ದಾವಣಗೆರೆ – ಶಿವಮೊಗ್ಗದಲ್ಲಿ ಮೊದಲ ದಿನ ಐವರು ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

1

ದಾವಣಗೆರೆ/ ಶಿವಮೊಗ್ಗ: ಲೋಕಸಭೆಗೆ ಸಾರ್ವತ್ರಿಕ ಚುನಾವಣೆ ನಡೆಯು ತ್ತಿದ್ದು ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಏ.೧೨ ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು ಮೊದಲ ದಿನ ೫ ಅಭ್ಯರ್ಥಿಗಳಿಂದ ೬ ನಾಮ ಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿ ಚುನಾವಣಾಧಿಕಾರಿ ಡಾ. ವೆಂಕಟೇಶ್ ಎಂ.ವಿ. ತಿಳಿಸಿzರೆ.
ಕಾಂಗ್ರೆಸ್ ಪಕ್ಷದಿಂದ ಡಾ| ಪ್ರಭಾ ಮಲ್ಲಿಕಾರ್ಜುನ್ ಎರಡು ನಾಮಪತ್ರ, ತಿಪ್ಪೇಸ್ವಾಮಿ ಕೆ.ಎ ಸೋಷಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮುನಿಸ್ಟ್), ಉತ್ತಮ ಪ್ರಜಕೀಯ ಪಕ್ಷದಿಂದ ಈಶ್ವರ, ಕೆ.ಆರ್.ಎಸ್. ಪಕ್ಷದಿಂದ ರಾಘವೇಂದ್ರ ಜಿ.ಪಿ ಹಾಗೂ ಪಕ್ಷೇತರರಾಗಿ ವಿನಯ್‌ಕುಮಾರ್ ಜಿ.ಬಿ ನಾಮಪತ್ರ ಸಲ್ಲಿಸಿzರೆ.
ಶಿವಮೊಗ್ಗ ವರದಿ:
ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಮೊದಲ ದಿನವಾದ ಏ.೧೨ ರಂದು ಒಟ್ಟು ೬ ನಾಮಪತ್ರ ಸಲ್ಲಿಕೆ ಆಗಿವೆ.
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಎಸ್.ಕೆ.ಪ್ರಭು, ಎಎಪಿ ಪಕ್ಷದಿಂದ ಸುಭಾನ್ ಖಾನ್, ಉತ್ತಮ ಪ್ರಜಕೀಯ ಪಕ್ಷದ ಅಭ್ಯರ್ಥಿಯಾಗಿ ಅರುಣ ಕೆ.ಎ, ಪಕ್ಷೇತರ ಅಭ್ಯರ್ಥಿಗಳಾಗಿ ಕೆ.ಎಸ್. ಈಶ್ವರಪ್ಪ ಮತ್ತು ರವಿಕುಮಾರ್ ಎಸ್ ನಾಮಪತ್ರ ಸಲ್ಲಿಸಿದರು. ಪಕ್ಷೇತರ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಪರವಾಗಿ ಸೂಚಕರು ಸಲ್ಲಿಸಿದ ನಾಮಪತ್ರ ಸೇರಿದಂತೆ ಇಂದು ಐದು ಅಭ್ಯರ್ಥಿಗಳಿಂದ ಒಟ್ಟು ೬ ನಾಮಪತ್ರಗಳು ಸಲ್ಲಿಕೆಯಾಗಿವೆ.