ಇಸ್ಲಾಮೀಕರಣದ ಯುದ್ಧ ಆರಂಭ: ಕಾರಂತ್ ಆರೋಪ…
ಶಿವಮೊಗ್ಗ: ಇಸ್ಲಾಮಿಕ್ ಮೂಲಭೂತ ವಾದಿಗಳಿಗೆ ಕಾಂಗ್ರೆಸ್ ಸರ್ಕಾರ ಶರಣಾಗಿದ್ದು, ಭಾರತದಲ್ಲಿ ಇಸ್ಲಾಮೀಕರಣ ಯುದ್ಧ ಆರಂಭವಾಗಿದೆ ಎಂದು ಮಧ್ಯ ಪ್ರಾಂತ್ಯ ಹಿಂದೂ ಜಗರಣಾ ವೇದಿಕೆಯ ಪ್ರಮುಖರಾದ ಜಗದೀಶ್ ಕಾರಂತ್ ಸುದ್ದಿಗೋಷ್ಟಿಯಲ್ಲಿ ಹೇಳಿzರೆ.
ಹಿಂದೂ ಜಗರಣಾ ವೇದಿಕೆ ಹಿಂದೂಗಳ ಸ್ವಾಭಿಮಾನದ ಚಳುವಳಿಯಾಗಿದ್ದು, ನಮ್ಮ ನೆಲೆ ಭಾರತದ ಸುರಕ್ಷತೆಯ ಹೊಣೆ ಹಿಂದೂಗಳzಗಿದೆ. ಕಳೆದ ೪೦ ವರ್ಷಗಳಿಂದ ಹಿಂದೂ ಜಗರಣಾ ವೇದಿಕೆ ಹಿಂದೂಗಳ ರಕ್ಷಣೆ ಮತ್ತು ಸುರಕ್ಷತೆಯನ್ನು ಪ್ರತಿಪಾದಿಸುತ್ತಾ ಬಂದಿದೆ. ಶಿವಮೊಗ್ಗದಲ್ಲಿ ಕಳೆದ ೧೦ ವರ್ಷಗಳ ಬೆಳವಣಿಗೆ ಗಮನಿಸಿ ದಾಗ, ಇಸ್ಲಾಮಿಕ್ ಬೆಳವಣಿಗೆ ಇತಿಹಾಸ ಇಲ್ಲಿ ಕಂಡುಬರುತ್ತಿದ್ದು, ಪ್ರತಿಶತ ೨೫ರ ಗಡಿಯನ್ನು ಈಗಾಗಲೇ ಮುಸ್ಲಿಮರು ದಾಟಿ zರೆ. ಈಗ ಹಿಂದೂಗಳು ಅವರನ್ನು ಎದುರಿಸಬೇಕು. ಇಲ್ಲ ಶರಣಾಗತ ರಾಗಬೇಕು. ಅಥವಾ ಪಲಾಯನ ಮಾಡಬೇಕೋ ಎಂಬ ಜಿeಸೆಯಲ್ಲಿzರೆ. ಇವರ ಹಿಂದೆ ಇರುವ ಮೂಲವನ್ನು ಗುರುತಿಸ ಬೇಕಾಗಿದೆ. ಕಾಶ್ಮೀರದ ಕಣಿವೆಯಲ್ಲಿ ಯಾವ ರೋಗದಿಂದ ಹಿಂದುಗಳು ನರಳಿ ನರಳಿ ಸಾಯುತ್ತಿzರೋ ಬಂಗಾಳದ ಕೆಲವೆಡೆ ಮತ್ತು ಕೇರಳದಲ್ಲಿ ಹಿಂದೂಗಳ ಮೇಲೆ ಏನು ನಡೆಯುತ್ತಿದೆಯೋ ಅದು ಎ ಭಾಗಗಳಲ್ಲಿ ವಿಸ್ತರಿಸಿ ಬಿಡಿಬಿಡಿಯಾಗಿ ಇಸ್ಲಾಮೀಕರಣ ಗೊಳಿಸುವ ರಣನೀತಿಯಾಗಿದ್ದು, ಅದರ ಪ್ರಯೋಗ ಶಿವಮೊಗ್ಗದಲ್ಲಿ ನಡೆಯುತ್ತಿದೆ ಎಂದರು.
