು. ಇಂಡೋ ಪಾಕ್ ಮತ್ತು ಇಂಡೋ -ಬಾಂಗ್ಲಾ ಯುದ್ಧ ದಲ್ಲಿ ಇದು ಬಳಕೆಯಾಗಿದೆ ಎಂದರು.
ಆಯುಕ್ತ ಮಾಯಣ್ಣಗೌಡ ಮಾತನಾಡಿ, ಭಾರತ ರಕ್ಷಣಾ ಇಲಾಖೆಯಿಂದ ಈ ಟಿ-೫೫ ನಿಷ್ಕ್ರಿಯ ಯುದ್ಧ ಟ್ಯಾಂಕ್ ನಮ್ಮ ಕೋರಿಕೆ ಮೇರೆಗೆ ನೀಡಿದ್ದು, ಆ. ೧೫ ರೊಳಗೆ ಅದನ್ನು ಪಡೆಯಬೇಕೆಂದು ತಿಳಿಸಲಾಗಿತ್ತು. ಹಾಗಾಗಿ ನಾವು ಸಮರೋಪಾದಿಯಲ್ಲಿ ಕ್ರಮ ಕೈಗೊಂಡು ಶಿವಮೊಗ್ಗಕ್ಕೆ ನಗರಕ್ಕೆ ಬರಮಾಡಿಕೊಂಡಿದ್ದೇವೆ. ಒಂದು ವಾರದೊಳಗೆ ಜಿಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿ ಎಲ್ಲಿ ಸ್ಥಾಪಿಸಬೇಕು ಎಂದು ತೀರ್ಮಾನ ಕೈಗೊಳ್ಳುತ್ತೇವೆ. ಎಂ.ಆರ್.ಎಸ್. ವೃತ್ತದಲ್ಲಿ ಮೇಲ್ಸೇತುವೆ ಕಾಮಗಾರಿ ನಡೆಯುಲಿರುವುದರಿಂದ ಸದ್ಯಕ್ಕೆ ಭದ್ರತೆ ದೃಷ್ಠಿಯಿಂದ ಎಂ.ಆರ್.ಎಸ್. ವೃತ್ತದ ಬಳಿ ಇರುವ ಜಗದಲ್ಲಿ ಸೂಕ್ತ ಭದ್ರತೆ ಯೊಂದಿಗೆ ಅದನ್ನು ಇರಿಸಿದ್ದೇವೆ. ಅದಕ್ಕೆ ಸೂಕ್ತ ಕಟ್ಟೆ ನಿರ್ಮಿಸಿ ಸಾರ್ವಜನಿಕರ ಪ್ರದರ್ಶನಕ್ಕೆ ಇಡಲಾಗುವುದು. ಅದರ ಬಗ್ಗೆ ಕೂಲಂಕಷ ಮಾಹಿತಿ ಕೂಡ ಕೆತ್ತನೆ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್. ರುದ್ರೇಗೌಡ, ಮೇಯರ್ ಶಿವಕುಮಾರ್, ಉಪ ಮೇಯರ್ ಲಕ್ಷ್ಮಿ ಶಂಕರ್ ನಾಯ್ಕ್, ಸರ್ಕಾರಿ ನೌಕರರ ಸಂಘದ ರಾಜಧ್ಯಕ್ಷ ಸಿ.ಎಸ್. ಷಡಾಕ್ಷರಿ, ಪಾಲಿಕೆ ಸದಸ್ಯರಾದ ಸುವರ್ಣಾ ಶಂಕರ್, ಸುರೇಖಾ ಮುರಳೀಧರ್, ವಿಶ್ವನಾಥ್, ಪ್ರಭಾಕರ್, ಮಂಜು ನಾಥ್, ಅನಿತಾ ರವಿಶಂಕರ್, ಧೀರರಾಜ್ ಹೊನ್ನವಿಲೆ, ಮಾಜಿ ಸೈನಿಕರ ಪುನರ್ವಸತಿ ಕಲ್ಯಾಣ ಇಲಾಖೆ ನಿರ್ದೇಶಕ ಹಿರೇಮಠ್, ವೈ.ಹೆಚ್. ನಾಗರಾಜ್, ಡಾ. ಧನಂಜಯ ಸರ್ಜಿ, ಎಸ್. ದತ್ತಾತ್ರಿ ಮೊದಲಾದವರಿದ್ದರು.