ಯಶಸ್ವಿಯಾಗಿ ಜರುಗಿದ ಕನ್ನಂಗಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ…

BASAVANAGADDE-SCHOOL1

ತೀರ್ಥಹಳ್ಳಿ: ಕನ್ನಂಗಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯನ್ನು ತಾಲೂಕಿನ ಬಸವನಗದ್ದೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಯಶಸ್ವಿಯಾಗಿ ನೆರವೇರಿಸ ಲಾಯಿತು. ತೀರ್ಥಹಳ್ಳಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ವೈ. ಗಣೇಶ್, ಹಣಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಘವೇಂದ್ರ ಕೆರೆಹಳ್ಳಿ, ಕೊಡುಗೈದಾನಿಗಳಾದ ಬಿ.ಟಿ. ಸತೀಶ್ ಕುಮಾರ್, ಬಿ.ಟಿ ಪ್ರಸನ್ನಕುಮಾರ್, ಸದಸ್ಯರಾದ ಸರೋಜ ಈಶ್ವರ್, ಎಸ್‌ಡಿಎಮ್‌ಸಿ ಅಧ್ಯಕ್ಷ ಚಂದ್ರ ಕೆ.ಬಿ ಅವರು ಜ್ಯೋತಿ ಬೆಳಗುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಮಂಡಗz ಹೋಬಳಿ ಶಿಕ್ಷಣ ಸಂಯೋಜಕರಾದ ಜ್ಯೋತಿ ಪ್ರಾಸ್ತವಿಕ ನುಡಿ ನುಡಿದರು. ಬಿಇಒ ಗಣೇಶ್ ಅವರು ಮಾತನಾಡಿ, ಮಕ್ಕಳಲ್ಲಿ ವಿದ್ಯೆಯ ಜೊತೆಗೆ ಸಂಸ್ಕಾರವನ್ನು ಬೆಳೆಸುವಲ್ಲಿ ಶಿಕ್ಷಕರೊಂದಿಗೆ ಪೋಷಕರ ಪಾತ್ರವೂ ಇದೆ ಎಂದ ಅವರು, ಗ್ರಾಮ್ಥರು ಮತ್ತು ದಾನಿಗಳ ನೆರವು ಮತ್ತು ಸಹಕಾರದೊಂದಿಗೆ ಈ ಪುಟ್ಟ ಶಾಲೆಯಲ್ಲಿ ಕಾರ್ಯಕ್ರಮವನ್ನು ಅತ್ಯುತ್ತಮವಾಗಿ ಆಯೋಜಿಸಿದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.


