ಲೋಕದ ನೆಮ್ಮದಿಯನ್ನೇ ಗುರಿಯಾಗಿಸಿ ಶರಣರು ವಚನಗಳನ್ನು ರಚಿಸಿದ್ದಾರೆ…

4-(2)

ಶಿವಮೊಗ್ಗ: ಲೋಕದ ನೆಮ್ಮದಿ ಯನ್ನೇ ಗುರಿಯಾಗಿರಿಸಿ ಶರಣರು ವಚನಗಳನ್ನು ರಚಿಸಿzರೆ ಎಂದು ಬಸವಕೇಂದ್ರದ ಪೂಜ್ಯಶ್ರೀ ಡಾ. ಬಸವ ಮರುಳಸಿದ್ದ ಸ್ವಾಮೀಜಿ ಹೇಳಿzರೆ.
ಡಿ. ಮಲ್ಕಪ್ಪ ಅಂಡ್ ಸನ್ಸ್ ಸಂಸ್ಥೆಯಲ್ಲಿ ಬಾಳೆಕಾಯಿ ಮೋಹನ್ ಆಯೋಜಿಸಿದ್ದ ಚಿಂತನ ಕಾರ್ತಿಕದಲ್ಲಿ ಅವರು ಆಶೀರ್ವಚನ ನೀಡಿದರು.
ಹೊಗಳಿಕೆಗೆ ಉಬ್ಬದೆ- ತೆಗಳಿಕೆಗೆ ತಗ್ಗದ ಮನಸ್ಥಿತಿ ರೂಪುಗೊಳ್ಳಬೇಕು. ಈ ಹಿನ್ನಲೆಯಲ್ಲಿ ಬಸವಣ್ಣನವರು ಹೊಗಳಿ ಹೊಗಳಿ ಹೊನ್ನಶೂಲಕ್ಕೇರಿಸ ಬೇಡಿ ಎಂದಿದ್ದನ್ನು ಸ್ಮರಿಸಿದರು.
ಜೀವನದ ಮಲ್ಯಗಳನ್ನು ಗ್ರಹಿಸುವ ಶಿಕ್ಷಣ ಪದ್ದತಿ ಇಂದಿನ ಅಗತ್ಯವಾಗಿದೆ. ರಾಜಕೀಯದಿಂದ ಮುಕ್ತವಾದ ಶಿಕ್ಷಣ ವ್ಯವಸ್ಥೆ ರೂಪು ಗೊಳ್ಳಬೇಕಿದೆ. ಇಲ್ಲವಾದಲ್ಲಿ ಸ್ವತಂತ್ರ ವಾಗಿ ಆಲೋಚನೆ ಮಾಡುವ ವ್ಯಕ್ತಿತ್ವಗಳ ಕೊರತೆಯ ಸಮಾಜ ನಿರ್ಮಾಣವಾಗುತ್ತದೆ ಎಂದರು.
ಅಧ್ಯಕ್ಷತೆವಹಿಸಿದ್ದ ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಹೊಗಳಿಕೆ- ತೆಗಳಿಕೆ ವಿಷಯ ಕುರಿತು ಮಾತನಾಡಿ, ಶರಣರ ವಚನಗಳು ಇಂದಿಗೂ ಪ್ರಸ್ತುತ ಎಂದರು.
ಇವತ್ತಿನ ರಾಜಕೀಯ ವ್ಯವಸ್ಥೆ ಯಲ್ಲಿ ತಪ್ಪುಗಳನ್ನು ಬೆಂಬಲಿಸುವುದೇ ಒಂದು ಮಲ್ಯ ಎಂದು ಬಿಂಬಿತ ಆಗುತ್ತಿರುವುದು ವಿಷಾದನೀಯ. ನೂರು ಒಳ್ಳೆಯ ಕೆಲಸ ಮಾಡಿದರೂ ಅದು ಬಹಿರಂಗ ಆಗುವುದಿಲ್ಲ. ಆದರೆ, ಒಂದು ಸಣ್ಣ ತಪ್ಪು ಮಾಡಿದರೆ ಅದು ಸಾರ್ವಜನಿಕವಾಗಿ ದೊಡ್ಡ ಚರ್ಚೆಯ ವಿಷಯ ಆಗುತ್ತದೆ ಎಂದರು.
ಅತಿಥಿಯಾಗಿದ್ದ ಉದ್ಯಮಿ ಹರ್ಷ ಕಾಮತ್ ಮಾತನಾಡಿದರು. ಕೆ. ಭಾಸ್ಕರ್ ಉಪನ್ಯಾಸ ನೀಡಿದರು.
ವೀರಶೈವ ಲಿಂಗಾಯತ ಸಮಾಜ ಸೇವಾ ಸಂಘದ ಉಪಾಧ್ಯಕ್ಷೆ ಶಾಂತಾ ಆನಂದ್ ವೇದಿಕೆಯಲ್ಲಿದ್ದರು.