ಖ್ಯಾತ ಸಾಹಿತಿ ಎಂಪಿಎಂ ಕೊಟ್ರಯ್ಯನವರು ರಚಿಸಿದ ವಚನ ವೈಭವ…

ವಚನಗಳು ಅನ್ಯಭಾಷೆಗಳ ಸ್ಪರ್ಶವಿಲ್ಲದೆ , ಅನುಕರಣೆ ಇಲ್ಲದೆ, ಜನಸಾಮಾನ್ಯರ ಜೀವನ ಅನುಭವದ ಮೂಲಕ ರೂಪಿತ ವಾದ ಸಾಹಿತ್ಯ ಪ್ರಕಾರವೆ ವಚನ ಗಳು. ಇವು ವಿದ್ವತ್ತಿನ ಪ್ರತೀಕವಲ್ಲ. ಈ ಪರಂಪರೆಯನ್ನು ಹಿರಿಯರಾದ ಎಂ.ಪಿ.ಎಂ. ಕೊಟ್ರಯ್ಯನವರು ತಮ್ಮ ಆಧುನಿಕ ವಚನಗಳನ್ನ ವಚನ ವೈಭವ ಎಂಬ ಕೃತಿಯ ಮುಖೇನ ಮುಂದುವರಿಸಿzರೆ.
ಕೃತಿ ಸುಂದರ ರಕ್ಷಾಕವಚ ಹೊಂದಿದ್ದು ಅರ್ಥ ಸಹಿತ ೫೦ ವಚನಗಳನ್ನು ಹೊಂದಿದೆ. ೬೮ ಪುಟಗಳು ಗುಣಮಟ್ಟದ ಹಾಳೆಗಳಲ್ಲಿ ಶಿವಮೊಗ್ಗೆಯ ಪ್ರತಿಷ್ಠಿತ ಯೋಗಿತಾ ಪ್ರಿಂಟರ್ಸ್‌ನಲ್ಲಿ ಸುಂದರವಾಗಿ ಮುದ್ರಣ ಗೊಂಡಿದೆ. ಬೆಲೆಯೂ ಕೂಡಾ ಎಲ್ಲರಿಗೂ ನಿಲುಕುವಂತೆ ಇದೆ. ದಾನದಲ್ಲಿ ಅನ್ನದಾನ ಬಿಟ್ಟರೆ ಪುಸ್ತಕ ದಾನ ಶ್ರೇಷ್ಠವಾದುದಾಗಿದೆ. ಗ್ರಂಥ ದಾನವನ್ನು ಪ್ರಾಚೀನ ಕಾಲದಿಂದಲೂ ನಡೆಸಿಕೊಂಡು ಬಂದಿರುವ ಹಿರಿಮೆ ನಮ್ಮ ನಾಡಿನದಾಗಿದೆ.
ವಚನಕಾರರು ಹೇಳುವಂತೆ ಪುಸ್ತಕವೆಂದರೆ eನದಾಸೆಲೆಯು, ಆತ್ಮ ಸಂಗಾತಿ, ಸನ್ಮಿತ್ರ , ಅಂತರಾತ್ಮದ ಬೆಳಕು ಎಂದಿರುವರು. ಪುಸ್ತಕಗಳನ್ನು ಓದಿದ ಮೇಲೆ ಅವು ತಂದೆಯಾಗಿ ಕೈ ಹಿಡಿದು ನಡೆಸುತ್ತವೆ, ತಾಯಿಯಾಗಿ ವಾತ್ಸಲ್ಯ ತೋರಿಸುತ್ತವೆ, ಗುರುಗಳಾಗಿ ಮಾರ್ಗದರ್ಶನ ಮಾಡುತ್ತವೆ. ಈ ಪರಂಪರೆಯನ್ನು ವಿಶೇಷವಾಗಿ ತಮ್ಮ ಮಗಳಾದ ಡಾ| ಎಂ.ಪಿ.ಎಂ.ದೀಪಾ ಹಾಗೂ ಅಳಿಯಂದಿರಾದ ಚನ್ನಬಸಯ್ಯ ಹಿರೇಮಠ ಇವರ ವಿವಾಹಕ್ಕೆ ಉಡುಗೊರೆಯಾಗಿ ಆಸಕ್ತ ಸಹೃದಯರಿಗೆ ಅಪಾರ ಭಕ್ತಿ ಗೌರವ ಅಭಿಮಾನದ ಪ್ರತೀಕವಾಗಿ ಅಂತರಂಗದ ಗುರವರ್ಯ ಲಿಂ| ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಮಹಾ ಸ್ವಾಮಿಗಳವರ ನಾಮಾಂಕಿತದಲ್ಲಿ ಮೂಡಿ ಬಂದ ಮೌಲ್ಯಯುತ ಕೃತಿ ವಚನ ವೈಭವ ಇಂದು ತಮ್ಮ ಸುಪುತ್ರ ಚಿ|ಗುರುಬಸವಸ್ವಾಮಿ ಹಾಗೂ ಚಿ| ಕುಂ| ಸೌ| ನಿತ್ಯ ಇವರ ವಿವಾಹ ಆಹ್ವಾನ ಪತ್ರಿಕೆಯ ಜೊತೆ ಉಡುಗೊರೆಯಾಗಿ ನೀಡುತ್ತಿರುವದು ವಿಶೇಷ.