ಅವರ ಪ್ರಯೋಗದ ಭಯಾನಕತೆ ಅರ್ಥ ಮಾಡಿಕೊಳ್ಳಬೇಕು. ನಮ್ಮ ಮಕ್ಕಳ, ಮೊಮ್ಮಕ್ಕಳ ಬದುಕನ್ನು ಚಿಂತಿಸುವ ಕಾಳಜಿ ತೋರಿಸದಿದ್ದರೆ ಹಿಂದೂಗಳಿಗೆ ಅಪಾಯ ಕಟ್ಟಿಟ್ಟ ಬುತ್ತಿ ಎಂದರು.
ರಾಜ್ಯ ಸರ್ಕಾರದ ನಿಲುವು ರಾಗಿಗುಡ್ಡ ಘಟನೆಗೆ ಸಂಬಂಧಿಸಿ ದಂತೆ ನೂರಕ್ಕೆ ನೂರು ಪಕ್ಷಪಾತಿ ಧೋರಣೆಯಿಂದ ಕೂಡಿದೆ. ಡಿಜೆಹಳ್ಳಿ, ಕೆ.ಜೆ.ಹಳ್ಳಿ, ಮಡಿಕೇರಿ, ಹುಬ್ಬಳ್ಳಿಯ ಗಲಭೆ ಮಾಡಿದವರನ್ನು ಸರ್ಕಾರ ರಕ್ಷಿಸಿ ಮೊಕದ್ದಮೆ ಹಿಂಪಡೆಯುತ್ತಿದೆ. ಈ ಮೂಲಕ ಇಸ್ಲಾಮಿಕ್ ಮೂಲಭೂತ ವಾದಿಗಳಿಗೆ ಸಿದ್ದರಾಮಯ್ಯ ಸರ್ಕಾರ ಶರಣಾಗಿದೆ ಎಂದರು.
ಸರ್ಕಾರ ತೇಪೆ ಹಾಕುವ ಕೆಲಸ ಮಾಡುತ್ತಿದ್ದು, ಜಿಲ್ಲಾ ರಕ್ಷಣಾಧಿಕಾರಿಗಳು ಒತ್ತಡಕ್ಕೆ ಮಣಿದು ಹಿಂದೂ, ಮುಸ್ಲಿಂ, ಕ್ರೈಸ್ತ ಈ ಮೂರು ಸಮಾಜದವರು ಗಲಭೆ ಯಲ್ಲಿ ಪಾಲ್ಗೊಂಡಿzರೆ ಎಂದು ಹೇಳಿಕೆ ನೀಡುವ ಮೂಲಕ ಇಡೀ ಪ್ರಕರಣವನ್ನು ದಿಕ್ಕು ತಪ್ಪಿಸುತ್ತಿzರೆ. ಮುಖ್ಯಮಂತ್ರಿಗಳ ಖುರ್ಚಿಯಲ್ಲಿ ಕುಳಿತವರು ಎಲ್ಲರನ್ನೂ ಸಮಾನ ಭಾವನೆಯಿಂದ ಕಾಣಬೇಕು. ಹಿಂದೂಗಳಿಗೆ ಅನ್ಯಾಯವಾಗು ವುದನ್ನು ತಡೆಹಿಡಿಯಿರಿ ಎಂದು ನಾವು ಮತ್ತೊಮ್ಮೆ ಸರ್ಕಾರಕ್ಕೆ ಆಗ್ರಹಿಸುತ್ತೇವೆ. ಅಲ್ಲದೆ ಹಿಂದೂಗಳಿಗೆ ನಿಮ್ಮ ಆತ್ಮರಕ್ಷಣೆ ಯನ್ನು, ನಿಮ್ಮ ಕುಟುಂಬದ ಸುರಕ್ಷತೆಯನ್ನು ನೀವೇ ಮಾಡಿಕೊಳ್ಳಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಸಂಕಷ್ಟಕ್ಕೀಡಾಗುತ್ತೀರಿ ಎಂಬ ಎಚ್ಚರಿಕೆ ನೀಡುತ್ತೇನೆ ಎಂದರು.