ಸಾಲೇಕೊಪ್ಪ ರಾಮಚಂದ್ರ ಅವರು ಗ್ರಾಮಸ್ಥರ ದಾನಿಗಳ ಸಹಕಾರವನ್ನು ಶ್ಲಾಸಿದರು. ಕೆರೆಹಳ್ಳಿ ರಾಘವೇಂದ್ರ ರವರು ತಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾಲೆಯಲ್ಲಿ ಬಸವನಗz ಶಾಲೆ ಗ್ರಾಮಸ್ಥರು ವಿಶೇಷವಾದ ಸ್ಥಾನ ಹೊಂದಿದೆ. ಇಲ್ಲಿಯ ಜನರ ಒಗ್ಗಟ್ಟು ಸಹಕಾರ ಕಾರ್ಯಕ್ರಮದ ಅಚ್ಚುಕಟ್ಟುತನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸ್ಪರ್ಧೆಯಲ್ಲಿ ಭಾಗವ ಹಿಸಿದ ಹಾಗೂ ವಿಜೇತರಾದ ಮಕ್ಕಳಿಗೆ ಆಕರ್ಷಕ ಬಹುಮಾನ ನೀಡಲಾಯಿತು.
ಶಾಲಾ ಆವರಣದಲ್ಲಿ ಆಕರ್ಷಕವಾದ ಕುಟೀರಗಳ ನಿರ್ಮಾಣ ಮಾಡಿದ್ದು, ಎಸ್ ಡಿಎಮ್ ಸಿ ಸದಸ್ಯರು ಮತ್ತು ಗ್ರಾಮಸ್ಥರ ಶ್ರಮ ಎದ್ದು ಕಾಣುತ್ತಿತ್ತು.
ಕಾರ್ಯಕ್ರಮದಲ್ಲಿ ಕೆರೆಹಳ್ಳಿ ರಾಮಪ್ಪ, ಲೋಕೆಶ್, ಕಲ್ಲುಕೊಪ್ಪ ಹಣಗೆರೆ ಗ್ರಾಪಂ ಸದಸ್ಯರಾದ ಅಶೋಕ್ ಕಿರುವಾಸೆ ಯಶೋಧ ಸುರೇಶ್, ಸುಧೀರ್ ಸಂಕ್ಲಾಪುರ ಸರೋಜಕಳ್ಳಿಗz ಶ್ರೀನಿವಾಸ ಹಾಗೂ ಕನ್ನಂಗಿ ಗ್ರಾಮಪಂಚಾಯಿತಿ ಅಧ್ಯಕ್ಷರಾದ ಸುಪ್ರೀತಾ ವಿಶ್ವನಾಥ್ ಉಮೇಶ್ ವನಜಕ್ಷಿ ಉಪಸ್ಥಿತರಿದ್ದು ಪ್ರಶಸ್ತಿ ಪ್ರದಾನ ಮಾಡಿದರು.
ಶಾಲೆ ಪ್ರಾರಂಭವಾಗಿ ೬೨ ವರ್ಷವಾಗಿದ್ದು ಅದರ ಪ್ರಯುಕ್ತ ಅದ್ದೂರಿ ಪ್ರತಿಭಾ ಕಾರಂಜಿಯನ್ನು ಆಯೋಜಿಸಲಾಗಿತ್ತು. ೨೦೨೩-೨೪ನೇ ಸಾಲಿನ ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ಬಸವನಗz ಶಾಲೆಯು ತಾಲೂಕು ಮಟ್ಟದ ಉತ್ತಮ ಶಾಲೆ ಪ್ರಶಸ್ತಿಗೆ ಭಾಜನರಾಗಿದ್ದು , ಮಾಜಿ ಗೃಹ ಸಚಿವ ಹಾಗೂ ಹಾಲಿ ಶಾಸಕರಾದ ಆರಗ eನೇಂದ್ರ ಅವರು ಪ್ರಶಸ್ತಿ ಪ್ರಧಾನ ಮಾಡಿದರು.
ಕ್ರಿಯಾಶೀಲ ಮುಖ್ಯಶಿಕ್ಷಕಿ ಅನಿತಾ ಅವರು ಎಲ್ಲರನ್ನು ವಿಶ್ವಾಸದಿಂದ ಒಗ್ಗೂಡಿಸಿ, ದಾನಿಗಳಿಂದ, ಗ್ರಾಮ ಪಂಚಾಯಿತಿ ಅನುದಾನದಿಂದ ಶಾಲೆಯ ಅಭಿವೃದ್ಧಿ ಮಾಡುಡುವ ಜೊತೆಗೆ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಸರ್ವರ ಮೆಚ್ಚುಗೆಗೆ ಪಾತ್ರರಾಗಿzರೆ ಎಂದು ಗ್ರಾಮಸ್ಥರು, ಎಸ್‌ಡಿಎಮ್‌ಸಿ ಸದಸ್ಯರು, ದಾನಿಗಳು ಸಂತಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಆಗಮಿಸಿದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಅಧ್ಯಕ್ಷರಾದ ಜಯಂತಿ, ಉಪಾಧ್ಯಕ್ಷರಾದ ಮೂಕಾಂಬಿಕಾ ನಿರ್ದೇಶಕರಾದ ವಸಂತಿ ಆನಂದ್ ಕುಮಾರ್ ಶುಭಕೋರಿದರು.
ಕಾರ್ಯಕ್ರಮದಲ್ಲಿ ದಾನಿಗಳನ್ನು ಮುಖ್ಯ ಅತಿಥಿಗಳನ್ನು ಸನ್ಮಾನಿಸಲಾಯಿತು. ಸರ್ವರಿಗೂ ಭೋಜನದ ವ್ಯವಸ್ಥೆ ಮಾಡಲಾಗಿತ್ತು.
ಮುಖ್ಯ ಶಿಕ್ಷಕಿಯಾದ ಅನಿತಾ ಸರ್ವರನ್ನು ಸ್ವಾಗತಿಸಿದರು. ಸಿಆರ್‌ಪಿ ಉಮೇಶ್ ಕಾರ್ಯಕ್ರಮ ನಿರೂಪಿಸಿದರು. ಸಹಶಿಕ್ಷಕ ಚಂದ್ರನಾಯ್ಕ್ ರವರು ವಂದಿಸಿದರು.