ಅರಣ್ಯ ಸಿಬ್ಬಂದಿಯ ಕಾರ್ಯ ಶ್ಲಾಘನಿಯ…

ಶಿಕಾರಿಪುರ: ಅರಣ್ಯದಲ್ಲಿನ ವನ್ಯಜೀವಿ,ಅರಣ್ಯ ಸಂಪತ್ತನ್ನು ರಕ್ಷಿಸುವ ಬಹು ಮಹತ್ವದ ಕಾರ್ಯ ನಿರ್ವಹಿಸುವ ಅರಣ್ಯ ಸಿಬ್ಬಂದಿಯ ಕಾಯಕ ಶ್ಲಾಘನೀಯವಾಗಿದೆ ಎಂದು ಇಲ್ಲಿನ ತಹಸೀಲ್ದಾರ್ ಮಶ ಬಿ.ಪೂಜರ್ ತಿಳಿಸಿದರು.
ಪಟ್ಟಣದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಆವರಣದಲ್ಲಿ ನಡೆದ ೨೦೨೩ನೇ ಸಾಲಿನ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆಯಲ್ಲಿ ಪಾಲ್ಗೊಂಡು ಹುತಾತ್ಮರ ಸ್ಮಾರಕಕ್ಕೆ ಪುಷ್ಪಗುಚ್ಚದ ಗೌರವ ಸಲ್ಲಿಸಿ ಅವರು ಮಾತನಾಡಿದರು.
ದೇಶ ರಕ್ಷಣೆಗಾಗಿ ಶ್ರಮಿಸುವ ಪ್ರತಿಯೊಬ್ಬರ ಜೀವ ಅಮೂಲ್ಯ ವಾಗಿದ್ದು, ಈ ದಿಸೆಯಲ್ಲಿ ಬಹು ಅಮೂಲ್ಯವಾದ ಅರಣ್ಯ ಸಂಪತ್ತು, ವನ್ಯ ಜೀವಿಗಳನ್ನು ರಕ್ಷಿಸುವ ಬಹು ಮಹತ್ವದ ಕಾರ್ಯವನ್ನು ನಿರ್ವಹಿಸುವ ಅರಣ್ಯ ಇಲಾಖೆ ಸಿಬ್ಬಂದಿಯ ಕಾಯಕ ಶ್ಲಾಘನೀಯ ಎಂದು ತಿಳಿಸಿದ ಅವರು ಅರಣ್ಯ ರಕ್ಷಕರ ಸಾವಿಗೆ ಪ್ರಾಣಿಗಳು ಮಾತ್ರ ಕಾರಣವಲ್ಲದೆ ಮನುಷ್ಯನು ಕಾರಣ ವಾಗಿರುವುದು ವಿಷಾಧನೀಯ ಸಂಗತಿ ಎಂದು ತಿಳಿಸಿದರು.
ರಾತ್ರಿ ಹಗಲು ಎಂಬ ಪರಿವಿಲ್ಲದೆ ವನ್ಯಜೀವಿ, ಅರಣ್ಯ ಸಂಪತ್ತು ರಕ್ಷಣೆಗಾಗಿ ಶ್ರಮಿಸುತ್ತಿ ರುವ ಅರಣ್ಯ ಸಿಬ್ಬಂದಿ ಕಾಯಕದ ಮಹತ್ವದ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕಾಗಿದೆ ಹಲವು ಸಂದರ್ಭದಲ್ಲಿ ಜೀವದ ಹಂಗು ತೊರೆದು ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದು ಅರಣ್ಯ ರಕ್ಷಣೆಗೆ ಪಣ ತೊಟ್ಟಿರುವ ಸಿಬ್ಬಂದಿ ಜತೆಗೆ ಸಾರ್ವಜನಿಕರು ಕೈಜೋಡಿಸಬೇಕಾಗಿದೆ. ಮನುಷ್ಯನ ನೆಮ್ಮದಿಯ ಬದುಕಿಗೆ ಅನಿವಾರ್ಯ ವಾಗಿರುವ ಅರಣ್ಯದ ರಕ್ಷಣೆ ಮೂಲಕ ಸಮಾಜದ ಒಳಿತಿಗೆ ಶ್ರಮಿಸುತ್ತಿರುವ ಅರಣ್ಯ ಇಲಾಖೆ ಸಿಬ್ಬಂದಿಯ ಕೊಡುಗೆ ಅಪಾರವಾ ಗಿದ್ದು ಮನುಷ್ಯನ ದುರಾಸೆ, ವನ್ಯ ಮೃಗಗಳ ದಾಳಿಗೆ ಈಗಾಗಲೇ ರಾಜ್ಯದಲ್ಲಿನ ಅರಣ್ಯ ರಕ್ಷಣೆಗಾಗಿ ಶ್ರಮಿಸಿ ನೂರಾರು ಅಧಿಕಾರಿ, ಸಿಬ್ಬಂದಿ ಹುತಾತ್ಮರಾಗಿದ್ದು ಎಲ್ಲರನ್ನು ಸ್ಮರಿಸಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಜನಸಂಖ್ಯೆ ಹೆಚ್ಚಳ,ಮನುಷ್ಯನ ದುರಾಸೆಗೆ ಅರಣ್ಯ ನಾಶ ವಿಪರೀತ ವಾಗಿದ್ದು ನಿಯಂತ್ರಣ ತುರ್ತು ಅಗತ್ಯವಾಗಿದೆ ಅರಣ್ಯ ನಾಶದಿಂದ ಹವಾಮಾನ ಬದಲಾವಣೆಯಾಗಿ ಬದುಕು ನಾಶವಾಗುತ್ತಿದೆ ಅರಣ್ಯ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ ಯಾಗಬೇಕು ಅರಣ್ಯ ರಕ್ಷಕರಿಗೆ ಹೆಚ್ಚಿನ ಗೌರವ ದೊರೆಯಬೇಕು ಎಂದ ಅವರು ಅವ್ಯಾಹತ ಅರಣ್ಯ ನಾಶಗೊಳಿಸಿ ಕೃತಕವಾಗಿ ಗಿಡ,ಸಸಿ ನೆಡುವುದರಿಂದ ಅರಣ್ಯ ಸಂರಕ್ಷಿಸಿ ದಂತಾಗಲಿದೆ ಎಂಬ ತಪ್ಪು ಅಭಿಪ್ರಾಯವಿದೆ ಅಳಿದುಳಿದ ಅರಣ್ಯ ರಕ್ಷಿಸಿ ಉಳಿಸಿ ಬೆಳೆಸಿಕೊಂಡು ಹೋಗಲು ಅರಣ್ಯ ಇಲಾಖೆ ಜತೆ ಸಹಕರಿಸುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ವಲಯ ಅರಣ್ಯಾಧಿಕಾರಿ ರೇವಣಸಿದ್ದಯ್ಯ ಬಿ.ಹಿರೇಮಠ್ ಹಾಗೂ ಶಿಕಾರಿಪುರ ಮತ್ತು ಅಂಬ್ಲಿಗೊಳ್ಳ ವಲಯ ಸಿಬ್ಬಂದಿ ಹಾಜರಿದ್ದರು.