ನನ್ನ ವಿರುದ್ಧ ದಾಖಲಾಗಿರುವ ಮೊಕದ್ದಮೆ ಸಂಪೂರ್ಣ ಸುಳ್ಳು :ಗೋ. ರಮೇಶ್ ಗೌಡ

ಶಿವಮೊಗ್ಗ: ನನ್ನ ವಿರುದ್ಧ ಕೋಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಮೊಕದ್ದಮೆ ಸಂಪೂರ್ಣ ಸುಳ್ಳಾಗಿದೆ ಎಂದು ನವ ಕರ್ನಾಟಕ ನಿರ್ಮಾಣ ವೇದಿಕೆ ರಾಜಧ್ಯಕ್ಷ ಗೋ. ರಮೇಶ್ ಗೌಡ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಜು.೫ರಂದು ಕೆಲವು ವಾಟ್ಸಾಪ್ ಗ್ರೂಪ್‌ಗಳಲ್ಲಿ ಯುವತಿ ಸ್ನಾನ ಮಾಡುವ ವೇಳೆ ಚಿತ್ರೀಕರಣ ಮಾಡಲಾಗಿದೆ ಎಂಬ ಸುದ್ದಿ ಹರಿದಾಡಿದೆ. ಇದಕ್ಕೆ ಸಂಬಂಧಿಸಿ ನನ್ನ ಹಾಗೂ ಇನ್ನಿಬ್ಬರ ವಿರುದ್ಧ ದೂರು ದಾಖಲಾಗಿದೆ. ಈ ಸುದ್ದಿಯಲ್ಲಿ ಯಾವುದೇ ಹುರು ಳಿಲ್ಲ ಎಂದು ಸ್ಪಷ್ಟನೆ ನೀಡಿದರು.
ಕಳೆದ ಮೂರು ತಿಂಗಳ ಹಿಂದೆಯೇ ಈ ಘಟನೆ ನಡೆದಿದ್ದು, ನನ್ನನ್ನು ತೇಜೋವಧೆ ಮಾಡಲು ಈ ಪ್ರಕರಣದಲ್ಲಿ ತಳಕುಹಾಕಿದ್ದು, ನನ್ನ ವಿರುದ್ಧ ದಾಖಲಾಗಿರುವ ಮೊಕzಮೆ ಸುಳ್ಳಾಗಿದ್ದು, ಕೋಟೆ ಪೊಲೀಸ್ ಠಾಣೆ ಸಿಪಿಐ ಅವರು ಆರೋಪಿಗಳೊಂದಿಗೆ ಕೈ ಜೋಡಿ ಸಿzರೆ. ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಹಾಗೂ ನನಗೆ ನ್ಯಾಯ ಮತ್ತು ರಕ್ಷಣೆ ನೀಡಬೇಕೆಂದು ಈಗಾಗಲೇ ಜಿ ರಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇನೆ ಎಂದರು.
ನಾನು ಕಳೆದ ಸುಮಾರು ೨೪ ವರ್ಷಗಳಿಂದ ಸಾಮಾಜಿಕ ನ್ಯಾಯ ಕ್ಕಾಗಿ ಹೋರಾಟ ನಡೆಸಿಕೊಂಡು ಬರುತ್ತಿದ್ದು, ನನ್ನ ಹೋರಾಟ ಹತ್ತಿಕ್ಕಲು ನನ್ನ ಹೆಸರನ್ನು ಈ ಪ್ರಕರಣದಲ್ಲಿ ಬಳಸಿದ್ದು ನನಗೆ ಸಾಕಷ್ಟು ಅವಮಾನವಾಗಿರುವುದ ರಿಂದ ಈ ಸುಳ್ಳು ಪ್ರಕರಣಕ್ಕೆ ಕಾರಣ ರಾದವರ ವಿರುದ್ಧ ಮಾನನಷ್ಟಿ ಮೊಕದ್ದಮೆ ಹೂಡಿ ಕಾನೂನು ಹೋರಾಟ ನಡೆಸುತ್ತೇನೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂತೋಷ್, ರಾಜು ನಾಯಕ್ ಇನ್ನಿತರರು ಉಪಸ್ಥಿತರಿದ್ದರು.