ಥೈಲ್ಯಾಂಡ್‌ನಲ್ಲಿ ಯಶಸ್ವಿಯಾಗಿ ನಡೆದ ಚಿರಂತನದ ವಿಶ್ವ ಸಂಸ್ಕೃತಿ ಉತ್ಸವ…
ಥೈಲ್ಯಾಂಡ್: ಚಿರಂತನ ಸಂಸ್ಥೆ ಥೈಲ್ಯಾಂಡ್‌ನಲ್ಲಿ ಆಯೋಜಿಸಿದ್ದ ಅಂತರಾಷ್ಟ್ರೀಯ ಸಂಸ್ಕೃತಿ ಉತ್ಸವ ಥೈಲ್ಯಾಂಡ್ ೨೦೨೩ರ ವಿಜೃಂಭಣೆ ಯಿಂದ ಯಶಸ್ವಿಯಾಗಿ ಜರಗಿತು. ೧೭ ನೃತ್ಯಗಳನ್ನು ಪ್ರದರ್ಶಿಸಿದ ಎರಡು ದೇಶಗಳ ಕಲಾವಿದರಿಗೆ ಪ್ರೇಕ್ಷಕರ ಚಪ್ಪಾಳೆಯ ಸುರಿಮಳೆ ಆಯಿತು.
ಮುಖ್ಯ ಅತಿಥಿಗಳಾಗಿ ಆಗಮಿ ಸಿದ್ದ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳಾದ ಆರ್ ಮುತ್ತು ಅವರು, ಚಿರಂತನದ ಈ ವಿಶೇಷ ಪ್ರಯತ್ನಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು. ಮಲೇಷಿಯಾದ ರಾಯಭಾರಿ ಕಚೇರಿಯ ಶ್ರೀಮತಿ ಜರಿನ್ ರವರು ಭಾರತದಿಂದ ಬಂದು ಸ್ವತಂತ್ರವಾಗಿ ಕಾರ್ಯ ಕ್ರಮವನ್ನು ಆಯೋಜಿಸುವುದು ಸುಲಭದ ಮಾತಲ್ಲ, ಅಂತಹ ಪ್ರಯತ್ನವನ್ನು ಮಾಡಿ ಥೈಲ್ಯಾಂಡ್ ನಲ್ಲಿ ೧೦೦ ಕ್ಕೂ ಹೆಚ್ಚು ಕಲಾವಿದರಿಗೆ ವೇದಿಕೆಯನ್ನು ನೀಡಿದ ಚಿರಂತನದ ಸಾಧನೆಯನ್ನು ಪ್ರಶಂಶಿಸಿದರು.
ಇನ್ನೋರ್ವ ಅತಿಥಿ ಸುಶೀಲ್ ಕುಮಾರ್ ಸರಫ್ ಅವರು ಕಲಾ ಶಿಕ್ಷಣವನ್ನು ನೀಡುತ್ತಾ ಸಾವಿರಾರು ವಿದ್ಯಾರ್ಥಿಗಳಿಗೆ ಸಂಗೀತ ನೃತ್ಯ ತರಗತಿಗಳನ್ನು ಕಳೆದ ೨೩ ವರ್ಷ ಗಳಿಂದ ನಡೆಸುತ್ತಾ ಹಾಗೂ ಉತ್ತಮ ಗುಣಮಟ್ಟದ ವೇದಿಕೆ ಗಳನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಸೃಷ್ಟಿಸಿ ಎ ಕಲಾವಿದರಿಗೆ ಅವಕಾಶ ನೀಡುತ್ತಿರುವ ಚಿರಂತನದ ಈ ಹೆಜ್ಜೆಯನ್ನು ಗುರುತಿಸಿ ಮುಂದೆ ತಾವು ಪ್ರೋತ್ಸಾಹ ನೀಡುವುದಾಗಿ ಹೇಳಿದರು.
ಪರಿಸರ ತe ಹಾಗೂ ಜರೋದ ಕಂಪನಿಯ ನಿರ್ದೇಶಕಿ ಶ್ರೀಮತಿ ರೇವತಿ ಕಾಮತ್ ಗ್ಲೋಬಲ್ ಸರ್ವೀಸ್ ಮತ್ತು ಮ್ಯೂಸಿಕ್ ಐಕಾನ್ ಅವಾರ್ಡ್ ಸ್ವೀಕರಿಸಿ ಚಿರಂತನದ ಜೊತೆಗಿನ ತಮ್ಮ ಕಲಾ ಪಯಣವನ್ನು ಬಣ್ಣಿಸಿ ದರು ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಕಲಾವಿದರಿಗೆ ಅವಕಾಶ ವನ್ನು ನೀಡುತ್ತಿರುವುದು ಬಹಳ ವಿಶೇಷ ಎಂದು ಶ್ರೀಮತಿ ದೀಪಾರಾವ್ ಹಾಗೂ ಮಾಧವ ಪದಕಿ ಯವರ ಬೆನ್ನು ತಟ್ಟಿದರು.
