ಅನ್ನದಾತರಿಗೆ ಮಾರಕವಾಗುತ್ತಿರುವ ಕಾರ್ಪೊರೇಟ್ ಕಂಪನಿಗಳೇ ಭಾರತ ಬಿಟ್ಟು ತೊಲಗಿ: ರೈತ ಸಂಘದಿಂದ ಭಾರೀ ಪ್ರತಿಭಟನೆ
ಶಿವಮೊಗ್ಗ: ಕಾರ್ಪೊರೇಟ್ ಕಂಪನಿಗಳೇ ಭಾರತ ಬಿಟ್ಟು ತೊಲಗಿ ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಆ.೯ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂಬ ಘೋಷಣೆಯನ್ನು ಗಾಂಧೀಜಿಯವರು ಮಾಡಿದ್ದರು. ಆದರೆ ಈಗ ಭಾರತದ ಕೃಷಿ ಭೂಮಿ ಯನ್ನು ರೈತರೇ ಜೋಪಾನ ಮಾಡಬೇಕಾಗಿದೆ. ಹಾಗಾಗಿ ಕಾರ್ಪೊರೇಟರ್ ಕಂಪನಿಗಳೇ ಭಾರತ ಬಿಟ್ಟು ತೊಲಗಿ ಎಂದು ನಾವು ಕರೆ ಕೊಡಬೇಕಾಗಿದೆ ಎಂದು ಪ್ರತಿಭಟನಕಾರರು ತಿಳಿಸಿದರು.
ಅಂದು ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಘೋಷಣೆ ಇಂದು ಕಾರ್ಪೊರೇಟ್‌ಗಳೇ ಭಾರತ ಬಿಟ್ಟು ತೊಲಗಿ ಎಂಬ ಘೋಷಣೆ ಮಾಡ ಬೇಕಾಗಿದೆ. ಭಾರತದ ಕೃಷಿಭೂಮಿ ಮತ್ತು ಕೃಷಿ ವಿಜನವನ್ನು ಜೋಪಾನ ಮಾಡಬೇಕಾಗಿದೆ. ಕಾರ್ಪೊರೇಟ್ ಕಂಪನಿಗಳು ಭಾರತದ ಕೃಷಿಯ ಮೇಲೆ ಹಿಡಿತ ಸಾಧಿಸಿರುವುದನ್ನು ತಪ್ಪಿಸಬೇ ಕಾಗಿದೆ ಎಂದು ಒತ್ತಾಯಿಸಿದರು.
ಕೃಷಿ ಭಾರತದ ಜೀವಾಳ. ಅದು ಸಂಸ್ಕೃತಿಯ ಭಾಗವೇ ಆಗಿದೆ. ವಿಶ್ವದಲ್ಲಿಯೇ ಅತಿದೊಡ್ಡ ಕೃಷಿಭೂಮಿ ನಮ್ಮದಾಗಿದೆ. ಆದರೆ ಇತ್ತೀಚೆಗೆ ಬಂಡವಾಳಶಾಹಿಗಳು ಲಗ್ಗೆ ಇಟ್ಟು ಕೃಷಿ ವ್ಯವಸ್ಥೆಯನ್ನೇ ಬುಡಮೇಲು ಮಾಡತೊಡಗಿದ್ದಾರೆ. ಸರ್ಕಾರಗಳು ಕಾರ್ಪೊರೇಟ್ ಕಂಪನಿಗಳಿಗೆ ರೆಡ್ ಕಾರ್ಪೆಟ್ ಹಾಸುತ್ತಿವೆ. ಇದರಿಂದ ಭಾರತದ ಕೃಷಿ ನಾಶವಾಗುತ್ತಿದೆ ಎಂದು ಆರೋಪಿಸಿದರು.
ಭಾರತದ ಆಹಾರ ಪೂರೈಕೆಯ ಸರಪಳಿಯ ಮೇಲೆ ಹಿಡಿತ ಸಾಧಿಸ ಬೇಕಾದ ಅನಿವಾರ್ಯತೆ ಇದೆ. ಕಾರ್ಪೊರೇಟ್‌ಗಳು ಸಾವಿರಾರು ಎಕರೆ ಪ್ರದೇಶದ ಫಾರಂಗಳನ್ನು ಹೊಂದಿ ದ್ದಾರೆ. ಇವರ ಉದ್ದೇಶವೇ ಉದ್ಯಮ ವಾಗಿದೆ. ಲಾಭವೇ ಮುಖ್ಯವಾಗಿದೆ. ಉತ್ಪಾದನೆಯಿಂದ ಹಿಡಿದು ವಿತರಣೆ ತನಕ ಇವರೇ ಹಿಡಿತ ಸಾಧಿಸುತ್ತಿದ್ದಾರೆ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಹೊಂದಿರುತ್ತಾರೆ. ಇದರಿಂದ ಸಣ್ಣ ಪ್ರಮಾಣದ ರೈತರು ಮತ್ತು ಸ್ಥಳೀಯ ಕೃಷಿ ಮಾರುಕಟ್ಟೆಗಳು ತಮ್ಮ ಅಸ್ತಿತ್ವವನ್ನೇ ಕಳೆದುಕೊಂಡಿವೆ. ಆದ್ದರಿಂದ ಕಾರ್ಪೊರೇಟ್‌ಗಳಿಂದ ಭಾರತದ ಕೃಷಿಯನ್ನು ಉಳಿಸಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.
ರಾಜ್ಯ ರೈತ ಸಂಘದ ವರಿಷ್ಠ ಕೆ.ಟ. ಗಂಗಾಧರ್ ಪ್ರಮುಖರಾದ ಯಶವಂತರಾವ್ ಘೋರ್ಪಡೆ, ಈರಪ್ಪ ಪ್ಯಾಟಿ, ಹಾಲೇಶಪ್ಪ ಗೌಡ್ರು, ಡಿ.ವಿ. ವೀರೇಶ್, ಮಂಜುನಾಥೇಶ್ವರ, ಶಿವಪೂಜಪ್ಪ ಗೌಡ್ರು ಇನ್ನಿತರರಿದ್ದರು.