ಸಂಸ್ಕೃತಿ – ಆಚಾರ ವಿಚಾರಗಳ ಕುರಿತು ವಿಪ್ರ ಮಹಿಳೆಯರು ಎಚ್ಚೆತ್ತುಕೊಳ್ಳಬೇಕಿದೆ…
ಶಿಕಾರಿಪುರ: ವಿಪ್ರರಲ್ಲಿ ಸಂಸ್ಕಾರ, ಸಂಸ್ಕೃತಿ, ಪರಂಪರೆ, ಆಚಾರ, ವಿಚಾರಗಳಿಗೆ ವಿಶೇಷ ಮಹತ್ವವಿದ್ದು, ಇತ್ತೀಚಿನ ದಿನದಲ್ಲಿ ಸಂಪ್ರದಾಯ ಸಂಸ್ಕೃತಿಯನ್ನು ಮಹಿಳೆಯರು ಮರೆಯುತ್ತಿದ್ದಾರೆ ಕೂಡಲೇ ಎಚ್ಚೆತ್ತುಕೊಂಡು ಸಂಪ್ರದಾಯ ಪದ್ದತಿಗಳಿಂದ ದೂರವಾಗುತ್ತಿರುವ ಸಮಾಜಕ್ಕೆ ಸೂಕ್ತ ಜಾಗೃತಿಯನ್ನು ಮೂಡಿಸ ಬೇಕಾಗಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಜಿಲ್ಲಾ ಸಂಚಾಲಕರಾದ ಪವಿತ್ರ ಆದರ್ಶ ಎಚ್ಚರಿಸಿದರು.
ಪಟ್ಟಣದ ಶ್ರೀ ದತ್ತಿ ಕೇವಲಾನಂದಾಶ್ರಮದ ನೂತನ ಸಮುದಾಯ ಭವನದಲ್ಲಿ ನಡೆದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮಹಿಳಾ ವಿಭಾಗದ ತಾಲೂಕು ಘಟಕವನ್ನು ಉಧ್ಘಾಟಿಸಿ ಅವರು ಮಾತನಾಡಿದರು.
ಸಂಘಟನೆಯಿಂದ ಮಾತ್ರ ಸಮಾಜ ಸದೃಢಗೊಳ್ಳಲು ಸಾಧ್ಯ. ಈ ದಿಸೆಯಲ್ಲಿ ಸಂಘಟನೆಯನ್ನು ಸದೃಢಗೊಳಿಸಲು ರಾಜ್ಯಾದ್ಯಕ್ಷ ಅಶೋಕ್ ಹಾರನಹಳ್ಳಿ ವಿಪ್ರ ಸಮಾಜದ ಯುವ ಘಟಕ, ಮಹಿಳಾ ಘಟಕ ಸಹಿತ ವಿವಿಧ ಘಟಕಗಳಿಗೆ ಚಾಲನೆ ನೀಡಿ ಸಕ್ರಿಯ ವಾಗಿಸಲು ಹೆಚ್ಚಿನ ನಿಗಾವಹಿಸಿದ್ದಾರೆ ಎಂದು ತಿಳಿಸಿದ ಅವರು, ಸಮಾಜದ ಸಂಘಟನೆಯಿಂದ ಮಾತ್ರ ಪ್ರತಿಯೊಬ್ಬರೂ ಆರ್ಥಿಕ ವಾಗಿ ಸಬಲರಾಗಲು ಸಾಧ್ಯ ಎಂದರು.
