ಗಾಯದ ಮೇಲೆ ಮತ್ತೊಂದು ಬರೆ ಎಳೆದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ

nandani-milk-1

ಬೆಂಗಳೂರು : ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಗ್ಯಾರೆಂಟಿ ಹೊರೆ ತೂಗಿಸುವ ಸಲುವಾಗಿ ಈಗಾಗಲೇ ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಿದ್ದು, ಇದರ ಬೆನ್ನ ದಿನನಿತ್ಯ ಬಳಕೆಯ ನಂದಿನಿ ಹಾಲಿನ ದರ ಹೆಚ್ಚಳ ಮಾಡುವ ಮೂಲಕ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ನಾಳೆಯಿಂದ ತಟ್ಟಲಿದೆ. ನಂದಿನಿ ಹಾಲಿನ ಅರ್ಧ ಮತ್ತು ಒಂದು ಲೀಟರ್ ಹಾಲಿನ ಪ್ಯಾಕೆಟ್‌ನಲ್ಲಿ ೫೦ ಮಿಲಿ ಹೆಚ್ಚುವರಿ ಹಾಲನ್ನು ಸೇರಿಸಿದ್ದು, ಪ್ರತಿ ಲೀಟರ್‌ಗೆ ೨ರೂ.ನಂತೆ ನಾಳೆ ಯಿಂದ ಹೆಚ್ಚಳ ಮಾಡಿರುವುದಾಗಿ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ (ಕೆಎಂಎಫ್) ಅಧ್ಯಕ್ಷ ಭೀಮಾ ನಾಯಕ್ ತಿಳಿಸಿzರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಅರ್ಧ ಲೀಟರ್ ಹಾಲಿನ ಪ್ಯಾಕೆಟ್ ಜತೆಗೆ ೫೦ ಮಿಲಿ ಹಾಲನ್ನು ಹೆಚ್ಚುವರಿಯಾಗಿ ಸೇರಿಸಿದ್ದು, ಹೆಚ್ಚುವರಿ ನೀಡಲಾಗುವ ಹಾಲಿಗೆ ತಗಲುವ ವೆಚ್ಚವನ್ನು ಮಾತ್ರ ಹೆಚ್ಚಳ ಮಾಡಲಾಗಿದೆಯೇ ಹೊರತು ಹಾಲಿನ ದರದಲ್ಲಿ ಏರಿಕೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ಪ್ರತಿ ಅರ್ಧ ಲೀಟರ್ ಹಾಲಿನ ಪ್ಯಾಕೆಟ್ ದರವನ್ನು ೨ರೂ. ಹೆಚ್ಚಳ ಮಾಡಲಾಗಿದೆ. ಇದರಿಂದ ಗ್ರಾಹಕರಿಗೂ ಹೆಚ್ಚುವರಿ ಹಾಲು ದೊರೆತಂತಾಗಿದೆ ಎಂದು ಸಮರ್ಥಿಸಿ ಕೊಂಡರು. ಪ್ರತಿ ಅರ್ಧ ಲೀಟರ್ ಟೋನ್ಡ್ ಹಾಲಿನ ದರ ೨೨ ರಿಂದ ೨೪ ರೂ., ಒಂದು ಲೀಟರ್ ಹಾಲಿನ ದರ ೪೨ ರಿಂದ ೪೪ ರೂ., ಹೋಮೋಜಿನೈಸ್ಡ್ ಟೋನ್ಡ್ ಹಾಲಿನ ದರ ಅರ್ಧ ಲೀಟರ್‌ಗೆ ೨೨ ರಿಂದ ೪೪ ರೂ., ಒಂದು ಲೀಟರ್‌ಗೆ ೪೩ರೂ. ನಿಂದ ೪೫ರೂ., ಹೋಮೋಜಿನೈಸ್ಡ್ ಹಸುವಿನ ಹಾಲು ಅರ್ಧ ಲೀಟರ್‌ಗೆ ೨೪ರೂ. ನಿಂದ ೨೬ರೂ., ಒಂದು ಲೀಟರ್‌ಗೆ ೪೬ರೂ. ನಿಂದ ೪೮ರೂ., ಸ್ಪೆಷಲ್ ಹಾಲು ಅರ್ಧ ಲೀಟರ್‌ಗೆ ೨೫ರೂ. ನಿಂದ ೨೭ರೂ., ಒಂದು ಲೀಟರ್‌ಗೆ ೪೮ರೂ. ನಿಂದ ೫೦ರೂ.ಗೆ ಹೆಚ್ಚಳ ಮಾಡಲಾಗಿದೆ ಎಂದರು.


