ಪಾರದರ್ಶಕ – ತ್ವರಿತ – ಜನಪರ ಸೇವೆ ನೀಡಬೇಕು : ಸಚಿವ ಬೈರೇಗೌಡ
ಶಿವಮೊಗ್ಗ : ಜನರ ನಿರೀಕ್ಷೆ ಯನ್ನು ಅರ್ಥ ಮಾಡಿಕೊಂಡು ತ್ವರಿತವಾಗಿ, ಜನಪರ ಸೇವೆಯನ್ನು ನೀಡಬೇಕೆಂದು ಕಂದಾಯ ಇಲಾಖೆ ಅಧಿಕಾರಿಗಳು/ಸಿಬ್ಬಂದಿಗಳಿಗೆ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಸೂಚಿಸಿದರು.
ಜಿಪಂ ಸಭಾಂಗಣದಲ್ಲಿ ಏರ್ಪಡಿಸಿದ್ದ ಜಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರ ಇರುವುದು ಜನ ಜೀವನ ಸುಲಲಿತಗೊಳಿಸುವುದಕ್ಕೆ. ಜನರು ಹೆಚ್ಚಾಗಿ ಬರುವುದು ಮಾತೃ ಇಲಾಖೆಯಾಗಿರುವ ಕಂದಾಯ ಇಲಾಖೆಗೆ. ಆದ್ದರಿಂದ ಜನ ರೊಂದಿಗೆ ಸೌಹಾರ್ದಯುತವಾಗಿ ನಡೆದುಕೊಂಡು ಅವರನ್ನು ಹೆಚ್ಚು ಅಲೆದಾಡಿಸದೇ ಗುಣಮಟ್ಟದ ಮತ್ತು ತ್ವರಿತ ಸೇವೆಯನ್ನು ನೀಡಬೇಕು. ಈ ನಿಟ್ಟಿನಲ್ಲಿ ಆಡಳಿತ ಯಂತ್ರದಲ್ಲಿ ಬದಲಾವಣೆಗಳನ್ನು ತರಲಾಗುತ್ತಿದೆ, ಅದನ್ನು ಪರಿಣಾಮಕಾರಿಯಾಗಿ ಅಧಿಕಾರಿ/ಸಿಬ್ಬಂದಿ ವರ್ಗದವರು ಅನುಷ್ಟಾನಕ್ಕೆ ತರಬೇಕೆಂದರು.
೨೦೧೯ ರಿಂದ ೨೦೨೨ರವರೆಗೆ ನೆರೆಸಂತ್ರಸ್ಥರ ಪುನರ್ವಸತಿ ಯೋಜನೆಯಡಿ ಶುರು ಮಾಡದೇ ಇರುವ ಮನೆಗಳ ಕುರಿತು ತಹಶೀಲ್ದಾರ್ ಪರಿಶೀಲಿಸಿ, ನೋಟಿಸ್ ನೀಡಿ ಪ್ರಕರಣ ಇತ್ಯರ್ಥ ಪಡಿಸಬೇಕು ಹಾಗೂ ಬಾಕಿ ಉಳಿಸಿರುವ ಶಾಲೆ-ಅಂಗನವಾಡಿ ಸಣ್ಣಪುಟ್ಟ ಕೆಲಸಗಳನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕೆಂದು ಸಂಬಂಧಿಸಿದ ಅಧಿಕಾರಿಗೆ ತಾಕೀತು ಮಾಡಿದರು.
ಸಮಸ್ಯಾತ್ಮಕ ಪೈಕಿ ಆರ್‌ಟಿಸಿ ಗಳನ್ನು ಒಂದುಗೂಡಿಸಿ ಸರ್ವೇ ಮಾಡಿಸಲು ಕ್ರಮ ವಹಿಸಲಾಗುತ್ತಿದ್ದು ಜನರ ಬಹಳ ವರ್ಷಗಳ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುತ್ತಿದೆ. ಜಿಯಲ್ಲಿ ಸುಧಾರಣೆ ಕ್ರಮಗಳು ಆಗುತ್ತಿವೆ. ಆದರೆ ಇನ್ನೂ ಹಲವಾರು ಸವಾಲುಗಳಿವೆ ಎಂದರು.
