ಶಿವಮೊಗ್ಗ : ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಆರ್‌ಎಂಎಲ್ ನಗರ ಖುಬಾ ಮಸೀದಿ ಹತ್ತಿರ ೧ನೇ ಹಂತ, ೩ನೇ ಕ್ರಾಸ್‌ನ ಎಸ್.ಎಸ್.ಮಂಜಿಲ್ ವಾಸಿ ಸೈಯದ್ ಇಸಾಕ್ ಎಂಬುವವರ ಮಗಳು ೧೪ ವರ್ಷದ ಸಾರಿಯಾ ಫಾತೀಮಾ ಎಂಬ ಯುವತಿ ಜೂ.೧೫ರಂದು ಕಾಣೆಯಾಗಿದ್ದು, ಈವರೆಗೂ ಪತ್ತೆಯಾಗಿರುವುದಿಲ್ಲ.
ಈಕೆಯ ಚಹರೆ ೪.೬ ಅಡಿ ಎತ್ತರ, ಬಿಳಿ ಮೈಬಣ್ಣ, ಸಾಧಾರಣಾ ಮೈಕಟ್ಟು, ದುಂಡು ಮುಖ ಹೊಂದಿದ್ದು, ಕನ್ನಡ ಮತ್ತು ಉರ್ದು ಭಾಷೆ ಮಾತನಾಡುತ್ತಾಳೆ. ಅರ್.ಎಂ.ಎಲ್.ನಗರ ಇಖ್ಲಾಸ್ ಶಾಲೆಯ ಸಮವಸ್ತ್ರ, ನೀಲಿ ಶರ್ಟ್, ನೀಲಿ ಪ್ಯಾಂಟ್ ಮತ್ತು ನೀಲಿ ಸ್ಕ್ರಾಪ್ ಧರಿಸಿರುತ್ತಾಳೆ.
ಈಕೆಯ ಸುಳಿವು ಯಾರಿಗಾದರೂ ಸಿಕ್ಕಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆ ಶಿವಮೊಗ್ಗ, ಜಿ ನಿಸ್ತಂತು ಕೇಂದ್ರ ಅಥವಾ ಪೊಲೀಸ್ ಕಂಟ್ರೋಲ್ ರೂಂ ಸಂಖ್ಯೆ ೧೦೦, ದೂ.ಸಂ: ೦೮೧೮೨-೨೬೧೪೧೪ /೨೬೧೪೧೬ ಗಳನ್ನು ಸಂಪರ್ಕಿಸುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.