ಮಹಿಳೆಯರನ್ನು ಒಗ್ಗೂಡಿಸಿ ಸಂಘಟಿಸುವುದು ಸವಾಲಿನ ಕಾರ್ಯವಾಗಿದ್ದು, ಬಹುತೇಕ ಮಹಿಳೆಯರು ಕುಟುಂಬ ನಿರ್ವಹಣೆಗೆ ಸೀಮಿತವಾಗಿದ್ದಾರೆ ಎಂದು ತಿಳಿಸಿದ ಅವರು, ವಿeನ ತಂತ್ರeನದ ಆವಿಷ್ಕಾರ ಹೆಚ್ಚಾಗಿ ಎಲ್ಲ ಕ್ಷೇತ್ರದಲ್ಲಿಯೂ ಮಹಿಳೆಯರು ಉನ್ನತ ಸಾಧನೆ ಮೂಲಕ ಗುರುತಿಸಿ ಕೊಂಡಿದ್ದಾರೆ ಆದರೆ ಸಂಪ್ರದಾಯ, ಸಂಸ್ಕಾರ, ಸಂಸ್ಕೃತಿ, ಆಚಾರ, ವಿಚಾರ ಪದ್ದತಿಗಳಿಂದ ದೂರವಾಗುತ್ತಿದ್ದಾರೆ. ಸಂಸ್ಕಾರದ ಕೊರತೆಯಿಂದ ಮಕ್ಕಳು ದಾರಿತಪ್ಪುವ ಅಪಾಯ ಹೆಚ್ಚಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಹಬ್ಬ, ಹರಿದಿನ, ತಿಥಿ, ನಕ್ಷತ್ರ, ಸ್ತ್ರೋತ್ರ ಪಠಣ ಕೇವಲ ಆಚರಣೆ, ಸಂಪ್ರದಾಯಕ್ಕೆ ಮಾತ್ರ ಸೀಮಿತ ವಾಗಿದ್ದು ಮಹತ್ವದ ಅರಿವಿಲ್ಲ ವಾಗಿದೆ ಮಹಿಳೆಯರು ಮಕ್ಕಳಿಗೆ ಈ ಬಗ್ಗೆ ಅರಿವು ಉಂಟು ಮಾಡಬೇಕಾಗಿದೆ ಹಲವರಲ್ಲಿ ವಿಶಿಷ್ಟವಾದ ಪ್ರತಿಭೆಯಿದ್ದು ಸೂಕ್ತ ವೇದಿಕೆ ಕೊರತೆಯಿದೆ ಈ ದಿಸೆಯಲ್ಲಿ ವಿಪ್ರ ಮಹಿಳೆಯರಿಗೆ ವೇದಿಕೆ ಕಲ್ಪಿಸಿಕೊಡಲು ರಾಜ್ಯ ಸಂಘದ ಜತೆ ಸೇತುವೆ ರೀತಿಯಲ್ಲಿ ಜಿಲ್ಲಾ ಹಾಗೂ ತಾ.ಘಟಕ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದ ಅವರು, ತಾಲೂಕಿನಲ್ಲಿ ಹಲವು ಪ್ರತಿಭಾನ್ವಿತ ರಿದ್ದು ಎಲ್ಲ ವಿಪ್ರ ಮಹಿಳೆಯರು ಸಂಘದ ಸದಸ್ಯತ್ವ ಕಡ್ಡಾಯವಾಗಿ ಪಡೆದು ಸಂಘಟನೆ ಸದೃಡಗೊಳಿಸಿ ರಾಜ್ಯ ಮಟ್ಟದಲ್ಲಿ ದೊರೆಯುವ ಅವಕಾಶದ ಸದ್ಬಳಕೆ ಮಾಡಿಕೊಳ್ಳುವಂತೆ ಕರೆ ನೀಡಿದರು.
ಸಮಾಜ ಸೇವಕಿ ಅಪರ್ಣಾ ಗುರುಮೂರ್ತಿ ಮಾತನಾಡಿ, ಶೇ.೨ ರಷ್ಟಿರುವ ವಿಪ್ರರು ಎಂದಿಗೂ ಮೀಸಲಾತಿ ಬಯಸಲಿಲ್ಲ ಪರರ ಆಶ್ರಯವಿಲ್ಲದೆ ಎಲ್ಲ ದೌರ್ಜನ್ಯ ಮೆಟ್ಟಿನಿಂತು ಸ್ವತಂತ್ರವಾಗಿ ಬದುಕುವ ಸ್ವಾಭಿಮಾನಿ ಸಮಾಜ ವಾಗಿ ಗುರುತಿಸಿಕೊಂಡಿದೆ ಎಂದು ತಿಳಿಸಿ ಹಲವರಲ್ಲಿ ಪ್ರತಿಭೆಯಿದ್ದು ಅನಾವರಣಕ್ಕೆ ವೇದಿಕೆ ಕೊರತೆಯಿದೆ ಮಹಿಳೆಯರು ಮನೆಗೆ ಸೀಮಿತ ವಾಗದೆ ಸಮಾಜಕ್ಕೆ ಸಮಯ ನೀಡಬೇಕು ಸಂಸ್ಕೃತಿ ಮರೆಯುತ್ತಿ ರುವ ಹೆಣ್ಣು ಮಕ್ಕಳನ್ನು ಎಚ್ಚರ ಗೊಳಿಸಬೇಕಾಗಿದೆ ಎಂದರು.