ಜಿಯಲ್ಲಿ ೯೭ ಸಾವಿರ ಫಾರ್ಮ್ ೫೭ ಅರ್ಜಿಗಳು ಬಂದಿವೆ. ಇವನ್ನು ಇತ್ಯರ್ಥ ಪಡಿಸಲು ಸಮಿತಿ ರಚನೆ ಮಾಡಲಾಗುವುದು. ಸದರಿ ಸಮಿತಿಯು ನಿಜವಾದ ಬಡ ಸಾಗುವಳಿದಾರರನ್ನು ಗುರುತಿಸಿ ಅವರ ಜಮೀನಿಗೆ ತ್ವರಿತವಾಗಿ ಹಕ್ಕುಪತ್ರ ನೀಡುವ ಕೆಲಸ ಆಗಬೇಕು. ರೈತರ ಹೆಸರಿನಲ್ಲಿ ಬೇರೆಯವರು ಭೂಮಿ ಕಬಳಿಸು ವಂತಾಗಬಾರದು. ಕಡೂರು ತಾಲ್ಲೂಕಿನಲ್ಲಿ ಅನರ್ಹರಿಗೆ ಸಾವಿರಾರು ಎಕರೆ ಜಮೀನು ಮಂಜೂರು ಮಾಡಿದ ಅಧಿಕಾರಿಗಳ ವಿರುದ್ದ ಶಿಸ್ತಿನ ಕ್ರಮ ವಹಿಸಲಾಗಿದೆ. ಆದ್ದರಿಂದ ಬಹಳ ಎಚ್ಚರಿಕೆಯಿಂದ ಅಧಿಕಾರಿಗಳು ಕೆಲಸ ಮಾಡಬೇಕು. ಅರ್ಹರಿಗೆ ಅನುಕೂಲ ಮಾಡಿಕೊಡಬೇಕೆಂದು ಸೂಚಿಸಿದರು.
ಫಾರಂ ೫೭ ವಿಲೇ ಮಾಡಲು ತಹಶೀಲ್ದಾರರಿಗೆ ಹೊಸ ಆಪ್ ನೀಡಲಾಗುವುದು. ಇದರಲ್ಲಿ ಡಾಟಾ ಅಪ್‌ಲೋಡ್ ಮಾಡಿ ದಾಗ ಅದು ಸರ್ಕಾರಿ ಅಥವಾ ಅರಣ್ಯ ಭೂಮಿ ಎಂದು ಗೊತ್ತಾ ಗುತ್ತದೆ. ೧೫ ವರ್ಷದ ಸ್ಯಾಟಲೈಟ್ ಇಮೇಜ್ ಸಿಗಲಿದೆ. ಗ್ರಾಮ ಲೆಕ್ಕಿಗರು ಪ್ರತಿ ಮೂರು ತಿಂಗಳಿಗೆ ಕ್ಷೇತ್ರ ಭೇಟಿ ನೀಡಿ ಒತ್ತುವರಿ ಬಗ್ಗೆ ಪರಿವೀಕ್ಷಿಸಿ ವರದಿ ನೀಡಬೇಕು ಎಂದ ಅವರು, ನಿಜವಾದ ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡುವುದು ಮತ್ತು ಸರ್ಕಾರಿ ಜಗವನ್ನು ಭದ್ರಪಡಿಸುವ ಕೆಲಸವನ್ನು ಕಂದಾಯ ಇಲಾಖೆ ಅಧಿಕಾರಿ/ಸಿಬ್ಬಂದಿ ಮಾಡಬೇಕು ಎಂದರು.
ಜೆಸ್ಲಿಪ್ ಮತ್ತು ಪೌತಿ ಖಾತೆ ಬಿಟ್ಟು ಉಳಿದ ಖಾತೆಗಳನ್ನು ಸ್ವಯಂ ಚಾಲಿತವಾಗಿ ಮಾಡುವ ಯೋಜನೆ ಇದೆ. ವಿವಾದಿತ ಮ್ಯುಟೇಷನ್‌ಗಳ ಪೆಂಡಿನ್ಸಿ ಜಿಯಲ್ಲಿ ಕಡಿಮೆ ಇದೆ. ಇಂತಹ ಪ್ರಕರಣ ಇತ್ಯರ್ಥಕ್ಕೆ ಸರಾಸರಿ ೧ ವರ್ಷ ತೆಗೆದುಕೊಂಡಿದ್ದ ಸಮಯವನ್ನು ೧೩೫ ದಿನಗಳಿಗೆ ಇಳಿಸಿದ್ದೀರಿ. ಉತ್ತಮ ಬೆಳಿವಣಿಗೆ ಆದರೆ ಇದು ಗರಿಷ್ಟ ೯೦ ದಿನಗಳಲ್ಲಿ ವಿಲೇ ಆಗಬೇಕು. ತಾವು ೬೦ ರಿಂದ ೬೫ ದಿನಗಳಲ್ಲಿ ವಿಲೇ ಮಾಡಲು ಪ್ರಯತ್ನಿಸಬೇಕು ಎಂದರು.