ಇವರ ವಚನಗಳು ವಿಶಿಷ್ಟ, ವಿಭಿನ್ನ, ವೈಚಾರಿಕ, ವಿವರಣೆಯುಕ್ತವಾಗಿ ಅದ್ಭುತವಾಗಿ ಅನುಸಂಧಾನಗೊಂಡು ಓದಿಸಿ ಕೊಂಡು ನೀತಿ ಮಾರ್ಗದಲ್ಲಿ ನಡೆಯಲು ಪ್ರೇರಣೆ ನೀಡುತ್ತವೆ. ಲೋಕದ ಡೊಂಕು ತಿದ್ದುವ ಮಹಾದಾಶಯದಲ್ಲಿ ಮೂಡಿಬಂದಿವೆ. ಸಮಾಜದಲ್ಲಿ ಬೇರೂರಿದ್ದ ಮೌಢ್ಯ, ಕಂದಾಚಾರಗಳನ್ನು ಬೇರು ಸಹಿತ ಕಿತ್ತು ಅವರ ಹೃದಯದಲ್ಲಿ ಸುeನ ಮತ್ತು ಸುವಿಚಾರದ ದೀಪ್ತಿ ಬೆಳಗಿಸಲು ಕೊಟ್ರಯ್ಯನವರು ತಮ್ಮ ವಿಡಂಬನಾತ್ಮಕ ವಚನಗಳ ಮೂಲಕ ಕಠಿಣ ಪದಗಳನ್ನು ಪ್ರಯೋಗಿಸಿ ಸಮಾಜವನ್ನು ತಿದ್ದಲು ಪ್ರಯತ್ನಿಸಿzರೆ.
ಎಚ್ಚರದಿ ಇರುವಾಗ ಬೆಚ್ಚಿ ಬೀಳುವಿ ಅದೇಕೆ !
ಹುಚ್ಚು ಮನಸ್ಸಿನ ಸಂಗವ ಮಾಡಿದೆನಲ್ಲ…?
ವಚನ ವಚನವೆಂದು ರಚನೆ ಮಾಡುತಿಹ ನಾವಿಂದು, ವಚನವೆಂದರೇನೆಂದು ಅರಿಯದವರು..
ಹೊಲೆಯ ಹೊಲೆಯ ಎಂದ್ಹಲುಬುತಿಹ
ಚೆಲುವ ಚೆನ್ನಿಗರೆ ಕೇಳಿರಿ,
ಮನು ಕುಲದ ಶಾಂತಿ
ಕದಡುತಿರುವರು ಹೊಲಬರು..
ಕಲಿಯ ಕಾಲನ ಚಕ್ರದಲಿ
ಬಲಿಯಾಗಿಹೆವು ನಾವಿಂದು,
ಅಲ್ಲೂ ಸಲ್ಲದೆ ಇಲ್ಲೂ ಸಲ್ಲದೆ ನರಳುತಿಹೆವು.
