ಮಾನವೀಯ ಮಲ್ಯಗಳ ಸಾಕಾರಮೂರ್ತಿ ರೆ|ಫಾ| ಅಂತೋಣಿ ಪೀಟರ್

Fr.peter

ಅತ್ಯಂತ ಪ್ರತಿಭಾವಂತ ಹಾಗೂ ಮಾನವೀಯ ಮಲ್ಯಗಳ ಸಾಕಾರಮೂರ್ತಿ ಯಂತಿದ್ದಂತಹ ಫಾದರ್ ಅಂತೋಣಿ ಪೀಟರ್ ಅವರ ಅಕಾಲಿಕ ಮರಣ, ಶಿವಮೊಗ್ಗ ಧರ್ಮಕ್ಷೇತ್ರದ ಕಥೋಲಿಕ ಕ್ರೈಸ್ತ ಸಮುದಾಯದ ಸರ್ವ ಜನರನ್ನು ದಿಗ್ಭ್ರಾಂತರನ್ನಾಗಿಸಿದೆ.
ಪ್ರಸ್ತುತ ಶಿಕಾರಿಪುರದ ಕಿರಿಯ ಪುಷ್ಪ ಸಂತ ತೆರೇಸಾ ಚರ್ಚ್‌ನಲ್ಲಿ ಧರ್ಮಕೇಂದ್ರದ ಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದ ೫೧ ವರ್ಷ ವಯಸ್ಸಿನ ಫಾದರ್ ಅಂತೋಣಿ ಪೀಟರ್ ಅವರದ್ದು ಮೇರು ವ್ಯಕ್ತಿತ್ವ. ತಾನು ನಂಬಿಕೊಂಡು ಬಂದಿದ್ದ ದೇವರ ಹಾಗೂ ದೀನ ದಲಿತರ, ಅವಕಾಶವಂಚಿತರ, ಶೋಷಿತರ ಹಾಗೂ ಸಮಾಜದ ಅಂಚಿನಲ್ಲಿರುವ ಜನರ ಸೇವೆಗೆ ತಮ್ಮನ್ನೇ ಸಂಪೂರ್ಣವಾಗಿ ಸಮರ್ಪಿಸಿಕೊಂಡಿದ್ದರು.
೨೩ ಜುಲೈ ೨೦೨೪ರ ಮಂಗಳವಾರ ಮಧ್ಯಾಹ್ನ ಸುಮಾರು ೩.೩೦ ಗಂಟೆಗೆ, ಶಿವಮೊಗ್ಗದಲ್ಲಿ ತಮ್ಮ ಕಾರ್ಯವನ್ನು ಮುಗಿಸಿ ಶಿಕಾರಿಪುರಕ್ಕೆ ಮರಳಿ ಹೋಗುತ್ತಿದ್ದಂತಹ ಸಂದರ್ಭಲ್ಲಿ ಸವಳಂಗ – ಶಿಕಾರಿಪುರದ ಮಧ್ಯೆ ಇರುವ ಚಿನ್ನಿಕಟ್ಟೆ ಎಂಬಲ್ಲಿ ಅವರು ಪ್ರಯಾಣಿಸುತ್ತಿದ್ದ ಕಾರು ಮತ್ತು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಮುಖಾಮುಖಿ ಡಿಕ್ಕಿಯಾಗಿ ಫಾದರ್ ಅಂತೋಣಿ ಪೀಟರ್ ಅವರು ಸ್ಥಳದಲ್ಲಿಯೇ ಕೊನೆಯುಸಿರೆಳೆದರು. ಕಾರು ಚಲಾಯಿಸುತ್ತಿದ್ದ ಸಹೋದರ ಸ್ಟೀಫನ್ ಅವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿzರೆ.
ಶಿವಮೊಗ್ಗ ನಗರದ ನಿವಾಸಿಗಳಾದ ಶ್ರೀ ಕಾಂತರಾಜ್ ಹಾಗೂ ಶ್ರೀಮತಿ ಸೂಸೈಮೇರಿ ಅವರ ಜೇಷ್ಠಪುತ್ರನಾಗಿ ೭ ಜನವರಿ ೧೯೭೩ರಂದು ಜನಿಸಿದ ಫಾದರ್ ಅಂತೋಣಿ ಪೀಟರ್ ಅವರಿಗೆ ಓರ್ವ ಸಹೋದರ ಹಾಗೂ ಓರ್ವ ಸಹೋದರಿ ಇzರೆ.
