ತರಂಗ ಕಿವುಡು ಮಕ್ಕಳ ಶಾಲೆಯಲ್ಲಿ ಶಿಕ್ಷಕರ ದಿನ

taranga

ಭದ್ರಾವತಿ: ನ್ಯೂಟೌನ್ ಶಿವಭದ್ರ ಟ್ರಸ್ಟ್ ( ರಿ ) ವತಿಯಿಂದ ತರಂಗ ಕಿವುಡು ಮಕ್ಕಳ ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಕರ ದಿನಾಚರಣೆ ಆಚರಿಸಲಾಯಿತು.
ಟ್ರಸ್ಟ್‌ನ ಅಧ್ಯಕ್ಷ ಡಾ. ನರೇಂದ್ರ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಅಗಮಿಸಿದ್ದ ಸಹಕಾರ್ಯದರ್ಶಿ ಕೃಷ್ಣ ಉಪಾದ್ಯ ಮಾತನಾಡಿ, ವೃತ್ತಿಪರತೆಯ ಜೊತೆಗೆ ಸಹದ ವಿವಿಧ ಕ್ಷೇತ್ರಗಳಲ್ಲಿ ಸೇವೆಸಲ್ಲಿಸುತ್ತಿರುವವರನ್ನು ಸಹ ಗುರುಗಳೆಂದು ತಿಳಿದು ಅವರ ಆದರ್ಶಗಳನ್ನು ಅನ್ವಹಿಸಿ ಕರ್ತವ್ಯ ನಿರ್ವಹಿಸಿದರೆ ಹೆಚ್ಚಿನ ಸಾಧನೆ ಮಾಡಬಹುದು. ಶಿಕ್ಷಕರು ಮಕ್ಕಳ ಮನಸ್ಥಿತಿ ಯನ್ನು ಅರಿತು ಬೋಧಿಸಿದರೆ ಅದು ಪರಿಣಾಮಕಾರಿ ಬೋಧನೆ ಆಗುತ್ತದೆ ಎಂದರು.
ಸಭೆಯಲ್ಲಿ ಶೀವಭದ್ರ ಟ್ರಸ್ಟ್ ನ ಸದಸ್ಯರುಗಳದ ಡಾ. ವೃಂದಾ ಭಟ್ ಎಸ್.ಎನ್. ಸುಭಾಷ್ , ಡಾ. ಜಿ.ಎಂ ನಟರಾಜ್ , ಹಾಗು ಶಿವರಾಜ್ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ತರಂಗ ಶಾಲಾ ಶಿಕ್ಷಕ ಮತ್ತು ಶಿಕ್ಷಕಿಯರು ಹಾಗೂ ಸಿಬ್ಬಂದಿ ವರ್ಗದವರ ನ್ನು ಶಿವ ಭದ್ರ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು. ಸಹ ಕಾರ್ಯದರ್ಶಿ ಸುಭಾಷ್ ಸ್ವಾಗತಿಸಿ, ನಟರಾಜ್ ವಂದಿಸಿದರು