ಎಂಬ ಇವರ ವಚನಗಳು ಮಾರ್ಮಿಕ ವೈಚಾರಿಕತೆಯೊಂದಿಗೆ ಮನುಕುಲವ ಎಚ್ಚರಿಸುವುದರ ಜೊತೆಗೆ, ಅಷ್ಠಾವರಣಗಳ ಮಹತ್ವ , ಪರಿಸರ ಹಾಗೂ ಶಿಕ್ಷಣದ ಮಹತ್ವ ಸಾರುವ ವಚನಗಳನ್ನು ಸಾಮಾನ್ಯರಿಗೂ ಅರ್ಥೈಸಿಕೊಳ್ಳುವ ಪರಿಯಲ್ಲಿ ಭಾವಾರ್ಥದ ರಚನೆ ಬದುಕಿನ ಪರಿವರ್ತನೆಗೆ ಸಹಕಾರಿಯಾಗಿದೆ. ಇವರ ವಚನಗಳಲ್ಲಿ ಜೀವನಾನುಭವ ಮೈದಳೆದು ನಿಂತಿದೆ. ಅನುಭವದಲ್ಲಿ ಕಟ್ಟಿದ ಸಾಲುಗಳು ಸಾಮಾಜಿಕ ಅನುಭೂತಿಗಾಗಿ,ಅಮೂಲ್ಯ ಸಂದೇಶದ ಪ್ರತಿನಿಧಿಗಳಾಗಿವೆ. ಸಮಾಜದಲ್ಲಿ ಅನ್ಯಾಯ, ತಾರತಮ್ಯ, ಅವಮಾನಗಳಿಗೆ ಸಿಡಿದೆದ್ದ ಇವರ ವಚನಗಳು ಮಾರ್ಮಿಕವಾದ ಲಕ್ಷ್ಯಾರ್ಥದ ಮೂಲಕ ಪ್ರತಿಭಟನೆಯ, ಆಕ್ರೋಶದ, ಚಾಟಿ ಬೀಸುತ್ತ ಸಮಾಜವ ನ್ನು ಎಚ್ಚರಿಸಿ ಸರಿದಾರಿಗೆ ತರುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಿzರೆ.
ಅರುವಿನ ಜನುಮದಿ ಬಂದ ನರನು ನಾನಯ್ಯ|
ಪರಿಪರಿಯಿಂದಲಿ ಬೇಡುವೆ ಎನಗೆ ಭಕ್ತಿ ಕರುಣಿಸು||
ಇಂಥ ವಚನಗಳನ್ನು ಶಾಬ್ದಿಕವಾಗಿ ಅರ್ಥೈಸಿಕೊಳ್ಳದೆ ಅವುಗಳ ಅಂತಃಸತ್ವ ವನ್ನು ಅರಿತಾಗ ಮಾತ್ರ ಅವರ ಸಂದೇಶವನ್ನು ನಾವು ತಿಳಿಯಲು ಸಾಧ್ಯವಾಗುತ್ತದೆ. ಈ ಪ್ರಯತ್ನವಾಗಿ ವಚನ ವಿಶ್ಲೇಷಕರಾದ ಶ್ರೀ ಶರಣಬಸಯ್ಯ ಹಿರೇಮಠ, ಶ್ರೀ ವೀರಣ್ಣ ಕಲಕೇರಿ, ಶ್ರೀಮತಿ ಶಶಿಕಲಾಮೂರ್ತಿ, ಶ್ರೀಮತಿ ಅನ್ನಪೂರ್ಣ ಹಿರೇಮಠ ಅವರು ವಚನಗಳ ಮೂಲ ಆಶಯಕ್ಕೆ ದಕ್ಕೆ ಬಾರದಂತೆ ಸೂಕ್ಷ್ಮವಾಗಿ ಓದುಗರನ್ನು ವಾಚಾರ್ಥದಿಂದ ಲಕ್ಷಾರ್ಥಕ್ಕೆ ಕರೆದು ಕೊಂಡು ಹೋಗುವಲ್ಲಿ ಯಶಸ್ವಿಯಾಗಿzರೆ.