ಆರಂಭದ ಶಿಕ್ಷಣವನ್ನು ಶಿವಮೊಗ್ಗ ನಗರದಲ್ಲಿಯೇ ಪಡೆದಿರುವ ಪೂಜ್ಯರು ೧೯೯೦ರಲ್ಲಿ ಶಿವಮೊಗ್ಗ ಧರ್ಮಕ್ಷೇತ್ರದ ಗುರುಗಳಾಗಲು ನಿರ್ಧರಿಸಿ ಗುರುಮಠ ಸೇರಿದರು. ತಮ್ಮ ಗುರುಮಠದ ಪ್ರಾಥಮಿಕ ಶಿಕ್ಷಣವನ್ನು ಮೈಸೂರಿನ ಸಂತ ಮರಿಯಮ್ಮನವರು ಕಿರು ಗುರು ವಿದ್ಯಾಮಂದಿರ ಹಾಗೂ ಜೊತೆಗೆ ಪದವಿ ಶಿಕ್ಷಣವನ್ನು ಸಂತ ಫಿಲೋಮಿನಾ ಕಾಲೇಜಿನಲ್ಲಿ ಪೂರೈಸಿದರು.
ಬೆಂಗಳೂರಿನ ಸಂತ ಪೇತ್ರ ಮಹಾಗುರು ವಿದ್ಯಾಮಂದಿರಲ್ಲಿ ತತ್ವಶಾಸ್ತ್ರದಲ್ಲಿ ಪದವಿ ಹಾಗೂ ತದನಂತರ ಮಂಗಳೂರಿನ ಸಂತ ಜೋಸೆಫರ ಮಹಾ ಗುರು ವಿದ್ಯಾಮಂದಿರದಲ್ಲಿ ದೈವಶಾಸ್ತ್ರದಲ್ಲಿ ಪದವಿ ಪಡೆದು ೪ ಮೇ ೨೦೦೪ರಂದು ಗುರುದೀಕ್ಷೆ ಪಡೆದು ತಮ್ಮನ್ನೇ ಸಂಪೂರ್ಣವಾಗಿ ಲೋಕ ಕಲ್ಯಾಣಕ್ಕಾಗಿ ಸಮರ್ಪಿಸಿಕೊಂಡರು.
ಅತ್ಯುತ್ತಮ ವಾಗ್ಮಿಯೂ, ಪ್ರಬುದ್ಧ ಪ್ರಬೋಧಕರೂ, ಉತ್ತಮ ಪಾಲಕರೂ ಆಗಿದ್ದಂತಹ ಫಾದರ್ ಅಂತೋಣಿ ಪೀಟರ್ ಅವರು ರೋಮ್ ನಗರದ ಉರ್ಬಾನಿಯ ವಿಶ್ವವಿದ್ಯಾನಿಲಯದಿಂದ ಅರಾಧನಾವಿಧಿ ಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದಿದ್ದರು.
ದಾವಣಗೆರೆಯ ಸಂತ ತೊಮಾಸರ ದೇವಾಲಯದ ಸಹಾಯಕ ಗುರುಗಳಾಗಿ ಸೇವೆ ಸಲ್ಲಿಸಿ ನಂತರ ಭದ್ರಾವತಿಯ ಕಾರೇಹಳ್ಳಿ ಸಂತ ಅಂತೋಣಿಯವರ ದೇವಾಲದಯದ ಧರ್ಮಗುರುಗಳು, ಹರಿಹರ ಆರೋಗ್ಯಮಾತೆ ಬಸಿಲಿಕಾದ ರೆಕ್ಟರ್ ಆಗಿಯೂ ಅಪಾರ ಸೇವೆ ಸಲ್ಲಿಸಿರುವ ಪೂಜ್ಯರು ನೂರಾರು ಭಕ್ತಜನರ ಹೃದಯಗಳಲ್ಲಿ ಪೂಜ್ಯ ಗುರುಗಳಾಗಿ ಪ್ರತಿಷ್ಠಾಪನೆಗೊಂಡಿzರೆ.
