ಭರತನಾಟ್ಯ ಆಸ್ವಾದನೆಗೆ ಮುದ್ರೆಯ ಭಾಷೆ, ಸಂeಯ ಅರಿವು ಅಗತ್ಯ..

26sp2

ಸಾಗರ : ಭರತನಾಟ್ಯ ಆಸ್ವಾದನೆಗೆ ನೃತ್ಯದ ಮುದ್ರೆಯ ಭಾಷೆ, ಸಂe ಹಾಗೂ ಅದರ ವ್ಯಾಪ್ತಿಯ ಅರಿವು ಅಗತ್ಯ ಎಂದು ರಂಗ ನಟಿ ನೀನಾಸಂನ ವಿದ್ಯಾ ಹೆಗಡೆ ಹೇಳಿದರು.
ಪಟ್ಟಣದ ಶ್ರೀನಗರದ ನೃತ್ಯ ಭಾಸ್ಕರ ಸಭಾಂಗಣದಲ್ಲಿ ನಾಟ್ಯ ತರಂಗ ಸಂಸ್ಥೆಯಿಂದ ಏರ್ಪಡಿಸಿದ್ದ ಋತು ನೃತ್ಯ ವೈವಿಧ್ಯ ವಸಂತ ನತ್ಯೋಸ ಯೋಜನೆಯಡಿ ಏರ್ಪಡಿಸಿದ್ದ ಉಜ್ಜೀವನಂ ಭರತ ನಾಟ್ಯ ಪ್ರದರ್ಶನ ಸಂದರ್ಭದಲ್ಲಿ ಅವರು ಮಾತನಾಡಿ, ಪ್ರೇಕ್ಷಕರಿಗೆ ನಾಟ್ಯದ ಗತಿಯ ಸಾಮಾನ್ಯ ಅರಿವು ಇರದಿದ್ದರೆ ಅದನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ ಎಂದರು.
ಅಂತರಂಗದ ದುಗುಡವನ್ನು ದೂರ ಮಾಡುವ ಶಕ್ತಿ ಕಲೆಗಳಿಗಿದೆ. ಹಿಂದೆ ರಾಜರ ಕಾಲದಲ್ಲಿ ದೇವದಾಸಿಯರು ಇಂತಹ ನೃತ್ಯ ಮಾಡುತ್ತಿದ್ದರು. ದೇವದಾಸಿಯರು ಭವದ ಬದುಕನ್ನು ದಾಟಲಾಗದೆ ಲೌಕಿಕ ಸಂಕಟಕ್ಕೆ ಒಳಗಾಗಿ ಇಂತಹ ನೃತ್ಯ ಮಾಡುತ್ತಿದ್ದರು. ನೃತ್ಯದ ಮೂಲಕ ದೇವರ ಜೊತೆ ಮಾತನಾಡುವುದು ಅಲೌಕಿಕ ವಾದುದು. ಇದನ್ನು ತಮ್ಮ ಕರ್ತವ್ಯ ಎಂಬಂತೆ ಮಾಡುತ್ತಿದ್ದರು. ಆದರೆ ಬದಲಾದ ಕಾಲಘಟ್ಟದಲ್ಲಿ ಇದು ಹೊಸ ಸಾಧ್ಯತೆಗಳ ಹುಡುಕಾಟ ನಡೆಸುವ ಸವಾಲನ್ನು ಎದುರಿಸು ತ್ತಿದೆ. ಅದನ್ನು ನಾಟ್ಯ ಗುರು ವಿದುಷಿ ಸಮುದ್ಯತಾ ಭಟ್ ಸರಿಯಾಗಿ ಗುರುತಿಸಿ ಹೊಸ ಮಾರ್ಗದತ್ತ ಸಾಗುತ್ತಿzರೆ ಎಂದರು.
ಮೂವರು ತಾಯಂದಿರು ತಮ್ಮ ಮಕ್ಕಳನ್ನು ಭರತನಾಟ್ಯ ತರಗತಿಗೆ ಬಿಡಲು ಬರುವ ಹೊತ್ತಿ ನಲ್ಲಿ ಅವರಿಗೂ ಕಲಿಕೆಯ ಆಸಕ್ತಿ ಬಂದು ತರಬೇತಿ ಪಡೆದು ಈಗ ಪ್ರದರ್ಶನ ನೀಡುತ್ತಿರುವುದು ಅವರ ಜೀವನೋತ್ಸಾಹಕ್ಕೆ ಸಾಕ್ಷಿಯಾಗಿದೆ. ಮಕ್ಕಳಿzಗ ದೇಹವನ್ನು ಹೇಗಾದರೂ ದಂಡಿಸಬಹುದು. ಆದರೆ ಗಹಿಣಿಯಾದ ಮೇಲೆ ಕಲಿಕೆ ಕಷ್ಟವಾಗುತ್ತದೆ. ಆದರೂ ಮೂವರು ಮಹಿಳೆಯರು ಭರತನಾಟ್ಯ ಕಲಿತು ಸಮರ್ಥವಾಗಿ ಅದನ್ನು ನಿರೂಪಿಸಿzರೆ. ಹಣಕ್ಕಿಂತ ಮುಖ್ಯವಾದುದು ನಮ್ಮ ಮಾನಸಿಕ ನೆಮ್ಮದಿ. ಅದನ್ನು ಸಿದ್ಧಿಸಿಕೊಳ್ಳ ಬೇಕಾದುದು ಇಂದಿನ ಅಗತ್ಯ ಎಂದರು.
ವಿದುಷಿ ಸಮುದ್ಯತಾ ಭಟ್ ಮಾತನಾಡಿ, ತಮ್ಮ ಮಕ್ಕಳನ್ನು ನಾಟ್ಯ ತರಗತಿಗೆ ಬಿಡಲು ಬರುತ್ತಿದ್ದ ಮಹಿಳೆಯರು ತಾವೂ ಕಲಿಕೆಯ ಆಸಕ್ತಿ ತೋರಿದ್ದರಿಂದ ಅವರು ನಾಟ್ಯ ಕಲಾವಿದರಾಗಿ ರೂಪು ಗೊಂಡಿzರೆ. ಕಲೆ ಯಾರ ಸೊತ್ತೂ ಅಲ್ಲ, ಅದು ಸಾಧಕನ ಸೊತ್ತು. ಎರಡು ಜಡೆ ಸೇರಲ್ಲ ಎಂಬ ಮಾತನ್ನು ಈ ಮಹಿಳೆಯರು ಸುಳ್ಳು ಮಾಡಿzರೆ ಎಂದರು.
ನಂದಿನಿ ಬಸವರಾಜು ಪ್ರಾರ್ಥಿ ಸಿದರು. ಪೂಜ ಸ್ವಾಗತಿಸಿದರು. ಸೌಖ್ಯ ವಂದಿಸಿದರು.
ನಂತರ ಕಲಾವಿದೆಯರಾದ ಡಾ. ದೀಪಾ ಗಣಪತಿ, ಅರ್ಚನಾ ಕಷ್ಣನ್ ಮತ್ತು ಅರಿಯಾ ಮಧುಪ್ ಅವರು ಉಜ್ಜೀವನಂ ಭರತನಾಟ್ಯ ಪ್ರದರ್ಶಿಸಿದರು.