ಶಿವಮೊಗ್ಗದಲ್ಲಿ ಭೂಮಿ ಮಂಜೂರಾತಿ ವಿಷಯದಲ್ಲಿ ಹೆಚ್ಚಿನ ಸಮಸ್ಯೆಗಳಿವೆ. ಜಿಧಿಕಾರಿಗಳು ಶರಾವತಿ ಸಂತ್ರಸ್ತರು ಹಾಗೂ ಇತರೆ ಭೂಮಿ ಮಂಜೂರಾತಿ ಕುರಿತು ನನ್ನ ಗಮನಕ್ಕೆ ತಂದಿzರೆ. ಅರಣ್ಯ ಮತ್ತು ಕಂದಾಯ ಇಲಾಖೆಗಳ ನಡುವೆ ಸಮನ್ವಯತೆ ಸಾಧಿಸಿ ಇದನ್ನು ಬಗೆಹರಿಸಲು ಕ್ರಮ ವಹಿಸಲಾಗುವುದು ಎಂದರು.
ಶರಾವತಿ ಸಂತ್ರಸ್ತರಿಗೆ ಪರಿಹಾರ ಒದಗಿಸಲು ತಜ್ಞರ ಸಮಿತಿ ರಚಿಸಿ ಪರಿಹಾರಕ್ಕೆ ಪ್ರಯತ್ನಿಸಲಾಗುತ್ತಿದೆ. ಸರ್ಕಾರದಿಂದ ಈ ಕುರಿತು ಸೆಟ್ಲ್‌ಮೆಂಟ್ ಮಾಡಲು ಸೆಟ್ಲ್‌ಮೆಂಟ್ ಆಫೀಸರ್ ನೇಮಕ ಮಾಡಲಾಗುತ್ತಿದೆ. ಶೇ.೫೦ ಕಂದಾಯ ಭೂಮಿ ಇದ್ದರೆ, ಶೇ.೫೦ ಅರಣ್ಯ ಭೂಮಿ ಈ ರೀತಿ ಸಮಸ್ಯೆ ಗಳಿವೆ. ಭೂಮಿ ಸರ್ವೇ ಕಾರ್ಯ ತ್ವರಿತವಾಗಿ ಆಗಬೇಕಿದೆ. ಅದಕ್ಕೆ ಲೈಸನ್ಸ್ಡ್ ಸರ್ವೇಯರ್ ಅಗತ್ಯವಿದೆ ಎಂದು ಜಿಧಿಕರಿಗಳು ತಿಳಿಸಿದ್ದು, ಭೂಮಾಪನ ಇಲಾಖೆ ಆಯುಕ್ತರು ಅಕ್ಕಪಕ್ಕದ ಜಿಯ ಸರ್ವೇಯರ್ ಅಥವಾ ನೇಮಕಾತಿ ಹೊಂದಿದ ಸರ್ವೇಯರ್‌ಗಳನ್ನು ನಿಯೋಜಿಸು ವಂತೆ ಹಾಗೂ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಹಕರಿಸುವಂತೆ ತಿಳಿಸಿದರು.
ಆರ್‌ಟಿಸಿ ಮಿಸ್‌ಮ್ಯಾಚ್ ೫೩೧೩ ಪ್ರಕರಣಗಳು ಬಾಕಿ ಇವೆ. ಇದರಲ್ಲಿ ಅರಣ್ಯಕ್ಕೆ ಸಂಬಂಧಿಸಿದ ಸುಮಾರು ೨೦೦೦ ಜಟಿಲ ಪ್ರಕರಣ ಗಳಿವೆ ಎಂದು ಡಿಸಿ ಯವರು ತಿಳಿಸಿದ್ದು, ಇನ್ನುಳಿದ ಪ್ರಕರಣಗಳನ್ನು ತ್ವರಿತವಾಗಿ ವಿಲೇ ಮಾಡುವಂತೆ ಸೂಚಿಸಿದ್ದೇನೆ ಎಂದರು.
