ನೈಸರ್ಗಿಕ ಹಸಿರು ಶಕ್ತಿಯ ಬಳಕೆ ಹೆಚ್ಚಳವಾಗಲಿ: ಶ್ರೀಪತಿ

ಶಿವಮೊಗ್ಗ: ಕೃತಕ ಶಕ್ತಿಯ ಬಳಕೆಯಿಂದಾಗಿ ಜಗತಿಕ ತಾಪಮಾನ ಹೆಚ್ಚಳವಾಗುತ್ತಿದೆ. ಇದರಿಂದಾಗಿ ಮಳೆ ಮಾರುತಗಳ ದಿಕ್ಕು, ಸಮಯ ಬದಲಾಗಿದೆ. ಜಗತಿಕ ತಾಪಮಾನ ತಡೆಗಟ್ಟಲು ಭೂಮಂಡಲದಲ್ಲಿರುವ ನೈಸಗಿಕ ಸಂಪನ್ಮೂಲಗಳಾದ ಗಾಳಿ, ನೀರು, ಸೌರ ವಿದ್ಯುತ್‌ನಂತಹ ನೈಸರ್ಗಿಕ ಹಸಿರು ಶಕ್ತಿ (ಗ್ರೀನ್ ಎನರ್ಜಿ) ಬಳಕೆ ಹೆಚ್ಚಳವಾಗಬೇಕಿದೆ ಎಂದು ಜೆಎನ್‌ಎನ್ ಇಂಜಿನಿಯರಿಂಗ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ.ಎಲ್.ಕೆ. ಶ್ರೀಪತಿ ಹೇಳಿದರು.
ನಗರದ ಡಿವಿಎಸ್ ಕಲಾ, ವಿeನ ಮತ್ತು ವಾಣಿಜ್ಯ ಕಾಲೇ ಜಿನ ಭೌತಶಾಸ್ತ್ರ ವಿಭಾಗದ ವತಿ ಯಿಂದ ಭಾರತ ಸರ್ಕಾರದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ ಮತ್ತು ಕರ್ನಾಟಕ ಸರ್ಕಾರದ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಸಂಸ್ಥೆಯ ಆರ್ಥಿಕ ಸಹಯೋಗದೊಂದಿಗೆ ಇಂದು ಬೆಳಗ್ಗೆ ೧೦ ಗಂಟೆಗೆ ಕಾಲೇಜಿನ ಸಿಂಗಾರ ಸಭಾಂಗಣದಲ್ಲಿ ಆಯೋ ಜಿಸಲಾಗಿದ್ದ ಶಕ್ತಿಯ ಸಂರಕ್ಷಣೆ ಮತ್ತು ಶಕ್ತಿಯ ದಕ್ಷತೆ ಎಂಬ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಗಾಳಿ ಕೇವಲ ಅನಿಲಗಳ ಸಮೂಹವಲ್ಲ ಅದೊಂದು ಶಕ್ತಿಯ ಭಂಡಾರ. ಸೂರ್ಯನ ಶಾಖ ವಿದ್ಯುತ್ತಿನ ಆಗರ. ಪವನ ವಿದ್ಯು ತ್ ಸ್ಥಾವರ, ಸೌರ ಶಕ್ತಿ, ನೀರಿನ ಮೂಲಕ ವಿದ್ಯುತ್ ಉತ್ಪಾದಿಸಿ ಬೆಳಕು ಮತ್ತು ಇತರೆ ಯಾಂತ್ರಿಕ ಕೆಲಸಗಳಿಗೆ ಬಳಸಿಕೊಳ್ಳಬೇಕಾಗಿದೆ. ನೈಸರ್ಗಿಕ ವಿದ್ಯುತ್ ಉತ್ಪಾದನೆಗೆ ಭಾರತ ಸೇರಿದಂತೆ ಜಗತ್ತಿನ ಹಲವು ದೇಶಗಳು ಒತ್ತು ನೀಡಿವೆ. ೨೦೩೦ರ ವೇಳೆಗೆ ದೇಶದಲ್ಲಿ ಶೇ. ೫೦ರಷ್ಟು ಹಸಿರು ಶಕ್ತಿ ಉತ್ಪಾದಿಸುವ ಗುರಿ ಹೊಂದಲಾಗಿದ್ದು, ೨೦೨೬-೨೭ನೇ ವರ್ಷದಲ್ಲಿ ಈ ಗುರಿ ತಲುಪುವ ಸಾಧ್ಯತೆ ಇದೆ. ವಿದ್ಯುತ್ ಬೇಡಿಕೆ ಹೆಚ್ಚಳಕ್ಕೆ ಪರಮಾಣು ಸ್ಥಾವರದ ಮೂಲಕ ಕೃತಕ ಶಕ್ತಿಯ ಉತ್ಪಾದನೆ ಪರಿಹಾರವಲ್ಲ ಎಂದರು.
