ತಂದೆಯನ್ನೇ ವನವಾಸಕ್ಕೆ ಕಳಿಸಿದ ರಾಮಭಕ್ತರು ನಮ್ಮ ಮುಂದಿದ್ದಾರೆ….

aynur-3

ಶಿವಮೊಗ್ಗ: ತಂದೆಯನ್ನೇ ವನವಾಸಕ್ಕೆ ಕಳಿಸಿದ ರಾಮಭಕ್ತರು ನಮ್ಮಲ್ಲಿzರೆ ಎಂದು ಬಿ.ವೈ. ರಾಘವೇಂದ್ರ, ಬಿ.ವೈ.ವಿಜಯೇಂದ್ರ ಅವರ ಹೆಸರು ಹೇಳದೆ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಬಿಜೆಪಿ ವಿರುದ್ಧ ಸುದ್ದಿಗೋಷ್ಟಿಯಲ್ಲಿ ವಾಗ್ದಾಳಿ ನಡೆಸಿದರು.
ಶ್ರೀರಾಮ ಎಲ್ಲರ ದೇವರು, ಆತ ಎಲ್ಲರನ್ನು ಕಾಪಾಡುತ್ತಾನೆ. ರಾಮನ ಭಕ್ತರೆಂದು ಹೇಳುಕೊಳ್ಳುವ ಕೆಲವರು ಶ್ರೀರಾಮನನ್ನೇ ದೂರವಿಡುತ್ತಾರೆ. ಆ ಶ್ರೀರಾಮನ ತಂದೆ ದಶರಥನ ಮಾತಿಗಾಗಿ ವನವಾಸ ಮಾಡಿದರು. ಆದರೆ ಈ ರಾಮಭಕ್ತರು ದಶರಥನನ್ನೇ (ಯಡಿಯೂರಪ್ಪ) ವನವಾಸಕ್ಕೆ ಕಳಿಸಿzರೆ. ಇದು ವಿಪರ್ಯಾಸ ಎಂದು ಕುಟುಕಿದರು.