ಸರ್ವೇಯರ್‌ಗಳ ಕೊರತೆ ಹೆಚ್ಚಿದೆ. ಆದ್ದರಿಂದ ಸರ್ವೇ ಇಲಾಖೆ ವಯಿತಿಯಿಂದ ೨೦೦೦ ಲೈಸೆನ್ಸ್ಡ್ ಸರ್ವೇಯರ್ ಮತ್ತು ೩೫೪ ಸರ್ಕಾರಿ ಸರ್ವೇಯರ್ ನೇಮಕಕ್ಕೆ ಸೂಚಿಸ ಲಾಗಿದ್ದು, ಜಿಗೆ ಅಗತ್ಯವಾದ ಸರ್ವೇಯರ್‌ಗಳನ್ನು ಅಕ್ಕಪಕ್ಕದ ಜಿಯಿಂದ ಒದಗಿಸಲು ಹಾಗೂ ಹೊಸದಾಗಿ ನೇಮಕಗೊಂಡ ಸರ್ವೇಯರ್ ನಿಯೋಜಿಸುವಂತೆ ಇಲಾಖೆ ಆಯುಕ್ತರಿಗೆ ತಿಳಿಸಿದ್ದೇನೆ. ಹಾಗೂ ೧೫೦೦ ರಿಂದ ೧೭೦೦ ಗ್ರಾಮ ಲೆಕ್ಕಿಗರನ್ನು ನೇಮಕ ಮಾಡಲು ಸೂಚಿಸಲಾಗಿದೆ ಎಂದರು.
ಇ-ಆಫೀಸ್ ಅನುಷ್ಟಾನ: ಆಡಳಿತದಲ್ಲಿ ವೇಗ ಮತ್ತು ಪಾರದರ್ಶಕತೆ ತರಲು ಹಾಗೂ ಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ಇ-ಆಫೀಸ್ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ತಹಶೀಲ್ದಾರ್ ಕಚೇರಿಯಿಂದ ಮೇಲ್ ಹಂತದ ಕಚೇರಿವರೆಗೆ ಜರಿಗೆ ತರಬೇಕು. ಇಂದು ಶಿವಮೊಗ್ಗ ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿದ ವೇಳೆ ಇ-ಆಫೀಸ್ ಪರಿಣಾಕಾರಿಯಾಗಿ ಜರಿಯಾಗದ ಬಗ್ಗೆ ಗಮನಿಸಿದ್ದೇನೆ. ಜನಪರವಾದ ಮತ್ತು ವೇಗದ ಸೇವೆ ನೀಡಲು ಇ-ಆಫೀಸ್ ಅತ್ಯವಶ್ಯವಾಗಿದ್ದು ಜಿಽಕಾರಿಗಳು ಇನ್ನು ೧೫ ದಿನಗಳಲ್ಲಿ ಅನುಷ್ಟಾನಗೊಳಿಸುತ್ತೇವೆ ಎಂದು ತಿಳಿಸಿzರೆ ಎಂದರು.
