ಬ್ಯಾಂಕಿಂಗ್ ವ್ಯವಹಾರದಲ್ಲಿ ನಂಬಿಕೆ ಅಗತ್ಯ…
ಶಿವಮೊಗ್ಗ : ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ನಂಬಿಕೆ ವಿಶ್ವಾಸ ಬಹಳ ಮುಖ್ಯ ಎಂದು ಆರ್ಬಿಐನ ಬ್ಯಾಂಕಿಂಗ್ ಲೋಕಪಾಲ್ ಡಾ. ಬಾಲು ಕೆಂಚಪ್ಪ ಅಭಿಪ್ರಾಯಪಟ್ಟರು
ಕುವೆಂಪು ರಂಗಮಂದಿರದಲ್ಲಿ ಆರ್ಬಿಐ ಮತ್ತು ಕೆನರಾ ಬ್ಯಾಂಕ್ ಸಹಯೋಗದಲ್ಲಿ ಬ್ಯಾಂಕಿಂಗ್ ಮತ್ತು ಬ್ಯಾಂಕಿಂಗ್ ಏತರ ಗ್ರಾಹಕರ ಅನುಕೂಲಕ್ಕಾಗಿ ಆಯೋಜಿಸಿದ್ದ ಜನ ಜಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ವಿಶ್ವಾಸ ನಂಬಿಕೆ ಹಾಗೂ ಗ್ರಾಹಕರನ್ನು ಸೆಳೆಯುವ ಶಕ್ತಿ ಇದೆ, ಗ್ರಾಹಕರ ರಕ್ಷಣೆ ಹಾಗೂ ಅವರಿಗೆ ತಿಳುವಳಿಕೆ ನೀಡುವುದು ನಮ್ಮ ಲೋಕಪಾಲನ ಜವಾಬ್ದಾರಿ ಹಿಂದೆ ಬ್ಯಾಂಕಿನ ಮೇಲೆ ವಿಶ್ವಾಸದ ವಾತಾವರಣ ಇರಲಿಲ್ಲ ನಂತರ ಹಲವಾರು ಬ್ಯಾಂಕಿಗಳನ್ನು ವಿಲೀನಗೊಳಿಸಿ ಆರ್ಥಿಕವಾಗಿ ಶಕ್ತಗೊಳಿಸಿ ಗ್ರಾಹಕರ ನಂಬಿಕೆ ವಿಶ್ವಾಸ ನಿಯತ್ತು ಉಳಿಸಿಕೊಳ್ಳಲು ಆರ್ಬಿಐ ಬಹಳ ಶ್ರಮಿಸುತ್ತಿದೆ ಎಂದರು.
ಆರ್ಬಿಐ ವ್ಯಾಪ್ತಿಯೊಳಗೆ ಬರುವ ಸಂಸ್ಥೆಗಳಲ್ಲಿ ಗ್ರಾಹಕರಿಗೆ ಸರ್ವಿಸ್ಗಳಲ್ಲಿ ತೊಂದರೆ ಕಂಡು ಬಂದಾಗ ಕೋರ್ಟಿಗೆ ಹೋಗುವ ಬದಲು ಆರ್ಬಿಐನ ಲೋಕಪಾಲ್ ಗೆ ದೂರ ನೀಡಿದ್ದಲ್ಲಿ ಶುಲ್ಕ ರಹಿತವಾಗಿ ಸಮಸ್ಯೆಗಳನ್ನು ಬಗೆಹರಿಸುತ್ತದೆ ಎಂದರು.
ಆರ್ಬಿಐ ನಮ್ಮ ದೇಶದಲ್ಲಿ ಸ್ಥಾಪನೆಗೊಂಡು ೯೦ ವರ್ಷ ಕಳೆದಿದ್ದು ತನ್ನ ಕಾರ್ಯಕ್ಷೇತ್ರವನ್ನು ಬಲಾಢ್ಯ ಗೊಳಿಸುತ್ತಿದೆ. ಹಣದುಬ್ಬರವನ್ನು ನಿಯಂತ್ರಿಸು ವುದು ಪ್ರಮುಖ ಕೆಲಸವಾಗಿದ್ದು, ಇಡೀ ಜಗತ್ತಿನಲ್ಲಿ ನಡೆಯುವ ಡಿಜಿಟಲ್ ವ್ಯವಹಾರದಲ್ಲಿ ಶೇ.೫೦ ಭಾರತದ ಪಾಲಿದೆ ಎಂದರು.
ಕೆನರಾ ಬ್ಯಾಂಕ್ ಜನರಲ್ ಮ್ಯಾನೇಜರ್ ಜಯಪ್ರಕಾಶ್ ಅವರು, ಗ್ರಾಹಕರು ಡಿಜಿಟಲ್ ವ್ಯವಸ್ಥೆಗೆ ಬದಲಾಗಬೇಕು. ಹಿಂದೆ ಬ್ಯಾಂಕಿಂಗ್ ವ್ಯವಹಾರಗಳು ಪೆನ್ನು ಪೇಪರ್ ಫೈಲ್ಗಳಲ್ಲಿ ನಡೆಯುತ್ತಿತ್ತು. ಈಗ ಗ್ರಾಹಕರ ಸುಲಭ ಕಾಗಿ ಪ್ರತಿಯೊಂದು ಬ್ಯಾಂಕಿಂಗ್ ಸರ್ವಿಸ್ಗಳನ್ನು ಡಿಜಿಟಲ್ ಗೊಳಿಸಿ ಅವರ ಕೈಯ ಬ್ಯಾಂಕಿಂಗ್ ವ್ಯವಸ್ಥೆಯನ್ನು ನೀಡಲಾಗಿದೆ. ಡಿಜಿಟಲ್ ವಹಿವಾಟು ಸುರಕ್ಷಿತ ಎಂಬ ಧೈರ್ಯ ಮೂಡಿಸುವ ಸಲುವಾಗಿ ಈ ಲೋಕಪಾಲ ಕಾರ್ಯಕ್ರಮ ಆಯೋಜಿಸುತ್ತಿದೆ. ಗ್ರಾಹಕರ ಪ್ರತಿಯೊಂದು ರೂಪಾಯಿಯು ವ್ಯತ್ಯಾಸವಾಗದಂತೆ ಸುರಕ್ಷಿತವಾಗಿ ಇಡುವುದು ಬ್ಯಾಂಕಿಂಗ್ನ ಉzಶ ಎಂದರು.
ಉಪ ಲೋಕಪಾಲ ನಿಧಿ ಅಗರ್ವಾಲ್ ಕೆನರಾ ಬ್ಯಾಂಕ್ ಶಿವಮೊಗ್ಗ ಉಪ ಮಹಾ ಪ್ರಬಂಧಕರಾದ ದೇವರಾಜ್ ವಿವಿಧ ಬ್ಯಾಂಕ್ ನ ಅಧಿಕಾರಿಗಳು ಉಪಸ್ಥಿತರಿದ್ದರು.