ಶಕ್ತಿ ಎಂದರೆ ಕೇವಲ ಶಾಖಾ ಮತ್ತು ಇಂಧನ ಅಷ್ಟೇ ಅಲ್ಲ. ತಾವು ತಿನ್ನುವ ಆಹಾರ, ಕುಡಿಯುವ ನೀರು ಸಹ ದೇಹಕ್ಕೆ ಶಕ್ತಿಯಾಗಿದೆ. ಇಂತಹ ಶಕ್ತಿ ಬಳಕೆಗೆ ದೈಹಿಕ ಚಟುವಟಿಕೆ ಅಗತ್ಯ. ಆಹಾರದ ಕ್ಯಾಲೋರಿಗೆ ತಕ್ಕಂತೆ ಶ್ರಮದ ಮೂಲಕ ಶಕ್ತಿಯ ಬಳಕೆಯಾಗ ಬೇಕಿದೆ. ಇಂತಹ ಬಳಕೆ ಕಡಿಮೆ ಯಾಗುತ್ತಿರುವುದರಿಂದ ಕಾಯಿಲೆ ಗಳು ಹೆಚ್ಚುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು
ಡಿವಿಎಸ್ ಅಧ್ಯಕ್ಷ ಕೆ.ಎನ್. ರುದ್ರಪ್ಪ ಕೊಳಲೆ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಾಂಶುಪಾಲ ಡಾ.ಎಂ. ವೆಂಕಟೇಶ್ ಅಧ್ಯಕ್ಷತೆ ವಹಿಸಿದ್ದರು. ದಯಾನಂದ ಸಾಗ ರ್ ಸೋಲಾರ್ ಎನರ್ಜಿ ಎಕ್ಸ್ಪ ರ್ಟ್‌ನ ದಯಾನಂದ ಸಾಗರ್, ಸೋಲಾರ್ ಎನರ್ಜಿ ಸರ್ವಿಸ್‌ನ ಮೋಹನ್, ಐಕ್ಯೂಎಸಿ ಸಂಯೋ ಜಕ ಪ್ರೊ. ಕುಮಾರಸ್ವಾಮಿ ಎನ್., ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಜಗದೀಶ್ ಎ.ಎಸ್., ರಾಜೀ ವ್ ನಾಡಿಗ್ ವೇದಿಕೆಯಲ್ಲಿದ್ದರು. ಇದೇ ಸಂದರ್ಭದಲ್ಲಿ ಡಾ.ಎಲ್.ಕೆ. ಶ್ರೀಪತಿ ಅವರನ್ನು ಗೌರವಿಸಲಾ ಯಿತು.
ಎಸ್. ಅನನ್ಯ ಭಟ್ ಪ್ರಾರ್ಥಿಸಿ, ಮಹಾಂತೇಶ್ ಬಿ.ಕೆ. ಸ್ವಾಗತಿಸಿ, ಸಂಚಿತಾ ಜೋಯ್ಸ್ ನಿರೂಪಿಸಿ, ಡಾ. ಅವಿನಾಶ್ ಎ.ಬಿ. ವಂದಿಸಿದರು.