ನಾನು ತಿಳಿದೋ ತಿಳಿಯದೆಯೋ ತಪ್ಪು ಮಾಡಿದರೆ ತಿದ್ದಿ ಬುದ್ದಿ ಹೇಳುವ ಹಕ್ಕು ಮತದಾರರಿಗಿದೆ: ಶಾಸಕ ಡಿ.ಜಿ. ಶಾಂತನಗೌಡ

ಹೊನ್ನಾಳಿ: ಹೊನ್ನಾಳಿಯ ಹಿರೇಕಲ್ಮಠವು ಶೈಕ್ಷಣಿಕ ಚಟುವಟಿಕೆ ಗಳ ಜೊತೆಗೆ ಕಲೆ- ಸಂಸ್ಕೃತಿಗೆ ಒತ್ತು ಕೊಟ್ಟು ಸಂಸ್ಕೃತಿ- ಸಂಸ್ಕಾರ ಕಾರ್ಯ ಕ್ರಮದ ಮೂಲಕ ಭಕ್ತಾದಿಗಳ ಹುಟ್ಟುಹಬ್ಬ -ವಿವಾಹ ವಾರ್ಷಿ ಕೋತ್ಸವವನ್ನು ವಿಶೇಷವಾಗಿ ಆಚರಿಸುತ್ತಿರುವುದು ಅನುಕರ ಣೀಯ ಎಂದು ಶಾಸಕ ಡಿ.ಜಿ. ಶಾಂತನಗೌಡ ಅಭಿಪ್ರಾಯಪಟ್ಟರು.
ಅವರು ಪಟ್ಟಣದ ಹಿರೇಕಲ್ಮಠ ದಲ್ಲಿ ಮಣ್ಣೆತ್ತಿನ ಅಮಾವಾಸ್ಯೆ ಪ್ರಯುಕ್ತ ಸಂಸ್ಕೃತಿ-ಸಂಸ್ಕಾರ ಮತ್ತು ಬೆಳ್ಳಿ ರಥೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಠ- ಮಾನ್ಯಗಳಲ್ಲಿ ನಡೆಯುವ ಕಾರ್ಯ ಕ್ರಮಗಳಿಗೆ ಪೋಷಕರು ತಮ್ಮ ಮಕ್ಕಳ ಜೊತೆಗೆ ಕಡ್ಡಾಯ ವಾಗಿ ಭಾಗವಹಿಸುವ ಮೂಲಕ ನಮ್ಮ ಸಂಸ್ಕೃತಿ, ಆಚಾರ- ವಿಚಾರ ಗಳನ್ನು ಉಳಿಸುವ ಕಾರ್ಯಕ್ಕೆ ಮುಂದಾಗ ಬೇಕೆಂದು ಸಲಹೆ ನೀಡಿದರು.


ನಿಷ್ಪಕ್ಷಪಾತದಿಂದ- ಜತ್ಯಾತೀತವಾಗಿ -ಭ್ರಷ್ಟಾಚಾರಮುಕ್ತ ಆಡಳಿತವನ್ನು ಹಿಂದಿನ ಶಾಸಕತ್ವದ ಅವಧಿಯಲ್ಲಿ ಕೆಲಸ ಮಾಡಿದ್ದರೇ ನನಗೇ ಟಿಕೆಟ್ ಸಿಗಲಿ ಎಂದು ಲಿಂ.ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಗಳ ಕತೃ ಗದ್ದುಗೆ ಬಳಿ ಭಕ್ತಿಯಿಂದ ಪ್ರಾರ್ಥನೆ ಮಾಡಿಕೊಂಡಿದ್ದಕ್ಕೆ ಪ್ರತಿಫಲವಾಗಿ ನನಗೆ ಟಿಕೆಟ್ ಸಿಗುವುದರ ಜೊತೆಗೆ ಅವಳಿ ತಾಲ್ಲೂಕಿನ ಸರ್ವರ ಸಹಕಾರದಿಂದ ನಾನು ಇಂದು ನಿಮ್ಮ ಮುಂದೆ ಶಾಸಕನಾಗಿ ನಿಂತಿದ್ದೇನೆ ಎಂದು ಭಾವುಕರಾದರು.
