ಜು.೧ರ ನಾಳೆ ಕೆಡಬ್ಲ್ಯುಜೆಎನಿಂದ ಪತ್ರಿಕಾ ದಿನಾಚರಣೆ..

ಶಿವಮೊಗ್ಗ: ಕರ್ನಾಟಕ ಕಾರ್‍ಯ ನಿರತ ಪತ್ರಕರ್ತರ ಸಂಘದ ಜಿಲ್ಲಾ ಶಾಖೆ ವತಿಯಿಂದ ಜು.೧ರಂದು ಸರ್ಕಾರಿ ನೌಕರರ ಭವನದಲ್ಲಿ ಪತ್ರಿಕಾ ದಿನಾಚರಣೆಯನ್ನು ಬೆಳಿಗ್ಗೆ ೧೦ಗಂಟೆಗೆ ಆಯೋಜಿಸಲಾಗಿದೆ ಎಂದು ಸಂಘದ ಉಪಾಧ್ಯಕ್ಷ ಹಾಲ ಸ್ವಾಮಿ ಅವರು ಸುದ್ದಿಗೋಷ್ಟಿ ಯಲ್ಲಿ ಹೇಳಿದರು.
ಕುವೆಂಪು ವಿವಿಯ ಪತ್ರಿಕೋ ದ್ಯಮ ಹಾಗೂ ಸಮೂಹ ಸಂವ ಹನ ವಿಭಾಗದ ಸಹಯೋಗದೊ ಂದಿಗೆ ಆಯೋಜಿಸಿರುವ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಸಂಸದ ಬಿ.ವೈ. ರಾಘವೇಂದ್ರ ಉದ್ಘಾಟಿಸುವರು. ಮುಖ್ಯ ಅತಿಥಿ ಗಳಾಗಿ ರಾಜ್ಯ ಸರ್ಕಾರಿ ನೌಕರರ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ಮೇ ಯರ್ ಶಿವಕುಮಾರ್, ಕುವೆಂಪು ವಿವಿ ಪತ್ರಿಕೋದ್ಯಮ ವಿಭಾಗದ ಡಾ. ಸತ್ಯಪ್ರಕಾಶ್ ಭಾಗವಹಿಸ ಲಿದ್ದು, ಬೆಂಗಳೂರಿನ ಹಿರಿಯ ಪತ್ರಕರ್ತ ಸಮೀವುಲ್ಲಾ ಬೆಲಗೂ ರು ದಿಕ್ಸೂಚಿ ಉಪನ್ಯಾಸ ನೀಡಲಿ ದ್ದಾರೆ. ಸಂಘದ ಅಧ್ಯಕ್ಷ ಕೆ.ವಿ. ಶಿವಕುಮಾರ್ ಅಧ್ಯಕ್ಷತೆ ವಹಿಸಲಿ ದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಶಾಸಕ ಎಸ್.ಎನ್.ಚನ್ನಬಸಪ್ಪ, ಅಜೇಯ ಪತ್ರಿಕೆ ಸಂಪಾದಕ ಎಂ.ಶ್ರೀನಿ ವಾಸನ್, ಡಿಟಿಪಿ ಅಪರೇಟರ್ ಶೋಭಾ, ಪ್ರಿಂಟರ್ ಹರೀಶ್, ಪತ್ರಿಕಾ ವಿತರಕ ಚಂದ್ರಶೇಖರ್ ಅವರನ್ನು ಸನ್ಮಾನಿಸಲಾಗುವುದು ಎಂದರು.
ಸಂಘದ ಪ್ರಧಾನ ಕಾರ್ಯ ದರ್ಶಿ ವಿ.ಟಿ.ಅರುಣ್ ಮಾತ ನಾಡಿ, ಜಿಲ್ಲೆಯ ಸಂಘದ ಎಲ್ಲಾ ಪತ್ರಕರ್ತರು ಈ ಕಾರ್ಯಕ್ರಮ ದಲ್ಲಿ ಭಾಗವಹಿಸಲಿದ್ದಾರೆ. ಪತ್ರಕರ್ತರ ಜೊತೆ ತಮ್ಮ ಕುಟುಂಬ ವರ್ಗದವರನ್ನು ಕರೆ ತರಬೇಕು ಎಂದು ವಿನಂತಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ನಗರ ಕಾರ್ಯದರ್ಶಿ ಕೆ.ಆರ್. ಸೋಮನಾಥ್ ಇದ್ದರು.