ಮತ ವಿಭಜನೆಗೆ ಅವಕಾಶ ಕೊಡದೆ ಜೆಡಿಎಸ್ ಬೆಂಬಲಿಸಿ…

ಶಿವಮೊಗ್ಗ: ಮತಗಳನ್ನು ವಿಭಜನೆ ಮಾಡಿ ಕೋಮುವಾದಿ ಬಿಜೆಪಿ ಪಕ್ಷಕ್ಕೆ ಅನುಕೂಲವಾಗುವಂತೆ ಮಾಡದೆ ಏಕಪಕ್ಷೀಯವಾಗಿ ಜೆಡಿಎಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಅವರನ್ನು ಬೆಂಬಲಿಸಿ ಅತಿಹೆಚ್ಚು ಬಹುಮತದಿಂದ ಆಯ್ಕೆ ಮಾಡುವ ಮೂಲಕ ಶಿವಮೊಗ್ಗ ನಗರವನ್ನು ಶಾಂತಿಯತ್ತ ಕೊಂಡೊಯ್ಯುವಂತೆ ರಾಜ್ಯ ಜತ್ಯತೀತ ಜನತಾದಳದ ಕಾರ್ಯದರ್ಶಿ ಆರ್.ಎ. ಚಾಬೂಸಾಬ್ ಅಲ್ಪಸಂಖ್ಯಾತ ಬಂಧುಗಳಲ್ಲಿ ಸುದ್ದಿಗೋಷ್ಟಿಯಲ್ಲಿ ಮನವಿ ಮಾಡಿಕೊಂಡಿzರೆ.
ಶಿವಮೆಗ್ಗ ವಿಧಾನಸಭಾ ಕ್ಷೇತ್ರದಲ್ಲಿ ಜನ ನೆಮ್ಮದಿಯಿಂದಿರಲು ಹಾಗೂ ಶಾಂತಿ ಕಾಪಾಡಲು ಈ ಬಾರಿ ಆಯನೂರು ಮಂಜುನಾಥರನ್ನು ಗೆಲ್ಲಿಸುವಂತೆ ಮನವಿ ಮಾಡಿದರು. ದೇಶದ ನಾಲ್ಕು ಸದನಗಳಿಂದ ಸೇವೆ ಸಲ್ಲಿಸಿರುವ ಆಯನೂರು ಮಂಜುನಾಥ್ ಇವರಿಗೆ ಶಿವಮೊಗ್ಗ ನಗರದ ಜನತೆ ಮತ ನೀಡುವ ಮೂಲಕ ಶಾಂತಿಯುತ ಶಿವಮೆಗ್ಗ ನಗರವನ್ನು ನಿರ್ಮಿಸಬೇಕಾಗಿದೆ. ನಗರದಲ್ಲಿ ನಡೆದ ಗಲಭೆಗಳಲ್ಲಿ ಅಲ್ಪಸಂಖ್ಯಾತರಿಗೆ ಅತಿಹೆಚ್ಚಾಗಿ ಅಭದ್ರತೆ ಕಾಡಿತ್ತು. ಮತ್ತೆ ಅದೇ ಪರಿಸ್ಥಿತಿ ಮರುಕಳಿಸಬಾರದು ಎಂದರೆ ಅಲ್ಪ ಸಂಖ್ಯಾತರ ಮತಗಳು ಧ್ರುವೀಕರಣವಾಗದಂತೆ ಎಚ್ಚರವಹಿಸಬೇಕಾಗಿದೆ ಎಂದರು.
ಆಯನೂರು ಮಂಜುನಾಥ್ ತಮ್ಮ ರಾಜಕೀಯ ಜೀವನದ ಆರಂಭದಿಂದಲೂ ಅಲ್ಪಸಂಖ್ಯಾತರೊಂದಿಗೆ ಉತ್ತಮ ಬಾಂಧವ್ಯ ಹೊಂದಿzರೆ. ಕಳೆದ ೨೫ ವರ್ಷಗಳ ಹಿಂದೆ ಬಿಜೆಪಿ ಪಕ್ಷದಿಂದ ಹೊಸನಗರ ಕ್ಷೇತ್ರದ ಶಾಸಕರಾಗಿದ್ದ ಆಯನೂರು ಮಂಜುನಾಥ್ ಕ್ಷೇತ್ರದ ಮಸೀದಿ ಮತ್ತು ಮದರಸಾಗಳಿಗೆ ನೆರವು ನೀಡಿzರೆ. ಜೆಡಿಎಸ್ ಪಕ್ಷ ಅಲ್ಪಸಂಖ್ಯಾತರ ಪರವಾಗಿ ನಿಂತಿದೆ. ಜತಿ ಭೇದವಿಲ್ಲದೆ ಕೆಲಸ ಮಾಡುತ್ತಿರುವ ಆಯನೂರು ಮಂಜುನಾಥ್, ಶಿವಮೆಗ್ಗ ನಗರದಲ್ಲಿ ಭಯದ ವಾತಾವರಣದಲ್ಲಿ ನೇತಾರನ ಅವಶ್ಯಕತೆ ಇರುವುದರಿಂದ ಆಯನೂರು ಮಂಜುನಾಥ್ ಅವರನ್ನು ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಬೇಕೆಂದು ಮನವಿ ಮಾಡಿಕೊಂಡರು.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಆಯನೂರು ಶಿವಾನಾಯ್ಕ, ಜಿ ಉಪಾಧ್ಯಕ್ಷ ಜಿ.ಎಸ್ ವರದರಾಜ್, ಮುಖಂಡರಾದ ವೈ.ಹೆಚ್. ನಾಗರಾಜ್, ಎಸ್.ವಿ ರಾಜಮ್ಮ, ಸಯ್ಯದ್ ಇಬ್ರಾಹಿಂ ಉಪಸ್ಥಿತರಿದ್ದರು.