ಸರ್ಕಾರಿ ನೌಕರರ ಸಂಘದ ಬೇಡಿಕೆಗಳ ಈಡೇರಿಕೆಗೆ ಕಾಂಗ್ರೆಸ್ ಸರ್ಕಾರ ಬದ್ದ…

ಹೊನ್ನಾಳಿ: ರಾಜ್ಯ ಸರ್ಕಾರಿ ನೌಕರರ ಪ್ರಮುಖ ಬೇಡಿಕೆಯಾದ ಓಪಿಎಸ್ ಜಾರಿಗೆ ತರುವುದು ಹಾಗೂ ಇತರ ಬೇಡಿಕೆಯನ್ನು ಈಡೇರಿಸುವುದಕ್ಕೆ ನಮ್ಮ ಸರಕಾರ ಬದ್ಧವಾಗಿದೆ ಎಂದು ಶಾಸಕ ಶಾಂತನಗೌಡ ಹೇಳಿದರು.
ಪಟ್ಟಣದ ಸರಕಾರಿ ನೌಕರರ ಭವನದಲ್ಲಿ ಹಮ್ಮಿಕೊಂಡಿದ್ದ ಸರಕಾರಿ ನೌಕರರ ಸಂಘದ ನವೀಕರಣ ಕಟ್ಟಡ ಉದ್ಘಾಟನೆ ಹಾಗೂ ಸರ್ಕಾರಿ ನೌಕರರ ತಾಲೂಕು ಸಂಘದ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭದ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿ ಮಾತನಾಡಿದ ಅವರು, ಸರ್ಕಾರದ ಎಲ್ಲ ಇಲಾಖೆಗಳಿಗೆ ಜನ ಸಾಮಾನ್ಯರು ತಮ್ಮ ತಮ್ಮ ಕೆಲಸಗಳಿಗೆ ಬರುತ್ತಾರೆ, ಅವರನ್ನು ಕಾಯಿಸದೆ ಅವರ ಕೆಲಸವನ್ನು ಮೊದಲು ಮಾಡಿಕೊಡಿ. ಅವರ ದೂರು ನನ್ನಲ್ಲಿಗೆ ಬರದ ಹಾಗೆ ಕೆಲಸ ಮಾಡಿಕೊಡಿ ಎಂದು ನೌಕರರಿಗೆ ಸೂಚಿಸಿದರು.


ರಾಜ್ಯದಲ್ಲಿ ವರುಣನ ಕಣ್ಣಾ ಮುಚ್ಚಾಲೆ ಆಟ ಪ್ರಾರಂಭವಾಗಿದೆ. ರಾಜದ್ಯಂತ ಮಳೆ ಕೈಕೊಟ್ಟು ಬರದ ಛಾಯೆ ಮೂಡುವ ರೀತಿ ಆಗಿದೆ. ಕೂಡಲೇ ಮಳೆ ಬರಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿದರು.
ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ಹೊನ್ನಾಳಿ ತಾಲೂಕು ಸರ್ಕಾರಿ ನೌಕರರ ಸಂಘ ಪ್ರತಿ ವರ್ಷ ಹಲವಾರು ಅಭಿವೃದ್ಧಿ ಕಾರ್ಯ ಗಳನ್ನು ಹಮ್ಮಿಕೊಂಡು ಬರುತ್ತಿದೆ. ಯಾರೇ ಅಧ್ಯಕ್ಷರಾಗಲಿ ಅವರ ಕಾಲದಲ್ಲಿ ಒಂದು ಕಟ್ಟಡ ಉದ್ಘಾಟನೆ ಅಥವಾ ನವೀಕರಣ ಇದ್ದೇ ಇರುತ್ತದೆ. ನನ್ನ ಅಧಿಕಾರದ ಅವಧಿಯಲ್ಲಿ ಆರೋಗ್ಯ ಕಂದಾಯ ಹಾಗೂ ಇನ್ನಿತರೆ ಇಲಾಖೆಗಳು ಕೋವಿಡ್ ಸಮಯದಲ್ಲಿ ಕೋವಿಡ್ ಸಂತ್ರಸ್ತರಿಗೆ ಸ್ಪಂದಿಸಿ ಪ್ರಾಮಾಣಿಕವಾಗಿ ಕೆಲಸ ಮಾಡಿ ದ್ದೀರಿ ಅದಕ್ಕಾಗಿ ನಾನು ನಿಮ್ಮನ್ನು ಅಭಿನಂದಿಸುತ್ತೇನೆ ಎಂದರು.
