ಚುನಾವಣಾ ಬಹಿಷ್ಕಾರಕ್ಕೆ ಕನಸಿನ ಕಟ್ಟೆ ಗ್ರಾಮಸ್ಥರ ನಿರ್ಧಾರ…

ಶಿವಮೊಗ್ಗ: ಚುನಾವಣೆ ಯನ್ನು ಬಹಿಷ್ಕರಿಸುವುದಾಗಿ ಭದ್ರಾವತಿ ತಾಲೂಕಿನ ಕನಸಿನ ಕಟ್ಟೆ ಗ್ರಾಮಸ್ಥರು ಡಿಸಿಗೆ ಮನವಿ ಮೂಲಕ ತಿಳಿಸಿದ್ದಾರೆ.
ಹೊಳೆಹೊನ್ನೂರು ಹೋಬಳಿ, ಕನಸಿನ ಕಟ್ಟೆ ಗ್ರಾಮವು ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರಕ್ಕೆ ಸೇರುತ್ತದೆ. ಆದರೆ ಈ ಗ್ರಾಮದಲ್ಲಿ ಇಂದಿಗೂ ಮೊಬೈಲ್ ಸಂಪರ್ಕದ ವ್ಯವಸ್ಥೆ ಇಲ್ಲವಾಗಿದೆ. ಆಧುನಿಕ ಕಾಲದಲ್ಲಿ ಮಾಹಿತಿ ತಂತ್ರಜನದ ಕ್ರಾಂತಿ ಆಗುತ್ತಿದ್ದರೂ ಕೂಡ ಕನಸಿಕಟ್ಟೆ ಗ್ರಾಮದ ಮಾಹಿತಿ ತಂತ್ರಜನ ಕನಸಾಗಿಯೇ ಉಳಿದಿದೆ ಎಂದು ಮನವಿದಾರರು ತಿಳಿಸಿದ್ದಾರೆ.
ಈ ಬಗ್ಗೆ ಹಲವಾರು ಬಾರಿ ಸಂಬಂಧಪಟ್ಟವರಿಗೆ ಮನವಿ ಮಾಡಿದ್ದೇವೆ. ಆದರೂ ಕೂಡ ಯಾವುದೇ ಪ್ರಯೋಜವಾಗಿಲ್ಲ. ಆದ್ದರಿಂದ ೨೦೨೩ನೇ ವಿಧಾನಸಭಾ ಚುನಾವಣೆಯನ್ನು ಬಹಿಷ್ಕಾರ ಮಾಡುವ ನಿರ್ಧಾರಕ್ಕೆ ಬಂದಿದೆ. ಮತ್ತು ಈ ವಿಷಯವನ್ನು ತಮ್ಮ ಗಮನಕ್ಕೆ ತಂದಿದ್ದೇವೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಗ್ರಾಮಸ್ಥರಾದ ಕೃಷ್ಣಮೂರ್ತಿ, ಶುಭಾ, ವರ್ಷಾ, ರೂಪಾ, ನಿಧಿ, ಪುಷ್ಪಾ, ಅರುಣ್‌ಕುಮಾರ್, ಹನುಮಂತಪ್ಪ, ಶಿವಮೂರ್ತಿ, ಸುಮಾ, ಸವಿತಾ ಸೇರಿದಂತೆ ಹಲವರಿದ್ದರು.