ಹೊನ್ನಾಳಿ: ಪಟ್ಟಣದ ತುಂಗಭದ್ರಾ ಬಡಾವಣೆಯ ಉತ್ತರ ಭಾಗದಲ್ಲಿರುವ ಸಮುದಾಯ ಶೌಚಾಲಯವನ್ನು ಸಾರ್ವಜನಿಕರ ಬಳಕೆಗಾಗಿ ವ್ಯವಸ್ಥೆ ಮಾಡಲಾಗಿದೆ ಎಂದು ಪುರಸಭೆಯ ಕಿರಿಯ ಆರೋಗ್ಯ ನಿರೀಕ್ಷಕ ಬಿ.ಜಿ. ಹರ್ಷವರ್ಧನ್ ತಿಳಿಸಿದರು.
ಅವರು ಪಟ್ಟಣದ ತುಂಗಭದ್ರಾ ಬಡಾವಣೆಯ ಸಮುದಾಯ ಭವನದ ಅಕ್ಕ-ಪಕ್ಕದಲ್ಲಿ ಬೆಳೆದಿದ್ದ ಗಿಡ-ಗಂಟಿಗಳನ್ನು ತೆರವುಗೊಳಿಸಿ ಸಾರ್ವಜನಿಕರಿಗೆ ಮಾಹಿತಿ ನೀಡಿದರು.
ಸಮುದಾಯ ಭವನದ ಸುತ್ತಮುತ್ತಲೂ ಕಾಲ-ಕಾಲಕ್ಕೆ ಸ್ವಚ್ಛತೆಗೊಳಿಸಿ ಸಾರ್ವಜನಿಕರ ಬಳಕೆಗೆ ವ್ಯವಸ್ಥೆ ಮಾಡಲಾಗುತ್ತಿದೆ. ಈ ಭಾಗದ ಸಾರ್ವಜನಿಕರು ಬಯಲು ಶೌಚಕ್ಕೆ ಹೋಗುತ್ತಿzರೆ ಎಂದು ದೂರುಗಳು ಬರುತ್ತಿದ್ದು ಸಾರ್ವಜನಿಕರು ಬಯಲು ಶೌಚ ಮಾಡದೇ ಕಡ್ಡಾಯವಾಗಿ ಸಮುದಾಯದ ಶೌಚಾಲಯವನ್ನು ಬಳಸಬೇಕೆಂದು ಮನವಿ ಮಾಡಿದರು.
ಹೊನ್ನಾಳಿ ಪಟ್ಟಣವನ್ನು ಈಗಾಗಲೇ ಬಯಲು ಶೌಚ ಮುಕ್ತ ನಗರವೆಂದು ಎಂದು ಘೋಷಣೆ ಮಾಡಲಾಗಿದ್ದು ಬಯಲು ಶೌಚ ಮಾಡುವುದು ಕಂಡು ಬಂದರೆ ಸೂಕ್ತ ಕಾನೂನು ಕ್ರಮ ತೆಗೆದು ಕೊಳ್ಳುವುದರ ಜೊತೆಗೆ ಭಾರಿ ಮೊತ್ತದ ದಂಡವನ್ನೂ ಸಹ ವಿಧಿಸಲಾಗುವುದು ಎಂದು ಎಚ್ಚರಿಸಿದರು.