ಪ್ರತಿಯೊಬ್ಬರೂ ತಮ್ಮ ತಮ್ಮ ಆರೋಗ್ಯ ಕುರಿತು ಕಾಳಜಿ ವಹಿಸುವುದು ಇಂದಿನ ಅಗತ್ಯ: ಅಡಿವೆಪ್ಪ

ಕುಕನೂರು: ತಾಲೂಕಿನ ಭಾನಾಪೂರ ಗ್ರಾಪಂ ವ್ಯಾಪ್ತಿಯ ತಳಬಾಳ ಗ್ರಾಮದ ನಾಲಾ ಸುಧಾರಣಾ ಕಾಮಗಾರಿ ಸ್ಥಳದಲ್ಲಿ ನರೇಗಾ ಕೂಲಿಕಾರರಿಗೆ ಆರೋಗ್ಯ ಶಿಬಿರ ಏರ್ಪಡಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಪಿಡಿಓ ಅಡಿವೆಪ್ಪ ಯಡಿಯಾಪೂರ ಅವರು, ಸಾಮಾನ್ಯವಾಗಿ ಎಲ್ಲರಿಗೂ ಖಾಯಿಲೆಗಳು ಬರುವುದು ಸಹಜ. ಆದರೆ ಸಣ್ಣ ಸಣ್ಣ ಖಾಯಿಲೆ ಎಂದು ಗ್ರಾಮದ ಸಣ್ಣ ಅಂಗಡಿಗಳಲ್ಲಿ ದೊರಕುವ ಔಷಧಿಗಳನ್ನು ತೆಗೆದುಕೊಂಡು ಪರಿಹಾರ ಕಂಡುಕೊಳ್ಳುತ್ತಾರೆ. ಇದು ಸರಿಯಾದ ಕ್ರಮವಲ್ಲ ಅದರ ಬದಲಾಗಿ ಆಸ್ಪತ್ರೆಗಳಿಗೆ ಭೇಟಿ ನೀಡಿ ತಪಾಸಣೆ ಮಾಡಿಸಿಕೊಳ್ಳುವುದು ಒಳ್ಳೆಯದು, ಅದನ್ನು ಸರ್ಕಾರದ ಕಾಮಗಾರಿ ಸ್ಥಳದಲ್ಲಿಯೇ ಬಂದು ಕೂಲಿಕಾರರ ಆರೋಗ್ಯ ತಪಸನೆ ಮಾಡಲು ಕೆ.ಎಚ್.ಪಿ.ಟಿ ಮತ್ತು ಆರೋಗ್ಯ ಇಲಾಖೆಯ ಸಹಾಯ ದೊಂದಿಗೆ ಗ್ರಾಪಂನೊಂದಿಗೆ ಸಮಾಲೋಚನೆ ಮಾಡಿಕೊಂಡು ಮಾಡಲಾಗುತ್ತಿದೆ ಇದರ ಸದುಪ ಯೋಗವನ್ನು ಎ ನರೇಗಾ ಕೂಲಿಕಾರರು ಪಡೆದುಕೊಳ್ಳಬೇಕು ಎಂದರು.
ನಂತರ ತಾಲೂಕ ಪಂಚಾಯತಿ ಐ.ಇ.ಸಿ ಸಂಯೋಜಕ ಲಕ್ಷ್ಮಣ ಕೆರಳ್ಳಿ ಮಾತನಾಡಿ, ನರೇಗಾ ಕೂಲಿಕಾರರಿಗೂ ಆರೋಗ್ಯಯುತ ಜೀವನ ಸಿಗಬೇಕು ಎಂದು ಗ್ರಾಮೀ ಣಾಭಿವೃದ್ಧಿ ಆಯುಕ್ತಾಲಯ ದಿಂದ ಆದೇಶ ನೀಡಿzರೆ. ಇದರಿಂದಾಗಿ ನರೇಗಾ ಕಾಮಗಾರಿ ಸ್ಥಳದಲ್ಲಿಯೇ ಆರೋಗ್ಯ ಆರೋಗ್ಯ ತಪಾಸಣೆ ಮಾಡುವುದ ರಿಂದ ಕೂಲಿಕಾರರಿಗೆ ದೂರದ ಆಸ್ಪತ್ರೆಗೆ ಹೋಗುವ ಬದಲು ಆಸ್ಪತ್ರೆಯೇ ಕೂಲಿಕಾರರ ಬಳಿಗೆ ಬಂದು ಆರೋಗ್ಯ ತಪಾಸಣೆ ಮಾಡುತ್ತಿದೆ ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಕೂಲಿಕಾರರು ಸಸಿ ನೆಟ್ಟು, ನಾಲಾ ಸುಧಾರಣೆ ಮಾಡಿ, ಬಿಸಿ ಯೂಟ ಸವಿದು ವನಮಹೋತ್ಸವ ಮಾದರಿಯಲ್ಲಿ ಎಲ್ಲ ಕೂಲಿಕಾರರು ಆರೋಗ್ಯ ತಪಾಸಣೆ ಮಾಡಿಸಿ ಕೊಂಡು ಯೋಜನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.