ಮೊಬೈಲ್‌ನಿಂದ ದೂರವಿದ್ದು, ಶಾಲೆ ಪಾಠದ ಕಡೆ ಗಮನಕೊಡಿ…
ದಾವಣಗೆರೆ: ಮಕ್ಕಳು ಮೊಬೈಲ್‌ನಿಂದ ಹೊರ ಬಂದು ಶಾಲೆಗಳಲ್ಲಿ ಶಿಕ್ಷಕರು ಕಲಿಸುವ ಪಾಠಗಳನ್ನು ಆಸಕ್ತಿಯಿಂದ ಕೇಳಿ ಅರ್ಥ ಮಾಡಿಕೊಂಡು ಮನೆಯಲ್ಲಿ ಪುನರಾವರ್ತನೆ ಮಾಡಿಕೊಳ್ಳುವುದ ರಿಂದ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸಿ ಶಾಲೆಗೆ ಉತ್ತಮ ಫಲಿತಾಂಶ ತರಲು ಸಾಧ್ಯ ಎಂದು ಸಂತ ಪೌಲರ ಸಂಸ್ಥೆ ವ್ಯವಸ್ಥಾಪಕಿ ಸಿಸ್ಟರ್ ಮಾರ್ಜರಿ ಹೇಳಿದರು.
ಇಲ್ಲಿನ ಪಿ.ಜೆ.ಬಡಾವಣೆಯ ಸೆಂಟ್ ಪಾಲ್ಸ್ ಕಾನ್ವೆಂಟ್ ಶಾಲೆಯ ೨೦೨೩-೨೪ನೇ ಸಾಲಿನ ಶಾಲೆ ಆರಂಭ ಹಾಗೂ ನೂತನ ಸಿಸ್ಟರ್ ಗಳಿಗೆ, ವಿದ್ಯಾರ್ಥಿನಿಯರಿಗೆ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಿಮ್ಮ ತಂದೆ ತಾಯಿ ಕಷ್ಟಪಟ್ಟು ನಿಮ್ಮನ್ನು ಓದಿಸುತ್ತಿzರೆ. ಟ್ಯೂಷನ್‌ಗೆ ಎಂದು ನೀವುಗಳು ಸಮಯವನ್ನು ವ್ಯರ್ಥ ಮಾಡದೇ ಮನೆಯಲ್ಲಿಯೇ ಚೆನ್ನಾಗಿ ಕಲಿಯಿರಿ. ಉತ್ತಮ ಅಂಕ ಗಳಿಸಿ, ನಿಮ್ಮ ಪೋಷಕರಿಗೆ ಹಾಗೂ ಕಲಿತ ಶಾಲೆಗೆ ಕೀರ್ತಿ ತರುವಂತಾಗಬೇಕು ಎಂದು ಕರೆ ನೀಡಿದ ಅವರು, ಪಾಠಗಳ ಬಗ್ಗೆ ಏನಾದರೂ ಸಂದೇಹಗಳಿದ್ದರೆ ನಿಮ್ಮ ತರಗತಿ ಶಿಕ್ಷಕರನ್ನು ಕೇಳಿ ಸಮಸ್ಯೆ ಬಗೆಹರಿಸಿ ಕೊಳ್ಳಿರಿ. ನಿಮ್ಮ ಮುಂದಿನ ವಿದ್ಯಾಭ್ಯಾಸ ಚೆನ್ನಾಗಿ ಆಗಲಿ ಎಂದು ಮಕ್ಕಳಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಶಾಲೆಯ ಪ್ರಾಥಮಿಕ ಹಾಗೂ ಸಿಬಿಎಸ್‌ಇ ವಿಭಾಗಕ್ಕೆ ನೂತನವಾಗಿ ವಿಭಾಗದ ಮುಖ್ಯಸ್ಥರಾಗಿ ವರ್ಗವಾಗಿ ಬಂದಂತಹ ಸಿಸ್ಟರ್ ಲಿಂಡಾ, ಸಿಸ್ಟರ್ ರೋಸಿಂತಾ ಅವರಿಗೆ ಶಾಲಾ ಆಡಳಿತ ಮಂಡಳಿ ಪರವಾಗಿ ಸ್ವಾಗತಿಸಲಾಯಿತು.
ಈ ಸಂದರ್ಭದಲ್ಲಿ ಸಿಬಿಎಸ್‌ಇ ವಿಭಾಗದ ಪ್ರಾಚಾರ್ಯೆ ಸಿಸ್ಟರ್ ಸಮಂತ, ಶಿಕ್ಷಕರಾದ ಅಮಲ, ರಾಗಿಣಿ, ಭಾಗ್ಯನಾಥನ್, ಕಿರಣ್, ಗೋವಿಂದಪ್ಪ, ಸ್ಟೀಫನ್, ರವೀಂದ್ರ ಸ್ವಾಮಿ, ಎಲಿಸಾ, ಅನುಷಾ, ಅಶ್ವಿನಿ, ರಜನಿ, ನಯನ, ರೀಟಾ, ಫಿಲೊಮಿನಾ ಸೇರಿದಂತೆ ವಿವಿಧ ವಿಭಾಗಗಳ ಶಿಕ್ಷಕರು ಭಾಗವಹಿಸಿ ದ್ದರು. ಶಾಲೆ ಆರಂಭದ ಹಿನ್ನಲೆ ಯಲ್ಲಿ ಮಕ್ಕಳಿಗೆ ಬಿಸಿಯೂಟ ದೊಂದಿಗೆ ಸಿಹಿ ವಿತರಿಸಲಾಯಿತು.