ವಚನ ವೈಭವ ಸಂಕಲನ ಹೊನ್ನಾಳಿ ಹಿರೇಕಲ್ಮಟದ ಪಟ್ಟಾಧ್ಯಕ್ಷರಾದ ಶ್ರೀ ಶ್ರೀ ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಆಶಿರ್ವಾದದೊಂದಿಗೆ ಶ್ರೀ ಮ. ನಿ .ಪ್ರ. ಹಾವರ್ತಿ ಶಿವಾನುಭವ ಚರಮೂರ್ತಿಗಳಾದ ಶ್ರೀ ಚನ್ನವೀರ ಶಿವಯೋಗಿಳವರು , ಶ್ರೀ ಮ.ನಿ.ಪ್ರ. ಡಾ.ಹಿರಿಶಾಂತ ವೀರ ಮಹಾಸ್ವಾಮಿಗಳು, ಶ್ರೀ ಷ.ಬ್ರ. ಅಭಿನವ ಶಿವಲಿಂಗೇಶ್ವರ ರುದ್ರಮುನಿ ಶಿವಾಚಾರ್ಯರು ಶ್ರೀ ಮ.ನಿ.ಪ್ರ. ಅಭಿನವ ಚನ್ನಬಸವ ಮಹಾಸ್ವಾಮಿ ಗಳ ಶುಭ ಸಂದೇಶದೊಂದಿಗೆ, ಹೊನ್ನಾಳಿಯ ವಿಶ್ರಾಂತ ಉಪನ್ಯಾಸಕರಾದ ಯು.ಎಸ್. ಸಂಗನಾಳಮಠರವರ ಮೌಲ್ಯಯುತ ಮುನ್ನುಡಿಯು ಕವಿ ಕಾವ್ಯದ ಮಹತ್ವವನ್ನು ಹೊತ್ತು ತಂದಿದೆ. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ನಾಡೋಜ ಡಾ. ಮಹೇಶ್ ಜೋಶಿ ಅವರು ಆಧ್ಯಾತ್ಮಿಕ ತತ್ವಗಳನ್ನು ರಚಿಸುವ ಹೆಜ್ಜೆ ಇಟ್ಟಿರುವ ವಚನಕಾರವರ ಆಸಕ್ತಿ ಹಾಗೂ ಕಾರ್ಯವೈಖರಿಯನ್ನು ಮನಸಾರೆ ಶ್ಲಾಘಿಸಿ ಶುಭ ಹಾರೈಸಿzರೆ. ಗದಗದ ಶ್ರೀ.ವೇ.ಮೂ.ಪಂ. ಚನ್ನವೀರ ಶಾಸ್ತ್ರಿಗಳು ಮಾರ್ಮಿಕವಾಗಿ ಗ್ರಂಥದ ಮಹತ್ವವನ್ನು ಮನಸಾರೆ ಬೆನ್ನುಡಿಯಲ್ಲಿ ಹೊಗಳಿzರೆ. ಆನ್‌ಲೈನ್ ಅನುಭವ ಮಂಟಪದ ಆಧುನಿಕ ವಚನಕಾರರು ಇವರ ವಚನಗಳನ್ನು ವಿಶ್ಲೇಷಣೆ ಮಾಡಿದ್ದು ತುಂಬಾ ವಿಶೇಷ ಎಂದು ಹೆಮ್ಮೆಯಿಂದ ಹೇಳಿಕೊಂಡಿzರೆ.
ನೈತಿಕ ಮೌಲ್ಯಗಳು ಕುಸಿಯುತ್ತಿರುವ ಇಂದಿನ ದಿನಮಾನಗಳಲ್ಲಿ ಸ್ವಲ್ಪಮಟ್ಟಿಗಾದರೂ ಸಮಾಜ ನಿರ್ಮಾಣಕ್ಕೆ ಬುನಾದಿ ಆಗಲಿ ಎಂದು ಆಶಿಸಿzರೆ. ಇವರು ವಚನಗಳ ಮೂಲಕ ವಿಡಂಬನಾತ್ಕಕ ಶೈಲಿಯಲ್ಲಿ, ವ್ಯಂಗ್ಯ ರೂಪದಲ್ಲಿ ತಮ್ಮ ಸಾತ್ವಿಕ ಸಿಟ್ಟು ಸೆಡವುಗಳನ್ನು ವ್ಯಕ್ತಪಡಿಸುತ್ತ ಆ ಎಲ್ಲ ದುರ್ನಡತೆಗಳನ್ನು ತ್ಯಜಿಸಿ ಸನ್ಮಾರ್ಗದಲ್ಲಿ ನಡೆದುಬಾಳಬೇಕೆಂದು ಬಯಸುತ್ತಾರೆ. ಎಲ್ಲರ ಮನೆ ಮನಗ ಳಲ್ಲಿ ಅವರ ವಚನ ವೈಭವ ನಿತ್ಯ ವೈಭವ ತರಲಿ ಎಂದು ಹಾರೈಸುವೆ.
ಶರಣಬಸಯ್ಯ ಹಿರೇಮಠ ಸ.ಶಿ.
ಸರಕಾರಿ ಪ್ರೌಢ ಶಾಲೆ ಮುದನೂರ
ತಾ : ಸುರಪುರ. ಜಿ: ಯಾದಗಿರಿ