ರಾಜ್ಯ ಘಟಕದ ಸಹ ಸಂಚಾ ಲಕಿ ಭಾರತಿ ಸತೀಶ್ ಮಾತನಾಡಿ, ಗ್ರಾಮೀಣ ಭಾಗದಲ್ಲಿನ ಮಹಿಳೆ ಯರು ಕರಕುಶಲತೆಗೆ ಹೆಚ್ಚು ಪ್ರಸಿದ್ದ ವಾಗಿದ್ದು ಪ್ರತಿಯೊಬ್ಬರೂ ಸಂಘದ ಸದಸ್ಯರಾಗಿ ರಾಜ್ಯ ಘಟ ಕದ ಸಹಕಾರದಿಂದ ಆರ್ಥಿಕವಾಗಿ ಸದೃಡರಾಗುವ ಜತೆಗೆ ವಿಪ್ರರ ಶ್ರೇಷ್ಟ ಸಂಸ್ಕೃತಿ ಸಂಸ್ಕಾರವನ್ನು ಉಳಿ ಸಿ ಬೆಳೆಸೋಣ ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ತಾ.ಘಟಕದ ಅಧ್ಯಕ್ಷೆ ಶುಭ ರಘು ವಹಿಸಿ ಮಾತ ನಾಡಿ, ಸಂಸ್ಕೃತಿ ಸಂಸ್ಕಾರ ಉಳಿಸಿ ಬೆಳೆಸುವ ಬಹು ಮಹತ್ವಾಕಾಂಕ್ಷೆ ಯನ್ನು ಹೊಂದಿ ಸಂಘ ಅಸ್ಥಿತ್ವ ಪಡೆ ದಿದ್ದು ಈ ದಿಸೆಯಲ್ಲಿ ವಯೋಮಿತಿ ಗನುಗುಣ ವಾಗಿ ನೃತ್ಯ, ಸಂಗೀತ, ಅಡುಗೆ ಮತ್ತಿತರ ತರಬೇತಿ ನೀಡು ವ ಬಹು ದೊಡ್ಡ ಉದ್ದೇಶವನ್ನು ಹೊಂದಿದೆ ಪೂರಕವಾಗಿ ಪ್ರತಿ ಯೊಬ್ಬರೂ ಸ್ಪಂದಿಸುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಮಹಿಳಾ ಸಾಧಕಿಯರ ಜತೆ ಗಣ್ಯರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ತಾ.ಘಟಕದ ಸಂಚಾಲಕಿ ಸುಮಾ ಜೋಯ್ಸ್ ಹಿರಿಯರಾದ ರಮಾ ಬಾಯಿ, ರಮಾದೀಕ್ಷಿತ್, ವಸಂತಿ ಮುಖಂಡರಾದ ಚಿದಂಬರ ದೀಕ್ಷಿತ್,ಸೋಮಶೇಖರ್,ಕಸಾಪ ಮಾಜಿ ಅಧ್ಯಕ್ಷ ರಘು,ವಿಪ್ರ ನೌಕ ರರ ಸಂಘದ ಅಧ್ಯಕ್ಷ ಸತ್ಯನಾ ರಾಯಣ ರಾವ್ ಮಹಿಳಾ ಘಟಕದ ಸುಷ್ಮಾ ದೀಕ್ಷಿತ್, ದೀಪಾ, ಶ್ರೀಲಕ್ಷ್ಮಿ, ಅಶ್ವಿನಿ, ಸುಕನ್ಯಾ, ಪಲ್ಲವಿ, ದಿವ್ಯಾ ಸುನೀತಾ, ಗೌರಿ ಮತ್ತಿತರರಿದ್ದರು.
ಹರೀಶ್ ಜೋಯ್ಸ್ ಹಾಗೂ ನರಸಿಂಹ ಜೋಯ್ಸ್ ವೇದ ಘೋಷ ದಿಂದ ಆರಂಭವಾದ ಕಾರ್‍ಯ ಕ್ರಮದಲ್ಲಿ ಕಾಶೀಬಾಯಿ ಪ್ರಾರ್ಥಿ ಸಿ, ಸುನೀತಾ ಸ್ವಾಗತಿಸಿ,ಸುಕನ್ಯಾ ನಿರೂಪಿಸಿ ವಂದಿಸಿದರು.