ನಾನು ಇದುವರೆಗೂ ನನ್ನ ಸಹೋದರನಗೊಡಗೂಡಿದಂತೆ ೧೩ ಚುನಾವಣೆಗಳನ್ನು ಎದುರಿಸಿ ಸೋಲು-ಗೆಲುವನ್ನು ಕಂಡಿದ್ದೇನೆ. ಆದರೆ ಈ ಚುನಾವಣೆ ಮಾತ್ರ ನನಗೆ ವಿಶೇಷ ಅನುಭವ ನೀಡಿತು. ನಾನು ಹಿಂದಿನಿಂದಲೂ ಸಾಲದ ಸುಳಿ ಯ ಇದ್ದೇ ಈ ಚುನಾವಣೆ ಯನ್ನೂ ಸಹ ನಾನು ಸಾಲದ ಎದುರಿಸಿದೆ. ನನ್ನ ಕೆಲವು ಹಿತೈಷಿಗಳಿಗೆ ಫೋನಾಯಿಸಿ ಮನವಿ ಮಾಡಿಕೊಂಡಿದ್ದಕ್ಕೆ ನನಗೆ ನಿರೀಕ್ಷೆಗೂ ಮೀರಿ ಹಣ ಹರಿದುಬಂತಲ್ಲದೇ ಕೂಲಿ ಕಾರ್ಮಿಕರೂ ಕೂಡ ನನಗೆ ತಮ್ಮ ಕೈಲಾದ ಮಟ್ಟಿಗೆ ಚುನಾವಣೆಗೆ ಫಂಡ್ ನೀಡಿದ್ದು ನಿಮ್ಮೆಲ್ಲರ ಋಣವನ್ನು ಪ್ರಾಮಾಣಿಕವಾಗಿ ನನ್ನ ಅವಧಿಯಲ್ಲಿ ಜನಸೇವೆ ಮಾಡುವು ದರ ಮೂಲಕ ತೀರಿಸುತ್ತೇನೆಂದು ಭರವಸೆ ನೀಡಿದರು.
ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿಗಳು ಆಶೀರ್ವಚನ ನೀಡಿ ಹಿರೇಕಲ್ಮಠವು ಹಿಂದಿನಿಂದಲೂ ಇಲ್ಲಿ ಕೆಲಸ ಮಾಡಿದವರಿಗೆ ಅವರ ಶ್ರಮಕ್ಕೆ ತಕ್ಕಂತ ಪ್ರತಿಫಲ ಎಂಬ ವಾಡಿಕೆಯಂತೆ ಎಚ್.ಎಂ. ಗುರುಪ್ರಕಾಶ್ ಅವರು ನಮ್ಮ ಸಂಸ್ಥೆಯಲ್ಲಿ ನಿಷ್ಠೆಯಿಂದ ಕೆಲಸ ಮಾಡಿದ ಪ್ರತಿಫಲವಾಗಿ ಇಂದು ಅವರಿಗೆ ಹಾವೇರಿ ಜಿಯ ಜನಪದ ವಿಶ್ವವಿದ್ಯಾಲಯದಲ್ಲಿ ಕೆಲಸ ಸಿಕ್ಕಿದ್ದಕ್ಕೆ ಹರ್ಷ ವ್ಯಕ್ತಪಡಿಸಿದರು.
ಶಾಸಕ ಡಿ.ಜಿ.ಶಾಂತನಗೌಡರದ್ದು ತುಂಬಾ ಸರಳ ವ್ಯಕ್ತಿತ್ವ. ಇಂತಹ ಇಳೀ ವಯಸ್ಸಲ್ಲೂ ನನ್ನಿಂದೇನಾದರೂ ಲೋಪ- ದೋಷಗಳಾದ್ದಲ್ಲಿ ನನ್ನನ್ನು ಮತದಾರರು ತಿದ್ದಬಹುದು ಎಂದು ಹೇಳಿ ತಮ್ಮ ದೊಡ್ಡತನ ಮೆರೆದಿ zರೆ. ಅವರು ದೀರ್ಘಾಯುಷಿಗ ಳಾಗಿ ಜನರ ಸೇವೆ ಮಾಡುವಂತಾ ಗಲಿ ಎಂದು ಶುಭ ಹಾರೈಸಿದರು.
ಕವನ, ಶ್ರೀಹರ್ಷ ಮತ್ತು ಚನ್ನೇಶ್ವರ ಗಾನ ಕಲಾ ಬಳಗದವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಹಿರೇಕಲ್ಮಠದ ಪ್ರಧಾನ ಅರ್ಚಕ ಅನ್ನದಾನಯ್ಯ ಶಾಸ್ತ್ರ್ತಿ, ಕಾಂಗ್ರೆಸ್ ಮುಖಂಡ ಎಚ್.ಎ. ಉಮಾಪತಿ,ಪುರಸಭಾ ಸದಸ್ಯ ಹೊಸಕೇರಿ ಸುರೇಶ್, ತಾಲ್ಲೂಕು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾರವೀಶ್, ಸವಿತಾ ನಾಡಿಗ್, ಸವಿತಾ ರಘುನಾಥ್, ಬಿ.ಎಲ್. ಕುಮಾರಸ್ವಾಮಿ, ಶಾಂತಾ ಹೊಸಕೇರಿಸುರೇಶ್, ಚಂದ್ರೇಗೌಡ ಮತ್ತಿತರರು ಉಪಸ್ಥಿತರಿದ್ದರು.