ಜೀವ ಉಳಿಸುವ ಮಹತ್ಕಾರ್‍ಯ ಮಾಡುವ ವೈದ್ಯರ ಸೇವೆ ಅಜರಾಮರ
ಶಿವಮೊಗ್ಗ: ವೃತ್ತಿಯ ಜೊತೆಯಲ್ಲಿ ಸಮಾಜಮುಖಿ ಸೇವೆಯುತುಂಬಾ ಮುಖ್ಯ. ವೈದ್ಯರ ಸೇವೆಯು ಅಜರಾಮರ. ಜೀವ ಉಳಿಸುವ ಮಹಾತ್ಕಾರ್ಯ ನಡೆಸುವವರು ವೈದ್ಯರು ಎಂದು ಫ್ರೆಂಡ್ಸ್ ಸೆಂಟರ್ ಅಧ್ಯಕ್ಷ ವಿ. ನಾಗರಾಜ್ ಹೇಳಿದರು.
ಶಿವಮೊಗ್ಗ ಜಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಫ್ರೆಂಡ್ಸ್ ಸೆಂಟರ್ ವತಿಯಿಂದ ಆಯೋಜಿಸಿದ್ದ ವೈದ್ಯರ ದಿನಾಚರಣೆಕಾರ್ಯಕ್ರಮದಲ್ಲಿ ಮಾತನಾಡಿ, ಕಷ್ಟದಲ್ಲಿಇರುವವರಿಗೆ ನೆರವಾಗುವ ಕೆಲಸವನ್ನು ಪ್ರತಿಯೊಬ್ಬರು ನಡೆಸಬೇಕುಎಂದು ತಿಳಿಸಿದರು.
ಫ್ರೆಂಡ್ಸ್ ಸೆಂಟರ್ ವತಿಯಿಂದ ಸಮಾಜದಲ್ಲಿ ವಿಶೇಷ ಸಾಧನೆ ಮಾಡಿದ ಪ್ರತಿಭಾನ್ವಿತರನ್ನು ಗುರುತಿಸಿ ಗೌರವಿಸುವ ಕೆಲಸ ಮಾಡಲಾಗುತ್ತಿದೆ.ಶರಣ್ಯ ಸಂಸ್ಥೆಯಲ್ಲಿ ನಿಸ್ವಾರ್ಥ ಸೇವೆ ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ ಉಚಿತ ಸೇವೆ ನೀಡುತ್ತಿರುವ ಸರಳ ವ್ಯಕ್ತಿ ಡಾ. ತಾನಾಜಿ ಅವರನ್ನು ಸನ್ಮಾನಿಸುತ್ತಿರುವುದು ಹೆಮ್ಮೆಯ ಸಂಗತಿಎಂದರು.
ಇದೇ ಸಂದರ್ಭದಲ್ಲಿ ಫ್ರೆಂಡ್ಸ್ ಸೆಂಟರ್ ಮಾಜಿ ಅಧ್ಯಕ್ಷ ಎಸ್. ದತ್ತಾತ್ರಿ ಮಾತನಾಡಿ, ವೈದ್ಯರ ಸೇವೆ ಮತ್ತು ಕೊಡುಗೆಯನ್ನು ವಿಶೇಷವಾಗಿ ಗುರುತಿಸುವ ಕೆಲಸ ಆಗಬೇಕು. ವೈದ್ಯರ ಮೇಲೆ ಹ ನಡೆಸುವು ದುಖಂಡನೀಯ. ತಾನಾಜಿ ಅವರಂತಹ ವೈದ್ಯರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ತುಂಬಾ ಅರ್ಥಪೂರ್ಣವಾಗಿದೆ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿದ ಡಾ. ತಾನಾಜಿ ಮಾತನಾಡಿ, ಸೇವೆ ನಮ್ಮನ್ನು ಸದಾಕಾಪಾಡುತ್ತದೆ. ಆನರ ಪ್ರೀತಿ, ವಿಶ್ವಾಸ ನಮಗೆ ಶ್ರೀರಕ್ಷೆ. ವೈದ್ಯಕೀಯ ಸೇವೆ ತೃಪ್ತಿ ತಂದಿದೆ. ಮುಂದಿನ ದಿನಗಳಲ್ಲಿಯೂ ಕೈಲಾದ ಸೇವೆಯನ್ನು ಪ್ರಾಮಾಣಿಕವಾಗಿ ನಡೆಸುತ್ತೇನೆ ಎಂದು ತಿಳಿಸಿದರು.
ಕಾರ್ಯದರ್ಶಿ ಆರ್.ಎಸ್. ಗೋಪಾಲಕೃಷ್ಣ, ಮಹಿಳಾ ವಿಭಾಗದ ಅಧ್ಯಕ್ಷೆ ಲತಾರಮೇಶ್, ಮಾಜಿ ಅಧ್ಯಕ್ಷ ಜಿ.ವಿಜಯ್ ಕುಮಾರ್, ಎಂ.ಎನ್. ವೆಂಕಟೇಶ್, ನಿಯೋಜಿತಅಧ್ಯಕ್ಷ ಲೋಕೇಶ್, ಉಪಾಧ್ಯಕ್ಷ ವೆಂಕಟೇಶ್, ಧನರಾಜ್, ಮಲ್ಲಿಕಾರ್ಜುನಕಾನೂರು, ಮಾಜಿಅಧ್ಯಕ್ಷರು, ಸದಸ್ಯರು, ನಿರ್ದೇಶಕರು ಉಪಸ್ಥಿತರಿದ್ದರು.