ಕಾರ್ಯಕ್ರಮದಲ್ಲಿ ಶ್ರೀಮತಿ ರೇವತಿ ಕಾಮತ್ ಅವರಿಗೆ – ಗ್ಲೋಬಲ್ ಸರ್ವಿಸ್ ಮತ್ತು ಮ್ಯೂಸಿಕ್ ಐಕಾನ್ ಅವಾರ್ಡ್, ಗುರು ವಿದ್ವಾನ್ ಶ್ರೀಧರ್ ಜೈನ್ ರವರಿಗೆ – ಗ್ಲೋಬಲ್ ಡಾನ್ಸ್ ಐಕಾನ್ ಅವಾರ್ಡ್, ವಿದುಷಿ ಸೌಮ್ಯರಾಣಿರವರಿಗೆ – ಇಂಟರ್ನ್ಯಾ ಷನಲ್ ಡಾನ್ಸ್ ಎಕ್ಸಲೆನ್ಸ್ ಅವಾರ್ಡ್, ವಿದುಷಿ ಕಾಮಾಕ್ಷಿ ರವರಿಗೆ – ಇಂಟರ್ನ್ಯಾಷನಲ್ ಡಾನ್ಸ್ ಎಕ್ಸಲೆನ್ಸ್ ಅವಾರ್ಡ್, ವಿದುಷಿ ವಾಣಿ ವೆಂಕಟರಾಮು ರವರಿಗೆ – ಇಂಟರ್ನ್ಯಾಷನಲ್ ಡಾನ್ಸ್ ಎಕ್ಸಲೆನ್ಸ್ ಅವಾರ್ಡ್, ವಿದುಷಿ ಸೌಮ್ಯ ಶ್ರೀಧರ್ ಜೈನ್ ರವರಿಗೆ – ಇಂಟರ್ನ್ಯಾಷನಲ್ ಆರ್ಟ್ ಸರ್ವಿಸ್ ಎಕ್ಸಲೆನ್ಸ್ ಅವಾರ್ಡ್ ಹಾಗು ಥೈಲ್ಯಾಂಡ್‌ನ ನೃತ್ಯ ಗುರುಗಳಾದ ಕನ್ಯಕೋರ್ನ್ ಕುವೆಂ ಚಮ್‌ರವರಿಗೆ – ಇಂಟರ್ನ್ಯಾಷನಲ್ ಡಾನ್ಸ್ ಎಕ್ಸಲೆನ್ಸ್ ಅವಾರ್ಡ್ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.
ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಲಾವಿದರು ಸುಮಾರು ೧೦ಕ್ಕೂ ಹೆಚ್ಚು ಜನಪದ ಹಾಗೂ ಲಘು ಶಾಸಿಯ ಶೈಲಿಯ ನೃತ್ಯಗಳನ್ನು ಪ್ರದರ್ಶಿಸಿ ಥಾಯ್ಲ್ಯಾಂಡ್‌ನ ಪ್ರೇಕ್ಷಕರ ಮನಸೂರೆಗೊಂಡರು.
ಉತ್ತಮವಾದ ಧ್ವನಿ ಬೆಳಕಿನ ವ್ಯವಸ್ಥೆ ಹಾಗೂ ಅಚ್ಚುಕಟ್ಟಾದ ನಿರೂಪಣೆ ಮತ್ತು ಭಾರತದ ವಿವಿಧ ರಾಜ್ಯಗಳ ಜನಪದ ನೃತ್ಯಗಳನ್ನು ಪ್ರದರ್ಶಿಸಿದ್ದು ವಿಶೇಷವಾಗಿ ಮೂಡಿ ಬಂದಿತ್ತು. ಕಡೆಯಲ್ಲಿ ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ ನೃತ್ಯಕ್ಕೆ ಕಲಾವಿದರೊಂದಿಗೆ ಇಡೀ ಸಭಾಂಗಣದ ಪ್ರೇಕ್ಷಕರು ನರ್ತಿಸಿದ ದೃಶ್ಯ ಸಂಗೀತ ಹಾಗೂ ನೃತ್ಯಕ್ಕಿರುವ ಶಕ್ತಿಯನ್ನು ಸಾರುವಂತಿತ್ತು.
ಎ ಕಲಾವಿದರುಗಳಿಗೆ ನೆನಪಿನ ಕಾಣಿಕೆ ಹಾಗೂ ಪ್ರಮಾಣ ಪತ್ರಗಳನ್ನು ನೀಡಲಾಯಿತು. ಈ ಕಾರ್ಯಕ್ರಮಕ್ಕೆ ತಾಯ್ ಕನ್ನಡ ಬಳಗ, ತೆಲುಗು ಅಸೋಸಿಯೇ ಷನ್ ಥೈಲ್ಯಾಂಡ್ ಹಾಗೂ ಥೈಲ್ಯಾಂಡ್ ತಮಿಳ್ ಫೆಡರೇಷನ್ ಸಂಸ್ಥೆಗಳು ಚಿರಂತನದೊಂದಿಗೆ ಕೈಜೋಡಿಸಿದ್ದವು. ಸುಮಾರು ೪೦೦ ಹೆಚ್ಚು ಪ್ರೇಕ್ಷಕರು ಇಂತಹ ಕಾರ್ಯಕ್ರಮಕ್ಕೆ ಬಂದಿದ್ದು ಇಡೀ ಸಭಾಂಗಣ ತುಂಬಿದ್ದು ಬಹಳ ವಿಶೇಷವಾಗಿತ್ತು, ಒಟ್ಟಿನಲ್ಲಿ ವಿಶ್ವ ಸಂಸ್ಕೃತಿ ಉತ್ಸವ ಥೈಲ್ಯಾಂಡ್ ಬಹು ಯಶಸ್ವಿಯಾಗಿ ಜರಗಿತು.