ಚಾಲುಕ್ಯ ನಗರದಲ್ಲಿ ನಾಳೆ ಸಾಹಿತ್ಯ ಹುಣ್ಣಿಮೆ…
ಶಿವಮೊಗ್ಗ : ಜಿ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ನೇತೃತ್ವದಲ್ಲಿ ಅ.೧೯ ರ ನಾಳೆ (ಶನಿವಾರ) ಸಂಜೆ ೬ ಗಂಟೆಗೆ ಚಾಲುಕ್ಯ ನಗರದ ಕುವೆಂಪು ಉದ್ಯಾನವನದಲ್ಲಿರುವ ಸಾವಿತ್ರಿ ಬಾಯಿ ಪುಲೆ ವೇದಿಕೆಯಲ್ಲಿ ೨೩೦ನೇ ತಿಂಗಳ ಸಾಹಿತ್ಯ ಹುಣ್ಣಿಮೆ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಈ ಬಾರಿಯ ಸಾಹಿತ್ಯ ಹುಣ್ಣಿಮೆಗೆ ಭೂಮಿ ಹುಣ್ಣಿಮೆ ಮತ್ತು ವಾಲ್ಮೀಕಿ ಜಯಂತಿಯನ್ನು ಆಚರಿಸಲಾಗುತ್ತಿದೆ. ಕಾರ್ಯಕ್ರಮ ವನ್ನು ಶಾಸಕ ಎಸ್.ಎನ್. ಚನ್ನಬಸಪ್ಪ ಉದ್ಘಾಟಿಸಲಿದ್ದು, ಜಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ. ಮಂಜುನಾಥ ಅಧ್ಯಕ್ಷತೆ ವಹಿಸಲಿzರೆ. ಗಾಯತ್ರಿ ಸುರೇಂದ್ರ ಬರೆದ ಕವನಧಾರೆ ಕವನ ಸಂಕಲನ ವನ್ನು ಜಿಪಂ ಸಿಇಓ ಎನ್. ಹೇಮಂತ್ ಲೋಕಾರ್ಪಣೆ ಮಾಡಲಿzರೆ.
ಶ್ರೀ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ನಿರ್ದೇಶಕ ರಾಗಿ ಸರ್ಕಾರದಿಂದ ನೇಮಕವಾದ ರಘುರಾಮ ದೇವಾಡಿಗ ಅವರನ್ನು ಅಭಿನಂದಿಸಲಾಗುವುದು. ಮುಖ್ಯ ಅತಿಥಿಗಳಾಗಿ ಕುವೆಂಪು ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಡಾ| ಇಂದಿರಾನಾಯ್ಕ, ಗೌರವಾಧ್ಯಕ್ಷ ಡಾ|ಬಾಲ ಸುಬ್ರಹ್ಮಣ್ಯ ಅವರು ಭಾಗವಹಿಸಲಿzರೆ.
ಹಿಂದಿನ ಸಾಹಿತ್ಯ ಹುಣ್ಣಿಮೆ ಆತಿಥ್ಯ ನೀಡಿದ್ದ ಜೀವನ ಸಂಜೆ ವೃದ್ಧಾಶ್ರಮದ ಅಧ್ಯಕ್ಷ ಹಾಲಪ್ಪ, ಸ್ವಾಮಿ ವಿವೇಕಾನಂದ ಯೋಗ ಕೇಂದ್ರದ ಅಧ್ಯಕ್ಷ ಭೈರಾಪುರ ಶಿವಪ್ಪಮೇಸ್ಟ್ರು ಭಾಗವಹಿಸಲಿzರೆ. ಹಾಡು, ಹಾಸ್ಯ, ಕವನ, ಹನಿಗವನ, ಕಥೆ, ವಿಚಾರ ಎಲ್ಲವನ್ನೂ ಒಳಗೊಂಡ ಈ ಸಾಹಿತ್ಯ ಹುಣ್ಣಿಮೆ ಯಲ್ಲಿ ಹಾಡು ಹೇಳಲು ಹವ್ಯಾಸಿ ಕಲಾವಿದರ ಸಂಘದ ನೀಲೇಶ್ ಮತ್ತು ತಂಡದವರು, ಚಾಲುಕ್ಯ ನಗರ ನಿವಾಸಿಗಳಾದ ಕು. ಸಂಪ್ರೀತ್, ಪ್ರಕಾಶ್, ಗಿರಿ ಕುಮಾರ್, ಪುಷ್ಪಾ ಪ್ರಕಾಶ್, ಗೋಪಾಳದ ಕು. ದೀಪ್ತಿ ಶಿವ ಕುಮಾರ್ ಜನಪದ, ಭಾವಗೀತೆ, ಭಕ್ತಿ ಗೀತೆಗಳನ್ನು ಹಾಡಲಿzರೆ. ಮೋಹನ್ ಕುಮಾರ್ ಅವರು ಹಾಸ್ಯ ಕಾರ್ಯಕ್ರಮ, ಡಾ. ಕಲೀಮ್ ಉ, ಗಾಯತ್ರಿ ಸುರೇಂದ್ರ ಕಥೆ ಹೇಳಲಿzರೆ. ಡಿ. ಗಣೇಶ್, ಎಂ. ನವೀನ್ ಕುಮಾರ್, ಕು. ಗೌರಿಶ್ರೀ ಕವನ ವಾಚಿಸಲಿzರೆ. ಡಾ. ಹಸೀನಾ ಹನಿಗವನ ವಾಚಿಸಲಿzರೆ.
ಬಡಾವಣೆಯ ಎ ನಾಗರಿಕ ಬಂಧುಗಳು ಕಾರ್ಯಕ್ರಮ ದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲು ಆತಿಥ್ಯ ವಹಿಸಿರುವ ಕುವೆಂಪು ಕ್ಷೇಮಾಭಿವದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಎಚ್. ಎಂ. ರಾಮಪ್ಪ, ಖಜಂಚಿ ಎ. ಎಸ್. ನಾರಾಯಣ ಮತ್ತು ಪದಾಧಿಕಾರಿಗಳು ಕೋರಿzರೆ.