ಸಮೃದ್ಧಿ ಹಾಲು ಅರ್ಧ ಲೀಟರ್‌ಗೆ ೨೬ರೂ. ನಿಂದ ೨೮ರೂ., ಒಂದು ಲೀಟರ್‌ಗೆ ೫೧ರೂ.ನಿಂದ ೫೩ರೂ., ಹೋಮೋಜಿನೈಸ್ಡ್ ಶುಭಂ ಹಾಲು ಅರ್ಧ ಲೀಟರ್‌ಗೆ ೨೫ರೂ. ನಿಂದ ೨೭ರೂ., ಒಂದು ಲೀಟರ್‌ಗೆ ೪೯ರೂ.ನಿಂದ ೫೧ರೂ., ಸಂತೃಪ್ತಿ ಹಾಲು ಅರ್ಧ ಲೀಟರ್‌ಗೆ ೨೮ರೂ. ನಿಂದ ೩೦ರೂ., ಒಂದು ಲೀಟರ್‌ಗೆ ೫೫ರೂ. ನಿಂದ ೫೭ರೂ., ಶುಭಂ ಟೋನ್ಡ್ ಹಾಲು ಅರ್ಧ ಲೀಟರ್‌ಗೆ ೨೬ರೂ.ನಿಂದ ೨೮ರೂ., ಒಂದು ಲೀಟರ್‌ಗೆ ೪೯ರೂ. ನಿಂದ ೫೧ರೂ., ಡಬಲ್ ಟೋನ್ಡ್ ಹಾಲು ಅರ್ಧ ಲೀಟರ್‌ಗೆ ೨೧ರೂ. ನಿಂದ ೨೩ರೂ., ಒಂದು ಲೀಟರ್‌ಗೆ ೪೧ರೂ. ನಿಂದ ೪೩ರೂ.ಗೆ ಹೆಚ್ಚಳ ಮಾಡಲಾಗಿದೆ ಎಂದು ಹೇಳಿದರು.
ಹೆಚ್ಚಳ ಮಾಡಿರುವ ದರವು ನಾಳೆಯಿಂದ ಜರಿಗೆ ಬರಲಿದ್ದು, ಮುಂದಿನ ಆದೇಶದವರೆಗೆ ಜರಿ ಯಲ್ಲಿರಲಿದೆ. ಒಕ್ಕೂಟಗಳಲ್ಲಿ ಹಳೆಯ ದರ ಮುದ್ರಿತವಾಗಿರುವ ಹಾಲಿನ ಪ್ಯಾಕೆಟ್‌ಗಳ ದಾಸ್ತಾನು ಮುಗಿಯುವ ವರೆಗೂ ಹಳೆಯ ದರದಲ್ಲಿ ಮುದ್ರಿತ ಹಾಲಿನ ಪ್ಯಾಕೆಟ್‌ಗಳು ಸರಬರಾಜಗ ಲಿದ್ದು, ಗ್ರಾಹಕರು ಸಹಕರಿಸುವಂತೆ ಅವರು ಕೋರಿzರೆ.
ಪರಿಷ್ಕೃತ ದರವು ಒಂದು ಲೀಟರ್‌ಗೆ ೪೪ರೂ. ೧೦ ಪೈಸೆಯಾ ಗಲಿದೆ. ಗ್ರಾಹಕರ ಹಿತದೃಷ್ಟಿಯಿಂದ ೪೪ರೂ.ಗೆ ಮಾರಾಟ ಮಾಡಲಾಗು ವುದು. ಆದರೆ, ಮೊಸರು ಹಾಗೂ ಇತರೆ ನಂದಿನಿ ಉತ್ಪನ್ನಗಳ ದರದಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಹೊರ ರಾಜ್ಯಗಳ ಹಾಲಿನ ದರಕ್ಕೆ ಹೋಲಿಸಿದರೆ ನಮ್ಮ ರಾಜ್ಯದ ಹಾಲಿನ ದರವು ಕಡಿಮೆಯಿದೆ ಎಂದು ಅವರು ತಿಳಿಸಿದರು.
