ಭಾರತವನ್ನು ಸೂಪರ್ಪವರ್ ರಾಷ್ಟ್ರವನ್ನಾಗಿಸಲು ಬಿಜೆಪಿಗೆ ಮತ ನೀಡಿ…
ಭದ್ರಾವತಿ: ರಾಜ್ಯದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಉದ್ದೇಶದಿಂದ ಗ್ಯಾರಂಟಿ ಭಾಗ್ಯಗಳನ್ನು ಜನರಿಗೆ ತೋರಿಸಿ ಅಧಿಕಾರಕ್ಕೆ ಬಂದಿದೆ. ಇದರ ಫಲವಾಗಿ ರಾಜ್ಯದ ಎ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿದೆ. ವೇತನ ನೀಡಲು ಖಜಾನೆಯಲ್ಲಿ ಹಣ ಇಲ್ಲ. ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಬಗ್ಗೆ ಆರೋಪ ಮಾಡುತ್ತಿದೆ. ಆದರೆ ತನ್ನ ವೈಫಲ್ಯಗಳನ್ನು ಮುಚ್ಚಿ ಹಾಕಿ ಮತದಾರರನ್ನು ಗ್ಯಾರಂಟಿ ಹೆಸರಿನಲ್ಲಿ ದಾರಿ ತಪ್ಪಿಸುತ್ತಿದೆ ಎಂದು ಬಿಜೆಪಿ ರಾಜ್ಯ ಪ್ರಕೋಷ್ಟಗಳ ಸಂಚಾಲಕ ಎಸ್.ದತ್ತಾತ್ರಿ ಸುದ್ದಿ ಗೋಷ್ಟಿಯಲ್ಲಿ ಆರೋಪಿಸಿದರು.
ಅಲ್ಪ ಸಂಖ್ಯಾತರ ತುಷ್ಟಿಕರಣದ ನೀತಿಯ ಮುಂದುವರೆದ ಭಾಗವಾದ ಮೀಸಲಾತಿಯನ್ನು ಮುಸ್ಲೀಂರಿಗೆ ನೀಡುವುದಾಗಿ ಪ್ರಕಟಿಸಿದೆ. ಧರ್ಮದ ಆಧಾರದ ಮೇಲೆ ಅಲ್ಪ ಸಂಖ್ಯಾತರಿಗೆ ಮೀಸಲಾತಿಯನ್ನು ನೀಡುವುದಿಲ್ಲ ಎಂದು ಲಿಖಿತ ಭರವಸೆಯನ್ನು ಬಹಿರಂಗವಾಗಿ ನೀಡಬೇಕು. ಇಲ್ಲದಿದ್ದರೆ ಇವರು ಅಧಿಕಾರಕ್ಕೆ ಬಂದ ನಂತರ ಸಂವಿಧಾನವನ್ನು ಬದಲಾವಣೆ ಮಾಡುವುದು ನಿಶ್ಚಿತ. ಇದನ್ನು ಮರೆ ಮಾಚಿ ಬಿಜೆಪಿ ಯವರು ಸಂವಿಧಾನ ಬದಲಾವಣೆ ಮಾಡುತ್ತಾರೆ ಎಂದು ಹುಯೆಲೆಬ್ಬಿಸುತ್ತಿರುವುದು ಅತಂಕಕಾರಿ ವಿಷಯ ಎಂದರು.
ಜಿಯನ್ನು ಸರ್ವತೋಮುಖ ಅಭಿವೃದ್ಧಿ ಮಾಡುವಲ್ಲಿ ಯಡಿಯೂರಪ್ಪ ಹಾಗೂ ರಾಘವೇಂದ್ರ ಅವರು ತಮ್ಮ ಅಧಿಕಾರಾವಧಿಯಲ್ಲಿ ತೋರಿಸಿಕೊಟ್ಟಿ zರೆ. ಕೃಷಿ ಆಧಾರಿತ, ಪ್ರವಾಸೋದ್ಯಮ, ಕೈಗಾರಿಕಾ ಜಿಯನ್ನಾಗಿ ಮಾಡಲು ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರಿಗೆ ಮತನನೀಡಬೇಕು ಎಂದು ಮನವಿ ಮಾಡಿದರು.
ಭಾರತವನ್ನು ೨೦೪೪ಕ್ಕೆ ಸೂಪರ್ ಪವರ್ ರಾಷ್ಟ್ರವನ್ನಾಗಿ ಮಾಡಲು ಬಿಜೆಪಿ ಗೆಲುವು ಅವಶ್ಯಕ ಎಂಬುದನ್ನು ಜನತೆ ಮನಗಾಣ ಬೇಕು ಎಂದು ಮನವಿ ಮಾಡಿದಲ್ಲದೆ ಈ ಭಾರಿ ಮೋದಿ ಪ್ರಧಾನಿ ಆದರೆ ಅದು ಕೇವಲ ಭಾರತದ ಪ್ರಧಾನಿ ಆಗುವುದಿಲ್ಲ. ವಿಶ್ವದ ನಾಯಕರಾಗುತ್ತಾರೆ. ಹಾಗಾಗಿ ಈ ಚುನಾವಣೆ ಬಹಳ ಮಹತ್ವ ಪಡೆದಿದೆ. ಇದಕ್ಕೆ ಪೊರಕ ವಾಗಿ ಜೆಡಿಎಸ್ ಸಹ ಜೊತೆಗಾರ ಪಕ್ಷವಾದರಿಂದ ಹೆಚ್ಚಿನ ಮತಗಳು ಲಭಿಸಿ ೨ ಲಕ್ಷ ಮತಗಳ ಅಂತರ ದಿಂದ ರಾಘವ್ರೇಂದ್ರ ಗೆಲ್ಲುತ್ತಾರೆ ಎಂದರು
ಸುದ್ದಿಗೋಷ್ಟಿಯಲ್ಲಿ ಮಂಡಲ ಅಧ್ಯಕ್ಷ ಜಿ.ಧರ್ಮ ಪ್ರಸಾದ್, ಮಾಧ್ಯಮ ಪ್ರಮುಖ್ ಕಾ.ರಾ. ನಾಗರಾಜ್ ಉಪಸ್ಥಿತರಿದ್ದರು.