ಎನ್‌ಎಸ್‌ಎಸ್ ಚಟುವಟಿಕೆಯಿಂದ ವಿದ್ಯಾರ್ಥಿಗಳು ಹೊರಗೆ ಉಳಿಯಬಾರದು :ಶಾಸಕ ಬೇಳೂರು
ಸಾಗರ : ಎನ್‌ಎಸ್‌ಎಸ್ ವಿದ್ಯಾರ್ಥಿಗಳಲ್ಲಿ ಸೇವಾ ಮನೋ ಭಾವ ಹಾಗೂ ಶಿಸ್ತು ರೂಢಿಸುತ್ತದೆ. ಎನ್.ಎಸ್.ಎಸ್. ಚಟುವಟಿಕೆ ಯಿಂದ ವಿದ್ಯಾರ್ಥಿಗಳು ಹೊರಗೆ ಉಳಿಯಬಾರದು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿ ದರು.
ತಾಲ್ಲೂಕಿನ ಬರೂರು ಕಲ್ಕೊ ಪ್ಪದಲ್ಲಿ ಭಾನುವಾರ ಶ್ರೀಮತಿ ಇಂದಿರಾಗಾಂಧಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವತಿಯಿಂದ ಆಯೋಜಿಸಿರುವ ಏಳು ದಿನಗಳ ರಾಷ್ಟ್ರೀಯ ಸೇವಾ ಯೋಜನಾ ಶಿಬಿರವನ್ನು ಉದ್ಘಾ ಟಿಸಿ ಅವರು ಮಾತನಾಡುತ್ತಿದ್ದರು.
ಎನ್.ಎಸ್.ಎಸ್. ಶ್ರಮಜೀವ ನದ ಮಹತ್ವವನ್ನು ವಿದ್ಯಾರ್ಥಿಗಳು ಅರಿತುಕೊಳ್ಳುವಂತೆ ಮಾಡುತ್ತದೆ. ನಗರ ಪ್ರದೇಶಕ್ಕೆ ಸೀಮಿತವಾಗಿ ರುವ ಮನಸ್ಥಿತಿಯನ್ನು ಗ್ರಾಮೀಣ ಬದುಕಿನತ್ತ ಚಿಂತಿಸುವಂತೆ ಮಾಡು ವಲ್ಲಿ ಇಂತಹ ಶಿಬಿರಗಳು ಪ್ರಮು ಖಪಾತ್ರ ವಹಿಸುತ್ತದೆ. ವಿದ್ಯಾರ್ಥಿ ಗಳ ವ್ಯಕ್ತಿತ್ವ ವಿಕಸನಕ್ಕೆ ಪೂರಕ ವಾಗಿರುವ ಚಟುವಟಿಕೆಗಳು ವಿದ್ಯಾಭ್ಯಾಸ ಸಂದರ್ಭದಲ್ಲಿ ಸಿಗು ತ್ತದೆ. ಪದವಿ ಹಂತದಲ್ಲಿ ವಿದ್ಯಾರ್ಥಿ ಗಳಿಗೆ ಸಾಕಷ್ಟು ಕಲಿತು ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಲು ಅವಕಾಶ ಇರುತ್ತದೆ. ಇಂತಹದ್ದನ್ನು ವಿದ್ಯಾ ರ್ಥಿಗಳು ಕಳೆದುಕೊಳ್ಳಬಾರದು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾ ರ್ಯೆ ಡಾ. ರಾಜೇಶ್ವರಿ ಎಚ್. ರಾಷ್ಟ್ರೀಯ ಸೇವಾ ಯೋಜನೆ ಮೂಲಕ ಗ್ರಾಮೀಣ ಜನರ ಬದುಕು ಮತ್ತು ಜೀವನ ಪದ್ದತಿ ಯನ್ನು ಅರಿತುಕೊಳ್ಳಲು ಸಾಧ್ಯ. ವಿದ್ಯಾರ್ಥಿನಿಯರು ಶ್ರಮದಾನದ ಮೂಲಕ ಸ್ವಚ್ಚಭಾರತ ಕಲ್ಪನೆ ಯನ್ನು ಗ್ರಾಮೀಣ ಪ್ರದೇಶದಲ್ಲಿ ಮಾಡಲು ಅವಕಾಶ ಇರುತ್ತದೆ. ಏಳು ದಿನಗಳ ಶಿಬಿರದಲ್ಲಿ ವಿದ್ಯಾ ರ್ಥಿನಿಯರಿಗೆ ವಿವಿಧ ವಿಷಯ ಕುರಿತು ಅರಿತು ಮೂಡಿಸಲಾ ಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬರೂರು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಚಂದಮ್ಮ, ಉಪಾಧ್ಯಕ್ಷ ರಮೇಶ್, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ರುದ್ರಪ್ಪ, ಲೋಕೇಶಪ್ಪ, ಅರ್ಪಿತಾ ಪಾಟೀಲ್, ಡಾ. ಶಿವಾನಂದ್ ಭಟ್, ಮಹಾಬಲೇಶ್ವರ ಕೆ.ಎನ್., ಇನ್ನಿತರರು ಹಾಜರಿದ್ದರು. ಶಾಲಿನಿ ಸ್ವಾಗತಿಸಿದರು. ಡಾ. ಸೋಮ ಶೇಖರ್ ಬಿ. ಪ್ರಾಸ್ತಾವಿಕ ಮಾತ ನಾಡಿದರು. ಡಾ. ರಮೇಶ್ ವಂದಿ ಸಿದರು. ಸಿಂಚನ ಎಂ. ನಿರೂಪಿ ಸಿದರು.