ಸುಗ್ಗಿ ಕಾಲವಾಗಿರುವುದರಿಂದ ಎಲ್ಲ ಜಿ ಹಾಲು ಒಕ್ಕೂಟಗಳ ವ್ಯಾಪ್ತಿಯಲ್ಲಿ ಹಾಲಿನ ಶೇಖರಣೆ ಹೆಚ್ಚಾಗುತ್ತಿದೆ. ೯೮,೮೭,೦೦೦ದಷ್ಟು ಹಾಲನ್ನು ಶೇಖರಣೆ ಮಾಡುತ್ತಿzವೆ. ಸದ್ಯದ ಹಾಲಿನ ಶೇಖರಣೆ ಪ್ರಮಾಣ ಒಂದು ಕೋಟಿ ಲೀಟರ್ ತಲುಪಲಿದೆ. ಹಾಲು ಉತ್ಪಾದನೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ೨೮ ಲಕ್ಷ ರೈತರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.
ಸುಮಾರು ೩೦ ಲಕ್ಷ ಲೀಟರ್ ಹಾಲನ್ನು ಪೌಡರ್ ಉತ್ಪಾದಿಸಲು ಕಳುಹಿಸುತ್ತಿzವೆ. ಇದರಿಂದ ಹಾಲು ಒಕ್ಕೂಟಗಳು ಹಾಲು ಉತ್ಪಾದಕರಿಗೆ ಸಕಾಲಕ್ಕೆ ಹಣ ಪಾವತಿ ಮಾಡಲು ತೊಂದರೆಯಾಗುತ್ತಿದೆ. ಇದನ್ನು ತಪ್ಪಿಸಲು ಪ್ರತಿ ಲೀಟರ್ ಹಾಲಿನ ದರವನ್ನು ೪೨ರೂ.ನಿಂದ ೪೪ರೂ.ಗೆ ಹೆಚ್ಚಳ ಮಾಡಿzವೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಎಂ.ಕೆ. ಜಗದೀಶ್, ಮಂಡಳಿ ನಿರ್ದೇಶಕರಾದ ವೀರಭದ್ರಬಾಬು ಬರಮಣ್ಣನವರ್, ಮಾರುಕಟ್ಟೆ ನಿರ್ದೇಶಕ ರಘುನಂದನ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ಹಾಲಿನ ದರ ಏರಿಕೆ ಮಾಡುವುದು ಸರ್ಕಾರವಲ್ಲ : ಸಿಎಂ ಸಿದ್ದರಾಮಯ್ಯ
ಕೆಎಂಎಫ್‌ನಿಂದ ಹಾಲಿನ ದರ ಏರಿಕೆ ಮಾಡಿರುವ ವಿಚಾರ ನನ್ನ ಗಮನಕ್ಕೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಕೆಎಂಎಫ್‌ನಿಂದ ಹಾಲಿನ ದರ ಏರಿಕೆ ವಿಚಾರವಾಗಿ ಗೃಹ ಕಚೇರಿ ಕೃಷ್ಣದಲ್ಲಿ ಪ್ರತಿಕ್ರಿಯೆ ನೀಡಿದ ಸಿಎಂ, ಹಾಲಿನ ದರ ಏರಿಕೆ ಬಗ್ಗೆ ನನಗೆ ಗೊತ್ತಿಲ್ಲ. ಕೆಎಂಎಫ್ ಅವರ ಜೊತೆ ಮಾತಾಡ್ತೀನಿ. ಹಾಲಿನ ದರ ಹೆಚ್ಚಳ ಮಾಡೋದು ಸರ್ಕಾರ ಅಲ್ಲ ಎಂದು ಸ್ಪಷ್ಟಪಡಿಸಿದರು. ಕೆಎಂಎಫ್‌ನವರು ಬೇರೆ ರಾಜ್ಯದ ದರ ನೋಡಿಕೊಂಡು ದರ ಹೆಚ್ಚಳ ಮಾಡುತ್ತಾರೆ. ಬೇರೆ ರಾಜ್ಯದ ದರಕ್ಕೆ ಹೋಲಿಗೆ ಮಾಡಿದರೆ ನಮ್ಮಲ್ಲಿ ಕಡಿಮೆ ಇದೆ. ಆದರೂ ದರ ಏರಿಕೆ ಮಾಡಿರೋ ಬಗ್ಗೆ ನನಗೆ ಗೊತ್ತಿಲ್ಲ. ನಾನು ಕೆಎಂಎಫ್ ಅಧ್ಯಕ್ಷರ ಜೊತೆ ಮಾತಾಡ್ತೀನಿ ಎಂದು ಮಾಹಿತಿ ನೀಡಿದರು.