ಶಿವಮೊಗ್ಗದಲ್ಲಿ ಇಂದು ಸಂಜೆ ಬೃಹತ್ ಸ್ವದೇಶಿ ಮೇಳಕ್ಕೆ ಶ್ರೀಗಳಿಂದ ಚಾಲನೆ…

10

ಶಿವಮೊಗ್ಗ: ಡಿ.೬ರ ಇಂದಿನಿಂದ ವಿನೋಬನಗರ ಫ್ರೀಡಂ ಪಾರ್ಕ್‌ನಲ್ಲಿ ಪ್ರಾರಂಭವಾಗ ಲಿರುವ ಬೃಹತ್ ಸ್ವದೇಶಿ ಮೇಳಕ್ಕೆ ಭರ್ಜರಿ ಸಿದ್ದತೆಗಳು ನಡೆದಿದೆ.
ಕರ್ನಾಟಕ ಸ್ವದೇಶಿ ಜಾಗರಣ ಮಂಚ್ ಹಮ್ಮಿಕೊಂಡಿರುವ ಈ ಮೇಳ ಡಿ. ೬ರ ಇಂದಿನಿಂದ ಡಿ.೧೦ರವರೆಗೆ ಐದು ದಿನಗಳ ಕಾಲ ಅದ್ಧೂರಿಯಾಗಿ ನಡೆಯಲಿದೆ.


ಇಂದು ಸಂಜೆ ೬.೩೦ಕ್ಕೆ ಸಿರಿಗೆರೆ ಬೃಹನ್ಮಠದ ಪೂಜ್ಯಶ್ರೀ ಡಾ| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಈ ಮೇಳಕ್ಕೆ ಅಧಿಕೃತ ಚಾಲನೆ ಸಿಗಲಿದ್ದು, ಮೈಸೂರು ಮಹಾರಾಜ ಶ್ರೀ ಯಧುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಜಿಲ್ಲಾಧಿಕಾರಿ ಡಾ| ಸೆಲ್ವಮಣಿ ಉಪಸ್ಥಿತರಿರಲಿದ್ದು, ಪ್ರೊ| ಬಿ.ಎಂ. ಕುಮಾರಸ್ವಾಮಿ ದಿಕ್ಕೂಚಿ ಭಾಷಣ ಮಾಡುವರು.
ಈ ಬೃಹತ್ ಸ್ವದೇಶಿ ಮೇಳದ ಯಶಸ್ವಿಗಾಗಿ ಇಂದು ಬೆಳಗ್ಗೆ ಮೇಳದ ಆವರಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಪ್ರಾಂತ ಕಾರ್ಯವಾಹಕ ಪಟ್ಟಾಭಿರಾಮ್, ವಿಭಾಗ ಕಾರ್ಯವಾಹಕ ಗಿರೀಶ್ ಕಾರಂತ್, ಸಹ ಕಾರ್ಯವಾಹ ಮಧುಕರ್ ಮತ್ತೂರು, ಜಿಲ್ಲಾ ಕಾರ್ಯವಾಹ ಬಿ ಎ ರಂಗನಾಥ್, ಮೇಳದ ಉಸ್ತುವಾರಿಗಳಾದ ಜಗದೀಶ್, ಪ್ರಮುಖರಾದ ಡಾ. ಧನಂಜಯ್ ಸರ್ಜಿ, ಬಿ ಎಂ ಕುಮಾರಸ್ವಾಮಿ, ಹರ್ಷ ಕಾಮತ್, ಸಚ್ಚಿದಾನಂದ್, ಡಾ.ರವಿಕಿರಣ್, ನವೀನ್ ಸುಬ್ರಮಣ್ಯ, ಎಸ್ ದತ್ತಾತ್ರಿ, ಎಸ್.ಎಸ್. ಜ್ಯೋತಿ ಪ್ರಕಾಶ್, ಹಾಗೂ ಪರಿವಾರದ ಕಾರ್ಯಕರ್ತರ ಸಮ್ಮುಖದಲ್ಲಿ ಗಣ ಹೋಮ ಮತ್ತು ಸಂಕಲ್ಪ ಪ್ರಾರ್ಥನೆಗಳು ಜರುಗಿದವು.
ಮೇಳದಲ್ಲಿ ಈಗಾಗಲೇ ಸುಮಾರು ೨೨೪ ಸ್ಟಾಲ್‌ಗಳಿದ್ದು, ವಿವಿಧ ಬಗೆಯ ಕರಕುಶಲ ವಸ್ತುಗಳು, ತಿನಿಸು ಅಂಗಡಿಗಳು, ವಾಣಿಜ್ಯಕ್ಕೆ ಸಂಬಂಧಿಸಿದಂತೆ ಷೋ ರೂಂಗಳು, ಮಕ್ಕಳ ಆಟಿಕೆಗಳು ಹೀಗೆ ಹಲವು ಆಟೋಟ ವಸ್ತು ಗಳು ಪ್ರದರ್ಶನದಲ್ಲಿ ಮೇಳೈಸ ಲಿವೆ. ದೇಶಿಯ ಆಹಾರ, ಕ್ರೀಡೆ, ಜನಪದ ಕಲಾ ವೈಭವ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಇಲ್ಲಿ ನಡೆಯಲಿವೆ. ಆಹಾರ ಪ್ರಿಯರಿಗಂತೂ ಹಬ್ಬವೇ ಸರಿ, ಮೇಲ್ಕೋಟೆ ಪುಳಿಯೋಗರೆ, ದಾವಣಗೆರೆ ಬೆಣ್ಣೆದೋಸೆ, ಬಂಗಾರ ಪೇಟೆ ಚಾಟ್ಸ್, ಹುಬ್ಬಳ್ಳಿ ಗಿರಿಮಿಟ್ ಸಿರಿಧಾನ್ಯಗಳ ರೊಟ್ಟಿ, ವಿವಿಧ ಬಗೆಯ ಚಟ್ನಿ, ಹಾಗೂ ಚಟ್ನಿ ಪುಡಿಗಳು, ಭರ್ಜರಿಯಾಗಿ ಕಾಣಿಸಿಕೊಳ್ಳಲಿದೆ.
ಆರ್ಯುವೇದ ಶಿಬಿರ ಸೇರಿ ದಂತೆ ಸಂವಾದ, ಯಕ್ಷಗಾನ, ಯೋಗಾಸನ, ಜದೂ ಪ್ರದರ್ಶನ, ಡಾ| ಪ್ರವೀಣ್ ಗೋಡ್ಖಿಂಡಿ ಬಾನ್ಸುರಿ, ರೈತರೊಂದಿಗೆ ಸಂವಾದ ಮುಂತಾದ ಕಾರ್ಯಕ್ರಮ ಗಳು ಪ್ರತಿದಿನವೂ ನಡೆಯಲಿದೆ.
ಶಿವಮೊಗ್ಗೆಯ ಜನತೆ ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಈ ಬೃಹತ್ ಸ್ವದೇಶಿ ಮೇಳ ಯಶಸ್ವಿಗೊಳಿಸುವಂತೆ ಕಾರ್ಯಕ್ರಮ ಸಂಯೋಜಕ ಡಾ| ಧನಂಜಯ ಸರ್ಜಿ, ಸಂಚಾಲಕ ಡಿ.ಎಸ್. ಅರುಣ್, ಸಂಘಟಕ ಹರ್ಷ ಬಿ. ಕಾಮತ್ ಅವರು ಕೋರಿದ್ದಾರೆ.