ಸರ್ಕಾರಿ ನೌಕರರ ಸಂಘಟನೆಯನ್ನು ದುರ್ಬಲಗೊಳಿಸಲು ಕೆಲವರಿಂದ ವ್ಯವಸ್ಥಿತ ಹುನ್ನಾರ: ಬಿ.ಕುಮಾರ್ ಆರೋಪ…

ಹೊನ್ನಾಳಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರ ವಿರುದ್ಧ ಸಾಮಾಜಿಕ ಜಲತಾಣಗಳಲ್ಲಿ ಸುಳ್ಳು ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ರಾಜ್ಯ ಸಂಘಟನಾ ಕಾರ್ಯದರ್ಶಿ ಮತ್ತು ನಿಕಟ ಪೂರ್ವ ಸರ್ಕಾರಿ ನೌಕರರ ಅಧ್ಯಕ ಬಿ.ಕುಮಾರ್ ಒತ್ತಾಯಿಸಿದರು.
ಅವರು ವಿವಿಧ ಸಂಘಗಳ ವತಿಯಿಂದ ತಹಶೀಲ್ದಾರ್ ತಿರುಪತಿ ಪಾಟೀಲ್ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು.
ಸಿ.ಎಸ್.ಷಡಾಕ್ಷರಿ ಅವರು ರಾಜಧ್ಯಕ್ಷರಾದ ಮೇಲೆ ಹಲವಾರು ವರ್ಷಗಳ ಸರ್ಕಾರಿ ನೌಕರರ ಬೇಡಿಕೆಗಳು ಈಡೇರಿದ್ದು ಈ ಎ ಬೆಳವಣಿಗೆಗಳನ್ನು ಸಹಿಸದ ಕೆಲ ವ್ಯಕ್ತಿಗಳು ಸಿ.ಎಸ್. ಷಡಾಕ್ಷರಿ ಅವರನ್ನು ತೇಜೋವಧೆ ಮಾಡಲು ಕುತಂತ್ರ ಮಾಡುತ್ತಿzರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರಿ ನೌಕರರ ಸಂಘದ ಸಂಘಟನೆಯನ್ನು ದುರ್ಬಲ ಗೊಳಿಸುವ ಹುನ್ನಾರದಿಂದ ಸಂಘಟನೆ ವಿರೋಧಿ ೫ ಜನ ನೌಕರರು ರಾಜ್ಯ, ಜಿ, ತಾಲ್ಲೂಕು ಮತ್ತು ಯೋಜನಾ ಶಾಖೆಯ ಸಂಘಟನೆಗಳ ಹಾಗೂ ರಾಜ್ಯ, ಜಿ, ತಾಲ್ಲೂಕು ಘಟಕಗಳ ಅಧ್ಯಕ್ಷರುಗಳ ವಿರುದ್ಧ ಸತ್ಯಕ್ಕೆ ದೂರವಾದ ಆರೋಪಗಳನ್ನು ಮಾಡಿರುವುದಲ್ಲದೇ ದೂರಿನ ಪ್ರತಿಗಳನ್ನು ಸಾಮಾಜಿಕ ಜಲತಾಣ ಗಳಲ್ಲಿ ಹರಿಬಿಟ್ಟು ಸಂಘಟನೆಗೆ ಮತ್ತು ಪದಾಧಿಕಾರಿಗಳ ಘನತೆಗೆ ಕೆಟ್ಟ ಹೆಸರು ಬರುವ ಕೆಲಸವನ್ನು ಮಾಡುತ್ತಿರುವುದು ಖಂಡನೀಯವೆಂದರು.
ಷಡಾಕ್ಷರಿಯವರು ಅಧ್ಯಕ್ಷರಾದ ಮೇಲೆ ಅತ್ಯಂತ ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿರುವ ಹಿನ್ನೆಲೆಯಲ್ಲಿ ಇಂದು ನಮ್ಮ ಸಂಘವು ರಾಷ್ಟ್ರದ ಲ್ಲಿಯೇ ಮಾದರಿ ಸಂಘ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.
ನೌಕರರ ೩೬ಕ್ಕೂ ಹೆಚ್ಚು ಬೇಡಿಕೆಗಳನ್ನು ಸರ್ಕಾರದ ಮೇಲೆ ಕಾಲಕಾಲಕ್ಕೆ ಒತ್ತಡ ಹೇರಿ ಬೇಡಿಕೆಗಳು ಜರಿಯಾಗುವವ ರೆಗೂ ಹಗಲಿರುಳು ಶ್ರಮವಹಿಸಿzರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವನ್ನು ಮತ್ತು ರಾಜಧ್ಯಕ್ಷರನ್ನು ಗುರಿಯಾಗಿರಿಸಿ ಕೊಂಡು ನಕಲಿ ದಾಖಲೆಗಳನ್ನು ಸೃಷ್ಟಿಸಿ ಸಂಘಕ್ಕೆ ಆಡಳಿತಾಧಿಕಾರಿಗಳನ್ನು ನೇಮಿಸುವಂತೆ ಒತ್ತಡ ತರುತ್ತಿzರೆ. ಈ ಕೂಡಲೇ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಅಧೀನ ಕಾರ್ಯ ದರ್ಶಿ ಶಾಂತಾರಾಮ್, ಸರ್ಕಾರದ ಸಚಿವಾಲಯದ ಶಾಖಾಧಿಕಾರಿ ಗುರುಸ್ವಾಮಿ, ರಾಯಚೂರಿನ ಜನುವಾರಿನ ಅಭಿವೃದ್ಧಿ ಅಧಿಕಾರಿ ಎಂ. ಮೆಹಬೂಬ್ ಬಾಷಾ, ರಾಮನಗರದ ಅವ್ವೇರಹಳ್ಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ನಿಂಗೇಗೌಡ್ರು ಇವರುಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ನೂತನ ಅಧ್ಯಕ್ಷ ಆರ್.ಎಸ್. ಪಾಟೀಲ್, ಗೌರವಾಧ್ಯಕ್ಷ ಕೆ.ಬಿ. ಮುರುಗೇಶಪ್ಪ, ಕಾರ್ಯದರ್ಶಿ ಎಚ್.ಬಿ.ರವಿ, ನಿರ್ದೇಶಕರಾದ ಮಂಜುನಾಥ್ ಇಂಗಳಗೊಂದಿ, ಟಿ.ಪಿ.ರವಿ, ಸುರೇಶ್ ಮಾಳ್ಗಿ, ಹೊಸಕೇರಿ ಸಿದ್ದಪ್ಪ, ಎಂ.ಎಚ್. ಕೋಟ್ಯಪ್ಪ, ಕುಮಾರ್ ನಾಯ್ಕ್, ಖಜಂಚಿ ಮಹೇಂದ್ರಕುಮಾರ್ ಮತ್ತು ತಾಲ್ಲೂಕು ಕಚೇರಿ ನೌಕರರು ಉಪಸ್ಥಿತರಿದ್ದರು.