ನಗರದಲ್ಲಿ ಬಿರುಗಾಳಿ ಮಳೆಗೆ ಧರೆಗುರುಳಿದ ಮರಗಳು; ಸಿಡಿಲಿಗೆ ಓರ್ವ ಮಹಿಳೆ ಸಾವು…

ಶಿವಮೊಗ್ಗ : ನಗರದಲ್ಲಿ ಮಳೆಯ ಆವಾಂತರ ನಡೆದ ಜಗಕ್ಕೆ ಶಾಸಕ ಸಿ.ಎನ್.ಚೆನ್ನಬಸಪ್ಪ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಿನ್ನೆ ಸಂಜೆ ಕೇವಲ ೧೫ ನಿಮಿಷ ಸುರಿದ ಭಾರಿ ಮಳೆ ಮತ್ತು ಗುಡುಗು ಸಿಡಿಲು, ಗಾಳಿಯಿಂದಾಗಿ ಮರಗಳು ಧರೆಗುರುಳಿದ್ದು, ಜಗಕ್ಕೆ ಶಾಸಕರು ಭೇಟಿ ನೀಡಿ ಅಗತ್ಯ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಬೊಮ್ಮನ್ ಕಟ್ಟೆ, ವಿನೋಬ ನಗರ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಸಂಚರಿಸಿದ ಶಾಸಕರು ಸ್ಥಳಕ್ಕೆ ಮೆಸ್ಕಾಂ ಮತ್ತು ಅರಣ್ಯ ಇಲಾಖೆಯವರನ್ನ ಕರೆಯಿಸಿ ಧರೆಗುರುಳಿದ ಮರಗಳ ತೆರವಿಗೆ ಸೂಚಿಸಿದರು.
ಸಿಡಿಲಿಗೆ ಮಹಿಳೆ ಬಲಿ:
ಸಿಡಿಲಿಗೆ ವಿವಾಹಿತ ಮಹಿಳೆಯೊಬ್ಬರು ಬಲಿಯಾಗಿ zರೆ. ಕೂಲಿ ಕೆಲಸ ಮಾಡುವ ವಿವಾಹಿತ ಮಹಿಳೆ ಸಿಡಿಲು ಬಡಿದು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.
ಶಿವಮೊಗ್ಗದಲ್ಲಿ ಸಂಜೆ ಬಡಿದ ಸಿಡಿಲಿಗೆ ಲಕ್ಷ್ಮೀ ಬಾಯಿ(೨೮) ಎಂಬ ಮಹಿಳೆ ಸಾವನ್ನಪ್ಪಿzಳೆ. ಕುರಿಗಳಿಗೆ ಮೇವು ತರಲು ಹೋದಾಗ ಈ ದುರ್ಗಘಟನೆ ಸಂಭವಿಸಿದೆ. ಮಹಿಳೆಯ ಮೃತ ದೇಹವನ್ನ ಮರಣೋತ್ತರ ಪರೀಕ್ಷೆ ಕೇಂದ್ರಕ್ಕೆ ಸಾಗಿಸಲಾಗಿದೆ. ಕುಮಾರ ನಾಯ್ಕ ಗಾರೆ ಕೆಲಸ ಮಾಡುತ್ತಿದ್ದು ಬೊಮ್ಮನ ಕಟ್ಟೆಯ ನಿವಾಸಿ ಗಳಾಗಿzರೆ. ವಿನೋಬ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಶಿವಮೊಗ್ಗ ತಹಶೀಲ್ದಾರ್ ಮರಣೋತ್ತರ ಪರೀಕ್ಷೆ ಕೇಂದ್ರಕ್ಕೆ ಭೇಟಿ ನೀಡಿzರೆ.