ಡಿಎಸ್‌ಎಸ್‌ನಿಂದ ಕಾಂಗ್ರೆಸ್‌ಗೆ ಬೆಂಬಲ: ಚಿನ್ನಯ್ಯ

ಶಿವಮೊಗ್ಗ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಮಹಾತ್ಮ ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ರಾಜ್ಯ ಸಂಘದ ನಿರ್ಣಯದಂತೆ ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿ ಸುತ್ತದೆ ಎಂದು ಸಮಿತಿಯ ಮುಖಂಡ ಭದ್ರಾವತಿ ಸತ್ಯ ಮತ್ತು ಜಿಲ್ಲಾ ಸಂಚಾಲಕ ಚಿನ್ನಯ್ಯ ಜೆಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಬಿಜೆಪಿ ಸುಳ್ಳು ಭರವಸೆಗಳನ್ನು ನೀಡಿದೆ. ಅಂಬೇಡ್ಕರ್ ಅವರ ಸಂವಿಧಾನವನ್ನೇ ಬದಲಾಯಿಸಿ ಆರ್‌ಎಸ್‌ಎಸ್ ಅಜೆಂಡಾವನ್ನು ಜರಿಮಾಡಲು ಹೊರಟಿದೆ. ಅಗತ್ಯ ವಸ್ತುಗಳ ಬೆಲೆಯನ್ನು ಏರಿಸಿದೆ. ಜಿಎಸ್ಟಿ ಹೆಸರಿನಲ್ಲಿ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಿದೆ. ಅಭಿವೃದ್ದಿ ಮಾಡದೆ ಕೇವಲ ಶೇ.೪೦ರಷ್ಟು ಕಮಿಷನ್ ಹಣ ಲೂಟಿ ಮಾಡಿದೆ. ಧರ್ಮ ಗಳ ನಡುವೆ ದ್ವೇಷ ಬಿತ್ತಿದೆ. ದಲಿತರ ಮೇಲೆ ದೌರ್ಜನ್ಯ ತಡಯುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು.
ಮೀಸಲಾತಿ ವಿಷಯದಲ್ಲೂ ಅಷ್ಟೆ. ಶೇ.೫೦ಕ್ಕಿಂತಲೂ ಮೀಸ ಲಾತಿ ಹೆಚ್ಚಿಸಬಾರದು ಎಂಬ ಸುಪ್ರೀಂ ಕೋರ್ಟಿನ ಆದೇಶವಿ ದ್ದರೂ ಕೂಡ ಮೀಸಲಾತಿ ಪ್ರಮಾಣ ಹೆಚ್ಚಿಸಿರುವು ದಾಗಿ ಸುಳ್ಳು ಹೇಳುತ್ತಿದೆ. ಯಾವುದೇ ಸಮೀಕ್ಷೆ ಅಧ್ಯಯನ ವರದಿ ಇಲ್ಲ ದಂತೆ ತನಗಿಷ್ಟ ಬಂದಂತೆ ಮೀಸ ಲಾತಿ ವಿಂಗಡಿಸಿ ಕೇಂದ್ರಕ್ಕೆ ಶಿಫಾ ರಸು ಮಾಡಿದೆ. ಜೊತೆಗೆ ಪರಿಶಿ ಷ್ಟರ ವಿದ್ಯಾರ್ಥಿ ವೇತನವನ್ನು ಕಸಿದು ಕೊಂಡಿದೆ. ನಮ್ಮ ಸಮಾ ಜದ ಕೆಲವು ನಾಯಕರು ಬಿಜಪಿಗೆ ಹೋಗಿದ್ದರೂ ಕೂಡ ಗುಲಾಮ ರಂತೆ ಇದ್ದಾರೆ.
ಈ ಎಲ್ಲಾ ಕಾರಣಗಳಿಂದ ಬಿಜೆಪಿಯನ್ನು ಕರ್ನಾಟಕದಿಂದಲೇ ದೂರ ಮಾಡಬೇಕು ಎಂದು ನಾವು ಈ ಬಾರಿ ಪ್ರಜಪ್ರಭುತ್ವದ ಉಳಿವಿಗಾಗಿ ಕಾಂಗ್ರೆಸ್ ಪಕ್ಷಕ್ಕೆ ಬೇಷರತ್ ಬೆಂಬಲ ಸೂಚಿಸಿದ್ದೇವೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಸಮಿತಿಯ ಪ್ರಮುಖರಾದ ಗುರುರಾಜ್, ಈಶ್ವರಪ್ಪ, ರಾಜಕುಮಾರ್, ಬಂಗಾರಪ್ಪ ನಿಟ್ಟಕ್ಕಿ, ಮುರುಳೀಧರ್, ರವಿ ಜಂಬಗಾರ್, ಲಕ್ಷ್ಮಣ್ ಮುಂತಾದವರಿದ್ದರು.