ದೇವರ ಸಂದೇಶವನ್ನು ಎಳೆ ಎಳೆಯಾಗಿ ಬಿಡಿಸಿ ಹೇಳುವ ಅವರ ಪ್ರಭೋಧನೆಗೆಳು ಹಾಗೂ ಸುಶ್ರಾವ್ಯ ಕಂಠದಿಂದ ಅವರು ಹಾಡುವ ದೇವರ ಭಕ್ತಿಗೀತೆಗಳ ಮೂಲಕ ಸಾವಿರಾರು ಜನರ ಹೃದಯಗಳಿಗೆ ಭಕ್ತಿಯ ಸಿಂಚನ ಮಾಡಿzರೆ. ಅತ್ಯುತ್ತಮ ಸಂಘಟಕರೂ, ಪ್ರಭುದ್ಧ ನಾಯಕತ್ವದ ಗುಣವುಳ್ಳವರಾಗಿದ್ದ ಪೂಜ್ಯರು ಯಾವುದೇ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸುದರಲ್ಲಿ ಪ್ರಸಿದ್ದಿ ಪಡೆದಿದ್ದರು.
ಅವರ ಅವಿರತ ಸೇವೆ, ಮಾರ್ಗದರ್ಶನ ಹಾಗೂ ಪ್ರೇರಣಾದಾಯಕ ಜೀವನಕ್ಕೆ, ಶಿವಮೊಗ್ಗ ಧರ್ಮಕ್ಷೇತ್ರದ ಪೂಜ್ಯ ಧರ್ಮಾಧ್ಯಕ್ಷರಾದ ಫ್ರಾನ್ಸಿಸ್ ಸೆರಾವೋ, ಶಿವಮೊಗ್ಗ ಧರ್ಮಕ್ಷೇತ್ರದ ಗುರುವೃಂದ, ಕನ್ಯಾಭಗಿನಿಯರು, ಕ್ರೈಸ್ತ ಭಕ್ತಜನತೆ ಸದಾ ಚಿರಋಣಿಯಾಗಿರುತ್ತದೆ.
ಅವರ ಅಕಾಲಿಕ ಮರಣ ಕೇವಲ ಶಿವಮೊಗ್ಗ ಧರ್ಮಕ್ಷೇತ್ರ ಮಾತ್ರವಲ್ಲ ಅಖಿಲ ಕರ್ನಾಟಕದ ಧರ್ಮಸಭೆಗೆ ತುಂಬಲಾರದ ನಷ್ಟವನ್ನುಂಟು ಮಾಡಿದೆ. ಅಪಾರ eನಭಂಡಾರ, ಸ್ನೇಹಪರ ವ್ಯಕ್ತಿತ್ವ, ಪ್ರಬುದ್ಧ ಯೋಚನಾ ಲಹರಿಯನ್ನು ಹೊಂದಿದ್ದ ಫಾದರ್ ಅಂತೋಣಿ ಪೀಟರ್ ಅವರನ್ನು ಕಳೆದುಕೊಂಡಿರುವ ಶಿವಮೊಗ್ಗ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಫ್ರಾನ್ಸಿಸ್ ಸೆರಾವೊ ಎಸ್ ಜೆ ಹಾಗೂ ಸಮಸ್ತ ಗುರುವೃಂದ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿzರೆ ಹಾಗೂ ಅವರ ತಂದೆ ತಾಯಿ ಮತ್ತು ಕುಟುಂಬದ ಸದಸ್ಯರಿಗೆ ಸಾಂತ್ವನ ಕೋರಿzರೆ.
ಫಾದರ್ ವೀರೇಶ್ ವಿ. ಮೊರಾಸ್
ಸಾರ್ವಜನಿಕ ಸಂಪರ್ಕಾಧಿಕಾರಿಗಳು, ಶಿವಮೆಗ್ಗ ಧರ್ಮಕ್ಷೇತ್ರ