ದಕ್ಷಿಣ ಪ್ರಾಂತ್ಯ ಕಾರ್ಯಕಾರಿ ಸಮಿತಿ ಸದಸ್ಯ ಉಸ್ ಜಿ. ಮಾತನಾಡಿ, ರಾಗಿಗುಡ್ಡ ಘಟನೆ ಅವಲೋಕನ ಮಾಡಿದಾಗ ಉದ್ದೇಶಪೂರ್ವಕವಾಗಿ ಮಾಡಿದ ಪೂರ್ವನಿಯೋಜಿತ ಕೃತ್ಯ ಎಂಬುದು ತಿಳಿಯುತ್ತಿದೆ. ಪೊಲೀಸರ ಮೇಲೆ ಕಲ್ಲು ತೂರಾಟ ಮಾಡುವುದು, ಹಿಂದೂಗಳನ್ನೆ ಗುರಿಯಾಗಿಸಿ ಕೊಲೆಯತ್ನ, ದಾಳಿ ಕಲ್ಲು ತೂರಾಟ ಮಾಡುವುದರ ಮೂಲಕ ಭಯಗ್ರಸ್ತರನ್ನಾಗಿ ಮಾಡುವುದು ಅವರ ಮೂಲ ಉದ್ದೇಶ. ಹಿಂದೆ ಟಿಪ್ಪು ಜಯಂತಿ ಸಂದರ್ಭದಲ್ಲಿ ಪಿಎಫ್‌ಐ ಸಂಘಟನೆಯ ರೀತಿಯಲ್ಲಿ ಇನ್ನೊಂದು ಮುಖ ಇದು. ಔರಂಗಜೇಬ ಅತ್ಯಂತ ಕ್ರೂರಿ. ಮತಾಂಧ ರಾಜ ಎಂದು ಚರಿತ್ರೆಯೇ ಹೇಳುತ್ತದೆ. ದೇಶದ ಕಾಶಿ ವಿಶ್ವನಾಥ ದೇವಾಲಯ ಸೇರಿದಂತೆ ನೂರಾರು ಹಿಂದೂ ದೇಗುಲಗಳನ್ನು ಧ್ವಂಸ ಮಾಡಿದವನ ಕಟೌಟ್ ಇಟ್ಟು ವೈಭವೀಕರಣ ಮಾಡುವುದರ ಉದ್ದೇಶ ಗಲಭೆಗೆ ಪ್ರಚೋದನೆ ನೀಡುವುದಾಗಿದೆ. ಇದು ಮುಂದೆ ನಡೆಯುವ ಅಪಾಯದ ಮುನ್ಸೂಚನೆ. ಇಂತಹ ಭಯೋತ್ಪಾದಕ ಕೃತ್ಯಗಳಿಗೆ ಕುಮ್ಮಕ್ಕು ನೀಡುವ ಮಾನಸಿಕತೆಯನ್ನು ಹಿಂದೂ ಜಗರಣಾ ವೇದಿಕೆ ಅತ್ಯುಗ್ರವಾಗಿ ಖಂಡಿಸುತ್ತದೆ. ಒಂದು ಕೋಮಿನ ಕಡೆಯಿಂದ ಪೂರ್ವನಿಯೋಜಿತವಾಗಿ ನಡೆದ ಈ ಕೃತ್ಯವನ್ನು ಇದು ಎರಡೂ ಕೋಮಿನಿಂದ ನಡೆದಿದೆ ಎಂದು ಬಿಂಬಿಸಲು ಸರ್ಕಾರ ಹೊರಟಿದೆ ಎಂದು ಆರೋಪಿಸಿದರು.
ರಾಗಿಗುಡ್ಡದಲ್ಲಿ ನಡೆದ ಘಟನೆ ಭಯೋತ್ಪಾದನೆಯಿಂದ ಪ್ರೇರಿತರಾದ ಶಕ್ತಿಗಳು ಮಾಡಿzರೆ. ಇದರ ಹಿಂದೆ ಇರುವ ಕೈಗಳು ಯಾವುವು ಎಂದು ಸರ್ಕಾರ ತನಿಖೆ ಮಾಡಲಿ. ಒತ್ತಡದಿಂದ ದ್ರೋಹಿ ಗಳನ್ನು ಬಜವ್ ಮಾಡುವ ಕೆಲಸವನ್ನು ಯಾವುದೇ ಕಾರಣಕ್ಕೂ ಮಾಡಬಾರದು. ಹಿಂದೂ ಸಮಾಜ ಎಚ್ಚರಿಕೆಯಿಂದ ಎಲ್ಲವನ್ನೂ ಗಮನಿಸಬೇಕು ಎಂದರು.
ಈ ಸಂದರ್ಭದಲ್ಲಿ ಹಿಂದೂ ಜಗರಣಾ ವೇದಿಕೆಯ ಪ್ರಮುಖರಾದ ಶಿವು, ಸತೀಶ್ ದಾವಣಗೆರೆ, ದೇವರಾಜ್ ಹರಳಹಳ್ಳಿ ಮೊದಲಾದವರಿದ್ದರು.