ಎಲ್ಲಾ ಹಿಂದೂಗಳೂ ಶ್ರೀರಾಮನ ಭಕ್ತರಾಗಿzರೆ. ಆತನನ್ನು ಬೀದಿಗೆ ತಂದು ಚುನಾವಣೆಗೆ ಬಳಸಿಕೊಳ್ಳುವ ಅಗತ್ಯವೇ ಇಲ್ಲ. ಬಿಜೆಪಿಯವರು ಶ್ರೀರಾಮನಿಗಾಗಿ ಆಯೋಧ್ಯೆಯಲ್ಲಿ ಮಂದಿರ ಕಟ್ಟಿzವೆ ಎನ್ನುತ್ತಾರೆ. ಆದರೆ ಆ ಮಂದಿರ ಕಟ್ಟಲು ಈ ದೇಶದ ಕೋಟ್ಯಾಂತರ ಜನರು ಹಣ ಕೊಟ್ಟಿzರೆ. ಅದು ಬಿಜೆಪಿಯವರು ಕಟ್ಟಿದ್ದಲ್ಲ, ಭಕ್ತರು ಕೊಟ್ಟ ಹಣ ಎಂದು ವಾಗ್ದಾಳಿ ನಡೆಸಿದರು.
ಆಯೋಧ್ಯೆಯ ಶ್ರೀರಾಮ ಮಂದಿರಕ್ಕಾಗಿ ಇಡೀ ದೇಶದ ಜನ ಇಟ್ಟಿಗೆ ಕಬ್ಬಿಣ ಕೊಟ್ಟಿದ್ದರು. ಈಗ ಆ ದೇವಾಲಯ ಕಾಂಕ್ರಿಟ್ ಕಲ್ಲಿನಿಂದ ಆಗಿದೆ. ಇಡೀ ದೇಶದಿಂದ ತೆಗೆದು ಕೊಂಡು ಹೋಗಿದ್ದ ಇಟ್ಟಿಗೆ, ಕಬ್ಬಿಣ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದರು.
ಕೇಂದ್ರ ಸರ್ಕಾರ ರಾಜ್ಯಕ್ಕೆ ದ್ರೋಹ ಬಗೆಯುತ್ತಿದೆ. ರಾಜಕೀಯ ದ್ವೇಷವನ್ನೇ ಸಾಧಿಸುತ್ತಿದೆ. ಬರಗಾಲದ ಇಂತಹ ಸಂದರ್ಭದಲ್ಲಿ ಬಿ.ವೈ.ರಾಘವೇಂದ್ರ ಸೇರಿದಂತೆ ಯಾವ ಸಂಸದರು ಕೇಂದ್ರದಿಂದ ಅನುದಾನವನ್ನು ತರುವ ಮಾತನಾಡಲಿಲ್ಲ. ಒಂದು ರೀತಿಯಲ್ಲಿ ರಾಜ್ಯದ ಮೇಲೆ ಕೇಂದ್ರದ ದಬ್ಬಾಳಿಕೆ ನಡೆಸುತ್ತಿದೆ ಎಂದರು.
ಕಷ್ಟ ಕಾಲದಲ್ಲಿಯೂ ನೆರವಾಗದ ಕೇಂದ್ರದ ನಾಯಕರಾದ ಮೋದಿ, ಅಮಿತ್‌ಷಾ ಮುಂತಾದವರು ರಾಜ್ಯಕ್ಕೆ ಯಾವ ಮುಖ ಇಟ್ಟುಕೊಂಡು ಮತ ಕೇಳಲು ಬರುತ್ತಾರೆ. ಒಕ್ಕೂಟ ವ್ಯವಸ್ಥೆಯಲ್ಲಿ ಮೊಟ್ಟ ಮೊದಲ ಬಾರಿಗೆ ರಾಜ್ಯವೊಂದು ನ್ಯಾಯಾಲಯದ ಮೆಟ್ಟಿಲೆರಿರುವುದು ಇದೇ ಪ್ರಥಮ ವಾಗಿದೆ. ಇದೊಂದು ಪ್ರಜಪ್ರಭುತ್ವ ವಿರೋಧಿ ಕೇಂದ್ರ ಸರ್ಕಾರ ಎಂದರು.
ರಾಘವೇಂದ್ರ ಅವರು ಅಭಿವೃದ್ಧಿಯ ಹರಿಕಾರ ಎಂಬುವುದು ತಮ್ಮನ್ನು ತಾವು ಘೋಷಣೆ ಮಾಡಿ ಕೊಂಡಿzರೆ. ತಮ್ಮ ಅವಧಿಯಲ್ಲಿ ರೈತರಿಗಾಗಿ ಏನು ಅನುಕೂಲ ಮಾಡಿ ಕೊಟ್ಟಿzರೆ. ಎಷ್ಟು ಕೈಗಾರಿಕೆಗಳನ್ನು ಸ್ಥಾಪಿಸಿzರೆ. ಮುಚ್ಚಿದ ಎಷ್ಟು ಕಾರ್ಖಾನೆಗಳನ್ನು ಮರು ಸ್ಥಾಪಿಸಿzರೆ. ಉದ್ಯೋಗ ಸೃಷ್ಟಿಗಾಗಿ ಏನು ಮಾಡಿ zರೆ. ಅವರು ಜಿಯಲ್ಲಿ ಉದ್ಯೋಗ ವನ್ನು ಸೃಷ್ಟಿ ಮಾಡಲಿಲ್ಲ. ಉದ್ವೇಗವನ್ನು ಸೃಷ್ಟಿ ಮಾಡಿದರು ಅಷ್ಟೇ ಎಂದರು.
ಈಶ್ವರಪ್ಪನವರು ಗೀತಾ ಶಿವರಾಜ್‌ಕುಮಾರ್ ಅವರನ್ನು ಡಮ್ಮಿ ಎಂದು ಕರೆದಿzರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಪಾಪ ಈಶ್ವರಪ್ಪನವರಿಗೆ ಯಾರು ಡಮ್ಮಿ, ಯಾರು ಕಮ್ಮಿ ಎಂಬುವುದೇ ಗೊತ್ತಿಲ್ಲ, ಈಗಾಗಲೇ ಈಶ್ವರಪ್ಪನವರ ಬಗ್ಗೆ ಬಿ.ವೈ.ರಾಘವೇಂದ್ರ ಅವರೇ, ಹಾವು ಚೇಳು ಹೊರಗೆ ಬರುತ್ತವೆ ನೋಡಿ ಎಂದಿzರೆ. ಇವರು ಚೇಳಾಗಿ ಕುಟುಕುತ್ತಾರೋ ಎಂದು ಕಾದುನೋಡಬೇಕಾಗಿದೆ ಎಂದರು.
ತನ್ನ ಮಗನಿಗಾಗಿ ಅಷ್ಟೇಲ್ಲ ಮಾಡುತ್ತಿರುವ ಇವರು, ಈಗ ಅವರ ಮಗ ಎಲ್ಲಿzನೆ. ಆ ಕಾಂಗರೋ ಮರಿ ಎಲ್ಲಿದೆ ಎಂದು ಹೇಳಿದರಲ್ಲದೆ, ಕೋತಿಯ ಕತೆಯನ್ನು ಹೇಳಿ ಈಶ್ವರಪ್ಪನವರ ವಿರುದ್ಧ ವಾಗ್ದಾಳಿ ನಡೆಸಿದ್ದಲ್ಲದೆ, ಅವರು ನಾಮಪತ್ರ ವಾಪಾಸು ತೆಗೆದುಕೊಳ್ಳುವವರಿಗೂ ಚುನಾವಣೆಗೆ ನಿಲ್ಲುತ್ತಾರೆ ಎಂಬ ನಂಬಿಕೆ ನನಗಿಲ್ಲ. ಒಂದು ವಿಧಾನ ಪರಿಷತ್ತಿನ ಸದಸ್ಯತ್ವಕ್ಕಾಗಿ ಇಷ್ಟೇಲ್ಲ ರಂಪರಾಮಾಯಣ ಮಾಡಬೇಕಾ ಗಿತ್ತೇ ಎಂದ ಅವರು, ಅದೇನೇ ಇದ್ದರು ಗೀತಾ ಶಿವರಾಜ್‌ಕುಮಾರ್ ಅವರ ಗೆಲುವು ಖಚಿತ ಎಂದರು.
ಗೋಷ್ಠಿಯಲ್ಲಿ ಪ್ರಮುಖರಾದ ವೈ.ಹೆಚ್.ನಾಗರಾಜ್, ಧೀರರಾಜ್, ರವಿಕುಮಾರ್, ಸೈಯ್ಯದ್ ಅಡ್ಡು, ಮುಖ್ತಿಯಾರ್ ಅಹ್ಮದ್, ಹಿರಣ್ಣಯ್ಯ, ಜಿ.ಪದ್ಮನಾಬ್, ಶಿ.ಜು.ಪಾಶ, ಆಯನೂರು ಸಂತೋಷ್ ಇದ್ದರು.