ನೋಂದಣಿ ಇಲಾಖೆಗೆ ಸಂಬಂಧಿಸಿದಂತೆ ಅಧಿಕಾರಿ ಗಳೊಂದಿಗೆ ಮಾತನಾಡಿದ ಸಚಿವರು, ಇಲಾಖೆಯಲ್ಲಿ ಸುಮಾರು ಐದು ವರ್ಷಗಳಿಂದ ಮಾರುಕಟ್ಟೆ ಬೆಲೆ ಪರಿಷ್ಕರಣೆ ಯಾಗಿರಲಿಲ್ಲ. ಗೈಡೆನ್ಸ್ ದರ ಮತ್ತು ಮಾರುಕಟ್ಟೆ ದರಕ್ಕೆ ಸುಮಾರು ನಾಲ್ಕು ಪಟ್ಟು ವ್ಯತ್ಯಾಸವಿದೆ. ಗೈಡೆನ್ಸ್ ದರಕ್ಕಿಂತ ಮಾರುಕಟ್ಟೆ ದರ ೩ ರಿಂದ ೪ ನಾಲ್ಕು ಹೆಚ್ಚಿದೆ. ಈ ತಾರತಮ್ಯ ಸರಿಪರಿಸುವ ಪ್ರಕ್ರಿಯೆ ನಡೆಯು ತ್ತಿದೆ. ಮಾರುಕಟ್ಟೆ ದರವನ್ನು ಪರಿಷ್ಕರಿಸಲಾಗಿದ್ದು, ಆಕ್ಷೇಪಣೆಗಳಿಗೆ ಆಹ್ವಾನ ನೀಡಲಾಗಿದೆ. ಈ ಕುರಿತು ಆಕ್ಷೇಪಣೆಗಳನ್ನು ಜನರು ಸಲ್ಲಿಸ ಬಹುದು. ನೋಂದಣಿ ಕಚೇರಿ ಯಲ್ಲಿ ಸರ್ವರ್ ಅಲ್ಲ ಬದಲಾಗಿ ನೆಟ್‌ವರ್ಕ್ ಸಮಸ್ಯೆ ಇದೆ ಎಂದ ಸಚಿವರು ಈ ಸಮಸ್ಯೆ ಬಗೆಹರಿಸುವ ಕುರಿತು ಅಧಿಕಾರಿಗೆ ಸೂಕ್ತ ಸೂಚನೆ ಮತ್ತು ಸಲಹೆಯನ್ನು ನೀಡಿದರು.
ಶಾಸಕ ಎಸ್.ಎನ್. ಚನ್ನಬಸಪ್ಪ ಅವರು, ಸಬ್‌ರಿಜಿಸ್ಟ್ರಾರ್ ಕಚೇರಿ ಸ್ಥಳಾಂತರದ ಅಗತ್ಯವಿದ್ದು, ಈ ಕಚೇರಿಗೆ ಸಿಎ ನಿವೇಶನ ಮಂಜೂರಾತಿ, ತಹಶೀಲ್ದಾರ್ ಕಛೇರಿ ಮೂಲಸೌಕರ್ಯ ಅಭಿವೃದ್ದಿ, ಹಕ್ಕುಪತ್ರ ವಿತರಣೆ, ರುದ್ರಭೂಮಿಗೆ ಜಗ, ಗೋಶಾಲೆ ನಿರ್ಮಾಣದ ಕುರಿತು ಮನವಿ ಸಲ್ಲಿಸಿದರು.
ಸಭೆಯಲ್ಲಿ ಸಚಿವರು ಗ್ರಾಮ ಲೆಕ್ಕಿಗರು, ಆರ್‌ಐ ಸೇರಿದಂತೆ ಅಧಿಕಾರಿ/ಸಿಬ್ಬಂದಿ ವರ್ಗದಿಂದ ಮುಕ್ತವಾಗಿ ಸಲಹೆಗಳನ್ನು ಮತ್ತು ಮನವಿಗಳನ್ನು ಸ್ವೀಕರಿಸಿದರು.
ಸಭೆಯಲ್ಲಿ ಶಾಸಕಿ ಶಾರದಾ ಪೂರ್ಯಾನಾಯ್ಕ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಠಾರಿಯಾ, ಕಂದಾಯ ಇಲಾಖೆ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್, ಭೂಮಾಪನ ಇಲಾಖೆ ಆಯುಕ್ತ ಜೆ.ಮಂಜುನಾಥ್, ಕರ್ನಾಟಕ ಸಾರ್ವಜನಿಕ ಜಮೀನು ಗಳ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪಿ ವಸಂತಕುಮಾರ್, ಜಿಧಿಕಾರಿ ಡಾ| ಸೆಲ್ವಮಣಿ ಆರ್, ಜಿ.ಪಂ ಸಿಇಓ ಸ್ನೇಹಲ್ ಸುಧಾಕರ ಲೋಖಂಡೆ, ಜಿ ಮಟ್ಟದ ಅಧಿಕಾರಿಗಳು, ಸಿಬ್ಬಂದಿಗಳು ಹಾಜರಿದ್ದರು.