ನನ್ನ ಅವಧಿಯಲ್ಲಿ ಹೊನ್ನಾಳಿ ಹಾಗೂ ನಾಮತಿ ತಾಲೂಕು ಸರ್ಕಾರಿ ನೌಕರರ ಸಂಘದ ಕಟ್ಟಡಕ್ಕೆ ತಲಾ ೧.೫೦ ಕೋಟಿ ಅನುದಾನ ಮಾಡಿಸಿz ಆದರೆ ತಾಂತ್ರಿಕ ಕಾರಣದಿಂದ ಆರ್ಥಿಕ ಇಲಾಖೆ ಅನುದಾನ ಬಿಡುಗಡೆ ಮಾಡಿಸಿಲ್ಲ. ಅದನ್ನು ಈಗಿನ ಶಾಸಕರು ಅನುದಾನ ಬಿಡುಗಡೆ ಮಾಡಿಸು ವಂತೆ ಮನವಿ ಮಾಡಿದರು.
ಸರಕಾರಿ ನೌಕರರ ಸಂಘದ ಜಿಧ್ಯಕ್ಷ ವೀರೇಶ್ ಎಸ್. ಒಡೆಯನಾಪುರ ಹಾಗೂ ಸರ್ಕಾರಿ ನೌಕರರ ಸಂಘದ ಬಿ. ಕುಮಾರ್ ಹಾಗೂ ನೂತನ ಆರ್ ಎಸ್ ಅಧ್ಯಕ್ಷ ಪಾಟೀಲ್ ಮಾತನಾಡಿದರು.
ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ ಪಡೆದ ಸಮುದಾಯ ಆರೋಗ್ಯ ಅಧಿಕಾರಿ ಟಿ ನಾಗರತ್ನ, ರಾಜ್ಯ ಪ್ರಶಸ್ತಿ ಪಡೆದ ಗ್ರಂಥಪಾಲಕ ನಾಗರಾಜ್ ನಾಯಕ, ಸಂಘದ ನಿಕಟಪೂರ್ವ ಅಧ್ಯಕ್ಷ ಬಿ, ಕುಮಾರ್, ರಾಜ್ಯ ಪರಿಷತ್ ಸದಸ್ಯ ಟಿ. ಪಿ. ರವಿಕುಮಾರ್ ಅವರುಗಳನ್ನು ಸನ್ಮಾನಿಸಲಾಯಿತು.
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಹೊನ್ನಾಳಿ ತಾಲೂಕು ನೂತನ ಅಧ್ಯಕ್ಷರಾಗಿ ಆರ್. ಎಸ್. ಪಾಟೀಲ್, ರಾಜ್ಯ ಪರಿಷತ್ ಸದಸ್ಯರಾಗಿ ಎಸ್.ವಿ. ವೀರೇಶ್, ಉಪಾಧ್ಯಕ್ಷರಾಗಿ ಕೆ.ಅರುಣ್ ಅಧಿಕಾರ ಸ್ವೀಕರಿಸಿದರು.
ನ್ಯಾಮತಿ ಸಂಘದ ಅಧ್ಯಕ್ಷ ಎಂ. ಬಿ. ನಿಂಗಪ್ಪ, ರವಿಕುಮಾರ್, ಪ್ರಕಾಶ್ ನಾಯಕ, ಅರುಣ್ ಕುಮಾರ್, ನಾಗರಾಜ್ ನಾಯಕ, ಹಾಗೂ ಇತರರು ಉಪಸ್ಥಿತರಿದ್ದರು.