ಮೊದಲ ಬಾರಿಗೆ ಮತದಾನ ಮಾಡಿದ ವಿದ್ಯಾರ್ಥಿನಿಯರ ಸಂಭ್ರಮ…

harihara

ಹರಿಹರ : ನಗರದ ಶ್ರೀಮತಿ ಗಿರಿಯಮ್ಮ ಆರ್.ಕಾಂತಪ್ಪಶ್ರೇಷ್ಠಿ ಪ್ರಥಮ ದರ್ಜೆ ಮಹಿಳಾ ಮಹಾ ವಿದ್ಯಾಲಯದಲ್ಲಿ ಪ್ರಥಮ ವರ್ಷದ ಬಿ.ಎ. ಮತ್ತು ಬಿ.ಕಾಂ. ಪದವಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿನಿಯರು ಮೊದಲ ಬಾರಿ ಮತದಾನ ಮಾಡಿ ಸಂತಸ ಹಂಚಿಕೊಂಡರು.
ನಗರ ಒಳಗೊಂಡಂತೆ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಕಾಲೇಜಿಗೆ ಬರುವ ವಿದ್ಯಾರ್ಥಿ ನಿಯರು ಮೇ ೭ರಂದು ಜರುಗಿದ ಲೋಕಸಭಾ ಚುನಾವಣೆಯಲ್ಲಿ ಪ್ರಥಮ ಬಾರಿಗೆ ತಮ್ಮ ಹಕು ಚಲಾಯಿಸುವ ಮೂಲಕ ಹರ್ಷ ವ್ಯಕ್ತಪಡಿಸಿದರು. ಮೊದಲ ಬಾರಿಗೆ ಮತದಾನ ಮಾಡಿರುವುದು ನಮಗೆ ಹಬ್ಬ ಆಚರಿಸಿ ಸಂಭ್ರಮಿಸಿ ದಂತಿದೆ ಎಂದು ಹೇಳಿದರು.
ಮತದಾನ ಮಾಡಿದ ನಂತರ ಸೆಲ್ಫಿ ಬೂತ್‌ಗಳಲ್ಲಿ ಹೆಮ್ಮೆಯಿಂದ ನಿಂತು ನಾನು ಮತ ಹಾಕಿದ್ದೇನೆ. ನೀವು ಮತ ಹಾಕಿ ಎಂದು ಹೇಳಿ, ಮತದಾನದ ಹಕ್ಕನ್ನು ಪಡೆದಿದ್ದು ಹರ್ಷವಾಗಿದೆ ಎಂದು ಪೂಜ, ಧನುಶ್ರೀ, ಖಾತುನ್ ಬಿ ಲೋಹೋರಾ, ಭೂಮಿಕಾ, ಸುಧಾ, ಅಂಕಿತಾ, ರಂಜಿತ, ರಮ್ಯಾ, ಸೇರಿದಂತೆ ಇತರರು ಸಂತಸ ವ್ಯಕ್ತಪಡಿಸಿದರು. ಮೊದಲಬಾರಿ ಮತ ಹಾಕುವ ಅವಕಾಶ ಸಿಕ್ಕಿರುವ ಖುಷಿ ತಂದಿದೆ ಎಂದು ಸುಷ್ಮಾ ಪಾಟೀಲ್ ಹೇಳಿದರು. ಮೊದಲ ಬಾರಿಗೆ ಉತ್ಸಾಹದಿಂದ ವೋಟ್ ಮಾಡಿ ಎಲ್ಲರ ಗಮನ ಸೆಳೆದಿzರೆ.
ಇಲ್ಲಿನ ಮತ್ತೊಂದು ವಿಶೇಷ ಎಂದರೆ ಲೋಕಸಭಾ ಚುನಾವಣೆಯ ಮತಗಟ್ಟೆಯ ಕಾರ್ಯದಲ್ಲಿ ಕಾಲೇಜಿನ ಎನ್.ಎಸ್.ಎಸ್. ಸ್ವಯಂ ಸೇವಕರು ಸೇವೆ ಸಲ್ಲಿಸಿzರೆ. ಇದರಿಂದ ಯಾವುದೇ ಕಾರಣಕ್ಕೂ ಮತದಾನ ಮಾಡುವುದರಿಂದ ವಂಚಿತರಾಗಬಾರದು ಎಂದು ಈ ವಿದ್ಯಾರ್ಥಿನಿಯರು ತಿಳಿಸಿಕೊಟ್ಟಿzರೆ.